Nitya Bhavishya: ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಿ ಸಂತೋಷ ಪಡುವಿರಿ
ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 31ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಸುಕರ್ಮಾ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:46 ರಿಂದ 02:012ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಗುಳಿಕ ಕಾಲ 11:20 ರಿಂದ ಮಧ್ಯಾಹ್ನ 12:46ರ ವರೆಗೆ.
ಧನು ರಾಶಿ: ಇಂದು ಅವಿವಾಹಿತರು ವಿವಾಹದ ಬಗ್ಗೆ ಅಧಿಕ ಚಿಂತಿತರಾಗುವರು. ನಿಮ್ಮ ವೇತನದ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡುವಿರಿ. ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಿ ಸಂತೋಷಪಡುವಿರಿ. ನಿಮ್ಮ ಮಾತುಗಳು ಇತರರಿಗೆ ಇಷ್ಟವಾಗುವುದು. ಸಮಾರಂಭದಲ್ಲಿ ಭಾಗವಹಿಸಿ ಅನೇಕ ಅಪರೂಪದ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ಇಂದು ನೀವಂದುದುಕೊಂಡಷ್ಟು ಸಫಲತೆಯನ್ನು ಸಾಧಿಸಲಿದ್ದೀರಿ. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗಲಿದೆ. ಕುಶಲ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿರುವುದು.
ಮಕರ ರಾಶಿ: ನೀವು ಇಂದು ನಿಮ್ಮ ಕಾರ್ಯಗಳು ಅನುಭವ ರಹಿತವಾಗಿ ಇರಬಹುದು. ಇದು ನಿಮ್ಮ ಕಾರ್ಯವನ್ನು ಅಸಹಜವಾಗಿ ಪೂರೈಸುವುದು. ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಆಪ್ತತೆಯು ದೂರವಾಗಬಹುದು. ನಿಮ್ಮ ಬಗ್ಗೆ ನೀವು ಹೆಚ್ಚು ಗಮನ ಕೊಡುವಿರಿ. ಭೋಗವಸ್ತುಗಳಿಂದ ಅಧಿಕ ಸಂತೋಷವಾಗಲಿದೆ. ಇಂದು ದೂರ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಅಪರಿಚಿತರ ಮಾತು ನಿಮಗೆ ಸಮಾಧಾನವನ್ನು ಕೊಡಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಉದ್ಯೋಗದಲ್ಲಿ ಸಿಗುವ ಉನ್ನತ ಸ್ಥಾನಮಾನವನ್ನು ತಳ್ಳಿಹಾಕುವಿರಿ. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು.
ಕುಂಭ ರಾಶಿ: ಇಂದು ನಿಮ್ಮ ಮಕ್ಕಳ ಯಶಸ್ಸು ನಿಮಗೆ ಸಂತೋಷವನ್ನು ಕೊಡಬಹುದು. ನಿಮ್ಮ ಪ್ರಮುಖ ವ್ಯಾಪಾರ ಸಂಪರ್ಕಗಳನ್ನು ಅಭಿವೃದ್ಧಿ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ನೀವು ಎಲ್ಲಿಗಾದರೂ ದೂರದ ಪ್ರದೇಶಗಳಿಗೆ ವಿಹಾರಕ್ಕೆ ಹೋಗಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ವರ್ತನೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ನಿಮ್ಮ ತಂದೆಯ ಜೊತೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಆಡಿದ ಮಾತಿಗೆ ಪಶ್ಚಾತ್ತಾಪಪಡಬೇಕಾದೀತು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ಕೊಡುವರು. ಭೇಟಿಯಾಗದ ಜನರು ಅಪರೂಪಕ್ಕೆ ಸಿಕ್ಕಿಯಾರು. ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವುದೇ ನಿರ್ಬಂಧವಿಲ್ಲದೇ ಮಾಡುವಿರಿ.
ಮೀನ ರಾಶಿ: ನೀವು ಇಂದು ನಿಮ್ಮ ಪ್ರತಿಸ್ಪರ್ಧಿಗಳ ಎದುರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಇಂದಿನ ನಿಮ್ಮ ಆಲಸ್ಯದಿಂದ ಪ್ರಮುಖ ಕಾರ್ಯಗಳು ಪೂರ್ಣವಾಗದೇ ಹಾಗೆಯೇ ಉಳಿದುಕೊಳ್ಳಬಹುದು. ನಿಮ್ಮ ತಾಯಿಯ ಕಡೆ ಯಾರಿಗಾದರೂ ಅನಾರೋಗ್ಯವು ಅಧಿಕವಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗಮನಾರ್ಹವಾದ ತಯಾರಿ ಬೇಕಾದೀತು. ಕೆಲವು ಪ್ರಮುಖ ವ್ಯಕ್ತಿಗಳ ಯಶಸ್ಸು ನಿಮಗೆ ಹೆಚ್ಚು ಸ್ಫೂರ್ತಿ ನೀಡುತ್ತದೆ. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಷ್ಟವಿಲ್ಲದಿದ್ದರೂ ನೀವು ಹಿರಿಯರ ಮಾತನ್ನು ಕೇಳಬೇಕಾಗುವುದು. ಪ್ರೇಮಜೀವನಕ್ಕೆ ನಿಮಗೆ ಒಗ್ಗದು. ಬಂಧನದಂತೆ ಅನ್ನಿಸಬಹುದು. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಇನ್ನೊಬ್ಬರಿಗೂ ಸಂತೋಷವಾಗುವಂತೆ ಇರುವಿರಿ.