AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯವ, ಕಮಲ, ವಾಪಿ ಯೋಗದಲ್ಲಿ ಜನಿಸಿದವರು ಹೇಗಿರುತ್ತಾರೆ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಟ್ಟಿದವ ಭವಿಷ್ಯವು ಹೇಗಿರಲಿದೆ ಎನ್ನುವುದನ್ನು ತಿಳಿಸಿ, ಸಮಸ್ಯೆಗಳನ್ನು ಎದುರಿಸಲು ಪೂರ್ವ ತಯಾರಿಯನ್ನೂ ಸುಖದ ನಿರೀಕ್ಷೆಯನ್ನೂ ಮಾಡುವಂತೆ ತಿಳಿಸುತ್ತದೆ. ಜ್ಯೋತಿಷ್ಯ ವಿದ್ಯೆಯು ಕಣ್ಣಿನಂತೆ ಭೂತವನ್ನೂ ಭವಿಷ್ಯವನ್ನೂ ಕಾಣುವ ಕಣ್ಣು. ಯವ, ಕಮಲ, ವಾಪಿ ಯೋಗದಲ್ಲಿ ಜನಿಸಿದವರು ಹೇಗಿರುತ್ತಾರೆ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ? ನೋಡಿ.

ಯವ, ಕಮಲ, ವಾಪಿ ಯೋಗದಲ್ಲಿ ಜನಿಸಿದವರು ಹೇಗಿರುತ್ತಾರೆ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?
ಸಂಗ್ರಹ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ|

Updated on: Aug 31, 2023 | 7:33 AM

Share

ಜ್ಯೋತಿಷ್ಯ ಶಾಸ್ತ್ರದಲ್ಲಿ(Horoscope Prediction) ಹುಟ್ಟಿದವ ಭವಿಷ್ಯವು ಹೇಗಿರಲಿದೆ ಎನ್ನುವುದನ್ನು ತಿಳಿಸಿ, ಸಮಸ್ಯೆಗಳನ್ನು ಎದುರಿಸಲು ಪೂರ್ವ ತಯಾರಿಯನ್ನೂ ಸುಖದ ನಿರೀಕ್ಷೆಯನ್ನೂ ಮಾಡುವಂತೆ ತಿಳಿಸುತ್ತದೆ. ಜ್ಯೋತಿಷ್ಯ ವಿದ್ಯೆಯು ಕಣ್ಣಿನಂತೆ ಭೂತವನ್ನೂ ಭವಿಷ್ಯವನ್ನೂ ಕಾಣುವ ಕಣ್ಣು. ಇನ್ನು ಯವ, ಕಮಲ, ವಾಪಿ ಯೋಗದಲ್ಲಿ ಜನಿಸಿದವರು ಹೇಗಿರುತ್ತಾರೆ?  ಯವ, ಕಮಲ, ವಾಪಿ ಯೋಗಗಳು ಜಾತಕದಲ್ಲಿ ಹೇಗಿರುತ್ತದೆ ಮತ್ತು ಅದರಿಂದ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: Monthly Horoscope September 2023: ಸೆಪ್ಟೆಂಬರ್​ ಮಾಸ ಭವಿಷ್ಯ; ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು?

ಯವ ಯೋಗ :ಲಗ್ನದಲ್ಲಿ‌ ಮತ್ತು ಲಗ್ನದಿಂದ ಏಳನೇ ಸ್ಥಾನದಲ್ಲಿ ಪಾಪ ಗ್ರಹರಿದ್ದರೆ ಹಾಗೂ ನಾಲ್ಕು ಮತ್ತು ಹತ್ತನೇ ಸ್ಥಾನದಲ್ಲಿ ಶುಭ ಗ್ರಹರಿದ್ದರೆ ಈ ಯೋಗವು ಆಗುವುದು.

ಯೋಗ ಫಲ : ಶಕ್ತಿಶಾಲಿಯೂ ಮಧ್ಯ ವಯಸ್ಸಿನಲ್ಲಿ ಹೆಚ್ಚು ಸುಖವನ್ನು ಪಡೆಯುವವನೂ ಆಗುವನು.

ಕಮಲ ಯೋಗ : ಲಗ್ನ ಮತ್ತು ಲಗ್ನದಿಂದ ನಾಲ್ಕು, ಏಳು ಹಾಗೂ ಹತ್ತನೇ ಸ್ಥಾನದಲ್ಲಿ ಕಮಲ ಯೋಗವು ಆಗುವುದು.

ಯೋಗ ಫಲ : ಕೀರ್ತಿಯನ್ನು ಸಂಪಾದಿಸುವನು, ಅತಿಯಾದ ಸುಖದಲ್ಲಿ ಇರುವನು ಮತ್ತು ಉತ್ತಮ ಗುಣಗಳಿಂದ ಕೂಡಿರುವನು.

ವಾಪಿ ಯೋಗ : ಪಣಪರ ಸ್ಥಾನದಲ್ಲಿ ಅಂದರೆ ಎರಡು, ಐದು, ಒಂಭತ್ತು ಮತ್ತು ಹನ್ನೊಂದು ಅಥವಾ ಆಪೋಕ್ಲಿಮ ಎಂದರೆ ಮೂರು, ಆರು, ಎಂಟು, ಹನ್ನೆರಡು ಈ ಸ್ಥಾನಗಳಲ್ಲಿ ಎಲ್ಲ ಗ್ರಹರೂ ಇದ್ದರೆ ವಾಪಿ ಯೋಗ.

ಯೋಗ ಫಲ : ಹಣವನ್ನು ಸಂಪಾದಿಸಿ ಅದನ್ನು ಗೌಪ್ಯವಾಗಿ ಇಡುವರು. ಅವರೂ ಬಳಸುವುದಿಲ್ಲ, ದಾನವಾಗಿಯೂ ಕೊಡುವ ಮನಸ್ಸೂ ಇರದು.

ಈ ಯೋಗಗಳು ಸಮಯ ಬಂದಾಗ ಫಲವನ್ನು ಕೊಡುವುದು ಅಥವಾ ಕೊಡದೆಯೂ ಹೋಗುವ ಸಾಧ್ಯತೆ ಇದೆ. ಇದನ್ನು ಜಾತಕ ನೋಡಿ ಪರಿಶೀಲಿಸಬೇಕಾದ ಭಾಗವೂ ಇರಲಿದೆ.

ಇನ್ನಷ್ಟು ಜ್ಯೋತಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?