Monthly Horoscope September 2023: ಸೆಪ್ಟೆಂಬರ್​ ಮಾಸ ಭವಿಷ್ಯ; ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು?

ಸೆಪ್ಟೆಂಬರ್​ ತಿಂಗಳ ದ್ವಾದಶ ರಾಶಿ ಭವಿಷ್ಯ: 2023ರ ಸೆಪ್ಟೆಂಬರ್​ ತಿಂಗಳಲ್ಲಿ ಯಾವ ರಾಶಿಗಳ ಮೇಲೆ ಪ್ರಭಾವವನ್ನು ಬೀರಲಿದೆ..? ಸೆಪ್ಟೆಂಬರ್​ ನಲ್ಲಿ ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು? ಸೆಪ್ಟೆಂಬರ್​ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ತಿಳಿಯಿರಿ.

Monthly Horoscope September 2023: ಸೆಪ್ಟೆಂಬರ್​ ಮಾಸ ಭವಿಷ್ಯ; ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು?
ಸಂಗ್ರಹ ಚಿತ್ರImage Credit source: iStock Photo
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Aug 31, 2023 | 7:18 AM

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಅದರಂತೆ ಸೆಪ್ಟೆಂಬರ್​ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ನೀಡಲಾಗಿದೆ. ಹಾಗಾದ್ರೆ, ಸೆಪ್ಟೆಂಬರ್​ ತಿಂಗಳ ನಿಮ್ಮ ರಾಶಿ ಭವಿಷ್ಯದಲ್ಲಿ ಏನು ಇದೆ ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ ರಾಶಿ :

ಈ ತಿಂಗಳನ್ನು ನೀವು ಸಮರ್ಥವಾಗಿ ಎದುರಿಸುವಿರಿ.‌ ಕೆಲವು ದುಃಖದ ವಾರ್ತೆಗಳು ನಿಮ್ಮನ್ನು ವಿಚಲಿತಗೊಳಿಸಬಹುದು. ಷಷ್ಠಕ್ಕೆ ಸೂರ್ಯನ ಪ್ರವೇಶವಾಗಲಿದ್ದು ಆರೋಗ್ಯವು ದುರ್ಬಲವಾಗಬಹುದು. ಯಾರ ಜೊತೆಯೂ ಮಾತನಾಡಲು ನೀವು ಇಷ್ಟಪಡುವುದಿಲ್ಲ. ಹಣದ ಮೇಲೇ ಆಸಕ್ತಿಯು ಕಡಿಮೆ ಆಗುವುದು. ಹೊಸ ಯೋಜನೆಯನ್ನು ಆರಂಭಿಸಲು ನಿಮಗೆ ಆತಂಕವು ಇರಲಿದೆ‌. ನಿಮ್ಮ ನಿಲುವನ್ನು ನೀವು ಬಿಡದೇ ಇರುವುದು ಹಲವರಿಗೆ ಬೇಸರವಾಗಬಹುದು. ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಂಡು ಪುನಃ ಹುಡುಕಿಕೊಳ್ಳುವಿರಿ. ಶಿವನ ಆರಾಧನೆಯನ್ನು ಸೋಮವಾರದಂದು ಮಾಡಿ.

ವೃಷಭ ರಾಶಿ :

ಈ ತಿಂಗಳು ಕೆಲಸದಲ್ಲಿ ವಿವಿಧ ಬದಲಾವಣೆಗಳು ಆಗುವುದು. ಹೆಚ್ಚಿನ ಅಧಿಕಾರವನ್ನು ನೀವು ನಿರೀಕ್ಷಿಸಬಹುದು. ಮೇಲಾಧಿಕರಿಗಳಿಗೆ ನಿಷ್ಠೆಯನ್ನು ತೋರಿಸಬೇಕಾದೀತು. ಕುಟುಂಬ ಅರೋಗ್ಯದ ಕಡೆ ಹೆಚ್ಚು ಗಮನವಿರಲಿ. ನಿಮ್ಮ ಮೇಲಿನ ಅಪವಾದವನ್ನು ತೆಗೆದುಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳಬೇಕಾಗುವುದು. ಧಾರ್ಮಿಕ ಪ್ರವಾಸವು ನಮಗೆ ಖುಷಿಯನ್ನು ಕೊಡುವುದು. ಆಹಾರದ ವ್ಯತ್ಯಾಸದಿಂದ ಆರೋಗ್ಯವು ಹದ ತಪ್ಪಬಹುದು. ಈ ತಿಂಗಳಲ್ಲಿ ವೃತ್ತಿಯನ್ನು ಹಾಗೂ ಕುಟುಂಬವನ್ನೂ ಸರಿದೂಗಿಸುವುದು ಕಷ್ಟವಾದೀತು. ಮಕ್ಕಳ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಲಿದೆ.

ಮಿಥುನ ರಾಶಿ :

ಈ ತಿಳಗಳು ನಿಮಗೆ ಅನಿರೀಕ್ಷಿತ ಒತ್ತಡಗಳು ಬರಲಿವೆ. ಉದ್ಯೋಗವೇ ಸಾಕು ಎನ್ನುವಷ್ಟು ಮಾನಸಿಕ ಹಿಂಸೆಯಾಗಲಿದೆ. ಹೊಸದಾಗಿ ಸೇರಿದವರಿಗೆ ಕಲಿಯಬೇಕಾದ ಕೆಲಸಗಳು ಬಹಳ ಇರಲಿದೆ. ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಇರಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಓದಿನಲ್ಲಿ ಆಸಕ್ತಿಯು ಹೆಚ್ಚಿರಲಿದೆ. ತಿಂಗಳ ಆರಂಭದಲ್ಲಿ ಅನಗತ್ಯ ಖರ್ಚನ್ನು ನಿಲ್ಲಿಸಿದರೆ ತಿಂಗಳ ಕೊನೆಗೆ ಇದು ಸರಿಯಾಗುವುದು. ಸ್ವಯಂ ಸೇವೆಗೆ ನಿಮ್ಮ ಹೆಚ್ಚಿನ ಸಮಯವು ಇರಲಿದೆ. ಹೂಡಿಕೆಯಯಿಂದ ಲಾಭವನ್ನು ಪಡೆಯುವಿರಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಮನಸ್ಸು ಇರಲಿದೆ. ವಿದೇಶದಿಂದ ಬಂಧುಗಳ ಆಗಮನವಾಗುವುದು.

ಕಟಕ ರಾಶಿ :

ಉದ್ಯೋಗದ ಸ್ಥಳದಲ್ಲಿ ನಿಮ್ಮ ಅವಶ್ಯಕತೆಯನ್ನು ನೀವು ಹತ್ತಿರದಿಂದ ಮನಗಾಣುವಿರಿ. ವೃತ್ತಿಯನ್ನು ಬದಲಿಸಿ, ಹೊಸ ವೃತ್ತಿಯನ್ನು ಹುಡುಕಲು ಓಡಾಟ ಮಾಡುವಿರಿ‌. ಉದ್ಯಮದ ನಿಮಿತ್ತ ಹೊರಗೆ ಪ್ರಯಾಣ ಪ್ರಯಾಣವು ಲಾಭದಾಯಕವಾಗಿರುತ್ತದೆ. ದೊಡ್ಡ ಮಟ್ಟದ ಲಾಭಕ್ಕಾಗಿ ನೀವು ಹೆಚ್ಚು ಶ್ರಮಪಡಬೇಕಾಗಬಹುದು. ಪ್ರೀತಿಯ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾದೀತು. ಆದಾಯದ ಮೂಲವು ಅನೇಕ ಇದ್ದರೂ ಒಂದರಿಂದ ಮಾತ್ರ ಹೆಚ್ಚು ಲಾಭವು ಆಗಲಿದೆ. ಈ ತಿಂಗಳ ಪ್ರತಿ ಶುಕ್ರವಾರದಂದು ಲಕ್ಷ್ಮೀನಾರಾಯಣರಿಗೆ ಪೂಜೆಯನ್ನು ಸಲ್ಲಿಸಿ. ವಿಶೇಷವಾಗಿ ಕುಲದೇವರಾದ ದುರ್ಗೆಯನ್ನು ಆರಾಧಿಸಿ.

ಸಿಂಹ ರಾಶಿ :

ಸಪ್ಟೆಂಬರ್ ಮಾಸದಲ್ಲಿ ನಿಮಗೆ ಮಿಶ್ರಫಲಗಳೇ ಹೆಚ್ಚಿರಲಿವೆ. ವೃತ್ತಿಗೆ ಸಂಬಂಧಿಸಿದಂತೆ ಹೆಚ್ಚು ಅನುಕೂಲಕರವಾಗಿಲ್ಲ ಈ ತಿಂಗಳು. ಉದ್ವೇಗಕ್ಕೆ ಹೆಚ್ಚು ಬಲಿಯಾಗುವ ಸಾಧ್ಯತೆ ಇರಲಿದೆ. ಇದು ನಿಮ್ಮ ವ್ಯಕ್ತಿತ್ವದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನಿಮ್ಮ ಸಹೋದ್ಯೋಗಿಗಳ ಜೊತೆ ವಾಗ್ವಾದವು ಆಗುವುದು. ವೈಯಕ್ತಿಕ ಕಾರಣಗಳಿಂದ ಆರ್ಥಿಕ ನಷ್ಟವು ಆಗಲಿದೆ. ಆಸ್ತಿಯ ವಿಚಾರದಲ್ಲಿ ಕಲಹವಾಗಿ ಕೊನೆಗೂ ಹಂಚಿಕೆಯಾಗಿ ಎಲ್ಲರೂ ದೂರವಾಗುವರು. ಯಾವ ಸಂಬಂಧವನ್ನೂ ನೀವು ಉಳಿಸಿಕೊಳ್ಳಲು ಸಮರ್ಥರಾಗುವುದಿಲ್ಲ. ನಿಮ್ಮ ಸಂಗಾತಿಯು ವಿವಾಹಕ್ಕೆ ಒಪ್ಪದೇ ಇರುವುದು ನಿಮಗೆ ಅನುಮಾನ ಬರುವುದು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಕನ್ಯಾ ರಾಶಿ :

ಈ ತಿಂಗಳು ನಿಮ್ಮ ಬಂಧುಗಳಿಂದ ಆರ್ಥಿಕ ಸಹಾಯವನ್ನು ಪಡೆದು ಅವರಿಂದ ಅವಮಾನಿತರಾಗುವಿರಿ. ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಆಲೋಚಿಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಸಂಬಂಧವು ಆಪ್ತವಾಗುವುದು. ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಲು ನಿಮಗೆ ಅವಕಾಶಗಳು ಸಿಗುತ್ವೆ. ಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸುವಿರಿ. ಈ ತಿಂಗಳು ನೀವು ಆದಷ್ಟು ಸಹನೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು. ಸಂಗಾತಿಯ ಜೊತೆ ಆಗಾಗ ಬರುವ ವೈಮನಸ್ಯವು ನಿಮ್ಮನ್ನು ಹತಾಶಗೊಳಿಸುವುದು. ಮಧ್ಯವರ್ತಿಗಳ ಜೊತೆ ವ್ಯವಹಾರವನ್ನು ಮಾಡಿ ನಿಮಗೆ ನಷ್ಟವಾಗಲಿದೆ. ನಿಮಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾಗಬಹುದು.

ತುಲಾ ರಾಶಿ :

ಸಪ್ಟೆಂಬರ್ ತಿಂಗಳು ಸ್ವಲ್ಪ ಕಿರಿಕಿರಿಯ ತಿಂಗಳಾಗಲಿದೆ. ನಿಮ್ಮ ವಿರೋಧಿಗಳು ನಿಮಗೆ ನಾನಾ ಬಗೆಯ ತೊಂದರೆಯನ್ನು ಕೊಡಬಹುದು. ಹಿರಿಯರಿಂದ ನಿಮ್ಮ ಸಮಯಪ್ರಜ್ಞೆಗೆ ಪ್ರಂಶಸೆಯು ಸಿಗುವುದು.‌ ನಿಮ್ಮ ಶ್ರಮದ ಫಲವು ನಿಮಗೆ ಈ ತಿಂಗಳಲ್ಲಿ ಗೊತ್ತಾಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಹೆಚ್ಚುವುದು. ಹೂಡಿಕೆಯಲ್ಲಿ ಉತ್ತಮ ಲಾಭವು ಸಿಗಬಹುದು. ಈ ತಿಂಗಳಲ್ಲಿ ನೀವು ಗಣನೀಯವಾದ ಆರ್ಥಿಕಲಾಭವನ್ನು ಗಳಿಸುವಿರಿ. ಆಸ್ತಿಯ ಮಾರಾಟಕ್ಕೆ ಕೆಲವು ತೊಂದರೆಗಳು ಬರಬಹುದು. ಅವಿವಾಹಿತರಿಗೆ ಈ ತಿಂಗಳು ಶುಭ. ವೃತ್ತಿಯಲ್ಲಿ ಪ್ರೇಮಪಾಶಕ್ಕೂ ಬೀಳುವ ಸಂದರ್ಭ ಬರಲಿದೆ. ಶಿವ ಹಾಗೂ ಸುಬ್ರಹ್ಮಣ್ಯರ ಆರಾಧನೆಯಿಂದ ಬರಲಿರುವ ಸಂಕಷ್ಟವನ್ನು ದೂರ ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ :

ಈ ತಿಂಗಳಲ್ಲಿ ದಶಮದಲ್ಲಿ ಇರುವ ರವಿಯು ಏಕಾದಶಸ್ಥಾನಕ್ಕೆ ಬರಲಿದ್ದಾನೆ. ಕುಜ ಹಾಗು ರವಿಯರ ಸಂಯೋಗವು ಆಗಲಿದೆ. ಕೃಷಿಯಲ್ಲಿ ಉತ್ತಮ ಲಾಭವನ್ನು ನೀವು ಗಳಿಸುವಿರಿ. ವೃತ್ತಿಯಲ್ಲಿ ಸ್ಥಾನವು ಬದಲಾವಣೆಯಾಗಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಳ್ಳುವಿರಿ. ನಿಮಗೆ ವಹಿಸಿದ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸುವಿರಿ. ಈ ತಿಂಗಳಲ್ಲಿ ಮನೆಯ ಅಗತ್ಯ ವಸ್ತುಗಳಿಗೆ ಖರ್ಚು ಮಾಡುವಿರಿ. ಈ ತಿಂಗಳು ಹೆಚ್ಚು ನಿಮ್ಮ ಪ್ರಯಾಣವು ಸುಖಕರವಾಗಲಿದೆ. ಹೊರಗಿನ ಆಹಾರವನ್ನು ಈ ತಿಂಗಳು ಹೆಚ್ಚು ಸೇವಿಸುವಿರಿ. ಪ್ರೀತಿಯಿಂದ ಎಲ್ಲರನ್ನೂ ವಶಪಡಿಸಿಕೊಳ್ಳುವಿರಿ. ತಿಂಗಳ ಕೊನೆಯ ಭಾಗದಲ್ಲಿ ಹೆಚ್ಚಿನ ನೆಮ್ಮದಿಯು ಸಿಗಲಿದೆ. ಲಕ್ಷ್ಮೀ ಸಹಿತನಾದ ನಾರಾಯಣನನ್ನು ಆರಾಧಿಸಿ.

ಧನು ರಾಶಿ :

ಈ ಮಾಸದಲ್ಲಿ ಶ್ರಾವಣ ಹಾಗೂ ಭಾದ್ರಪದ ಮಾಸಗಳು ಇರಲಿದ್ದು ದೇವತಾಕರ್ಯಗಳಿಗೆ ಹೆಚ್ಚು ಸೂಕ್ತ ಸಮಯವು ಇದಾಗಿರಲಿದೆ. ಧಾರ್ಮಿಕ ಶ್ರದ್ಧೆಯು ಹೆಚ್ಚು ಫಲಿಸಬಹುದು. ಉದ್ಯೋಗದಲ್ಲಿ ಆಸಕ್ತಿ ಕಡಿಮೆ ಇರಲಿದೆ. ಆಲಸ್ಯವನ್ನು ಹೆಚ್ಚು ಮೈಗೂಡಿಸಿಕೊಳ್ಳುವಿರಿ. ಉದ್ಯೋಗಸ್ಥರ ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧವು ನಿಮಗೆ ಉಪಯೋಗಕ್ಕೆ ಬಲಿದೆ. ಸೂರ್ಯನ ದಶಮಸ್ಥಾನಕ್ಕೆ ಬರಲಿದ್ದಾನೆ. ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಸಿಗಲಿದೆ. ಸಾಲವನ್ನು ಬೇಗ ತೀರಿಸುವ ಮಾತನ್ನು ಕೊಟ್ಟು ಪಡೆಯುವಿರಿ. ಕಾನೂನು ವಿರುದ್ಧ ಕಾರ್ಯದಲ್ಲಿ ತೊಡಗುವಿರಿ. ವೇಗವಾಗಿ ಹಣವನ್ನು ಸಂಪಾದನೆಯನ್ನು ಮಾಡುವ ಯೋಜನೆ ಇರಲಿದೆ.

ಮಕರ ರಾಶಿ :

ಈ ತಿಂಗಳು ಅನೇಕ ಶುಭಸಮಾಚಾರಗಳು ಇರಲಿದೆ. ಕೆಲಸದ ವೇಗವನ್ನು ನೀವು ಹೆಚ್ಚಿಸಿಕೊಂಡು ನಿಮ್ಮ ಜವಾಬ್ದಾರಿಗಳನ್ನು ಮುಗಿಸಿಕೊಳ್ಳುವಿರಿ. ನಿಮ್ಮ ಕಾರ್ಯ ನಿರ್ವಹಣೆ ಮತ್ತು ಕಠಿಣ ಪರಿಶ್ರಮದಿಂದ ಪ್ರಶಂಸೆಯು ಸಿಗಲಿದೆ. ನಿಮ್ಮ ಹಳೆಯ ಸಾಲಗಳನ್ನು ತೀರಿಸಿಕೊಳ್ಳುವಿರಿ. ಈ ತಿಂಗಳಲ್ಲಿ ಹಣದ ಖರ್ಚನ್ನು ನಿಲ್ಲಿಸಿ ಗಳಿಸಿಡಲು ಪ್ರಯತ್ನಿಸಿ. ಸಹೋದರಿಗೆ ಆರ್ಥಿಕ ಸಹಾಯಕ್ಕಾಗಿ ಮಾಡಬೇಕಾಗಿಬರಬಹುದು. ವಿವಾಹಿತರಿಗೆ ಈ ತಿಂಗಳು ಅನುಕೂಲವಾಗಿ ಇರಲಿದೆ. ಸೂರ್ಯನು ನವಮಸ್ಥಾನಕ್ಕೆ ಹೋಗುವ ಗೌರವಗಳು ನಿಮಗೆ ಸಿಗಲಿದೆ. ಅಧಿಕಾರಿಗಳಿಂದ ನಿಮಗೆ ಆಗಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಹಾವಿಷ್ಣುವಿನ ಆರಾಧನೆಯನ್ನು ಪ್ರತಿ ಬುಧವಾರದಂದು ಮಾಡಿ‌.

ಕುಂಭ ರಾಶಿ :

ಸೆಪ್ಟೆಂಬರ್‌ ತಿಂಗಳು ನಿಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿನ ಪರಿವರ್ತನೆ ಆಗಲಿದೆ. ಉದ್ಯಮದಲ್ಲಿ ಒಮ್ಮೆಲೇ ಲಾಭವೆನಿಸಬಹುದು. ಅನಂತರ ನಿಮಗೆ ಕಷ್ಟವಾಗುವುದು. ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಇರಲಿದೆ. ವಿವಾದಗಳಲ್ಲಿ ನೀವು ಸಿಕ್ಕಿಕೊಳ್ಳುವಿರಿ. ನಿಮಗೆ ಆಗದವರ ಬಗ್ಗೆ ಸಲ್ಲದ ಆರೋಪವನ್ನು ಮಾಡುವಿರಿ. ಇದರಿಂದ ನಿಮ್ಮ ಬಗ್ಗೆ ಕೆಟ್ಟ ಭಾವವು ಬರಬಹುದು. ವಿದೇಶ ಪ್ರಯಾಣವು ರದ್ದಾಗುವ ಸಾಧ್ಯತೆ. ಕೆಲವರು ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವರು. ಈ ತಿಂಗಳ ಹಣಕಾಸಿನ ವ್ಯವಹಾರವು ಬಹಳ ಬಡವಾಗಿರುವುದು. ಯಾರಿಗಾದರೂ ಸಾಲವನ್ನು ನೀಡುವುದಾಗಿ ಮಾತು ಕೊಟ್ಟಿದ್ದರೆ ಅದನ್ನು ತಪ್ಪಿಸಿ. ಕುಟುಂಬ ಖರ್ಚು ಹೆಚ್ಚಾಗಬಹುದು. ತಂದೆಯ ಅನಾರೋಗ್ಯದ ಚಿಕಿತ್ಸೆಯನ್ನು ಮಾಡಿಸಬೇಕಸದೀತು. ಸಂಗಾತಿಯ ಮೇಲೆ ಹೆಚ್ಚು ಮುನಿಸಿಕೊಳ್ಳುವಿರಿ.

ಮೀನ ರಾಶಿ :

ಸಪ್ಟೆಂಬರ್ ಮಾಸವು ಶುಭಾಶುಭ ಮಿಶ್ರಣದಿಂದ ಕೂಡಿದ ಮಾಸವಾಗಿದೆ. ಉದ್ಯೋಗದ ದೃಷ್ಟಿಯಿಂದ ನೋಡುವುದಾದರೆ ನಿಮಗೆ ಅನುಕೂಲಕರವಾದ ತಿಂಗಳು ಇದು. ನಿಮ್ಮ ಸಂಗಾತಿಯ ಬೆಂಬಲವೂ ನಿಮಗೆ ಸಿಗಲಿದೆ. ವ್ಯಾಪಾರಸ್ಥರು ವ್ಯವಹಾರದ ಕಡೆಗೆ ಹೆಚ್ಚಿನ ಗಮನ ಕೊಟ್ಟಲು ಅಭಿವೃದ್ಧಿಯನ್ನು ಪಡೆಯಬಹುದಾಗಿದೆ. ನಿರುದ್ಯೋಗಿಗಳು ಇಷ್ಟಪಟ್ಟ ಕೆಲಸವನ್ನು ಪಡೆಯಲು ಶ್ರಮಿಸಬೇಕಾಗುವುದು. ಈ ತಿಂಗಳಲ್ಲಿ ಆರ್ಥಿಕತೆಯ ಏರಿಳಿತಗಳು ಹೆಚ್ಚು ಇರಲಿದೆ. ಇದೇ ಸಮಯದಲ್ಲಿ ವಂಚನೆಗೂ ಗುರಿಯಾಗಬಹುದು. ಆದಷ್ಟು ಎಚ್ಚರಿಕೆಯಿಂದ ಇರಿ. ಸಂಗಾತಿಯ ಜೊತೆ ನಿಮ್ಮ ಕೆಲಸಗಳನ್ನು ಮಾಡಿ. ಸೂರ್ಯನ ಮಂಗಳನ ಜೊತೆ ಸಪ್ತಮದಲ್ಲಿ ಇರುವನು. ವಿವಾಹಕ್ಕೆ ಪ್ರತಿಬಂಧಕಗಳು ಬರಬಹುದು.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು