AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರಿಗೆ ಅತಿಯಾದ ಆಸೆ ಒಳ್ಳೆಯದಲ್ಲ, ನೀವು ನೋಡುವ ದೃಷ್ಟಿ ಬದಲಾಗುವುದು

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರಿಗೆ ಅತಿಯಾದ ಆಸೆ ಒಳ್ಳೆಯದಲ್ಲ, ನೀವು ನೋಡುವ ದೃಷ್ಟಿ ಬದಲಾಗುವುದು
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 31, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 31 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಅತಿಗಂಡ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 ರಿಂದ ಮಧ್ಯಾಹ್ನ 11:00ರ ವರೆಗೆ.

ಮೇಷ ರಾಶಿ: ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿ ಯಾವ ಪ್ರಯೋಜನವೂ ಆಗದು. ಹೊಸತನ್ನು ರೂಢಿಸಿಕೊಳ್ಳಲು ಬಯಸುವಿರಿ. ಅಧಿಕ ಲಾಭದಿಂದ ಅತಿಯಾದ ಸಂತೋಷವಾಗುವುದು. ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವಾಗುವರು. ಎಷ್ಟೇ ಕೆಲಸವಿದ್ದರೂ ಅದನ್ನು ಸಮಾಧಾನ ಚಿತ್ತದಿಂದ ಪಡೆಯುವಿರಿ. ಸಿಕ್ಕ ಅವಕಾಶಗಳನ್ನು ನೀವು ಯೋಗ್ಯರೀತಿಯಿಂದ ಬಳಸಿಕೊಳ್ಳುವಿರಿ. ಅಮೂಲ್ಯವಾದ ವಸ್ತುವೊಂದು ಕಳೆದುಕೊಳ್ಳುವಿರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯು ಕಾಣಿಸಿಕೊಳ್ಳುವುದು. ಮನೆಮದ್ದಿನಿಂದಲೇ ಅದು ಕಡಿಮೆ ಆಗಬಹುದು. ಪ್ರಯತ್ನಿಸಿ.

ವೃಷಭ ರಾಶಿ: ಸಮಯಪ್ರಜ್ಞೆಯಿಂದ ನೀವು ಸೂಕ್ತವಾದ ಮಾತುಗಳನ್ನು ಆಡುವಿರಿ. ನಿಮ್ಮೊಳಗಿನ ಭೀತಿಯನ್ನು ನೀವು ಯಾರೊಂದಿಗಾದರೂ ಹೇಳಿಕೊಳ್ಳಿ. ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಾಗಲಿದೆ. ಪ್ರೀತಿಯು ಸಿಗದೇ ನೀವು ಒದ್ದಾಡುವಿರಿ. ಕೊಟ್ಟ ಹಣವನ್ನು ಪುನಃ ಹಿಂದಿರುಗಿಸಿ ಮಾತನ್ನು ಉಳಿಸಿಕೊಳ್ಳಿ. ಉದ್ಯೋಗಕ್ಕೆ ಸಂಬಂಧಿಸಿದ ಚರ್ಚೆಗಳ ಮೂಲಕ ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ವೃತ್ತಿಯು ನಿಮಗೆ ನೆಮ್ಮದಿಯನ್ನು ಕೊಟ್ಟಿದೆ. ಅದೇ ನಿಮ್ಮ ಬಲವೂ ಆಗಿರಲಿದೆ. ನಿಮ್ಮ ಊಹೆಯು ಇಂದು ಸತ್ಯವಾಗುವುದು.

ಮಿಥುನ ರಾಶಿ: ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವನ್ನು ನೀವು ಕಳೆದುಕೊಳ್ಳುವಿರಿ. ಅಪರಿಚಿತರ ಸಲಹೆಗಳು ಸೂಕ್ತ ಎಂದೆನಿಸಬಹುದು. ಎಲ್ಲರನ್ನೂ ನೀವು ನೋಡುವ ದೃಷ್ಟಿಯು ಬದಲಾಗುವುದು. ನೀವಿಟ್ಟ ನಂಬಿಕೆಯನ್ನು ನಿಮ್ಮವರು ಉಳಿಸಿಕೊಳ್ಳುವರು. ಇಂದು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಸಿಗಲಿದೆ. ಸಂಗಾತಿಯ ಜೊತೆ ಕುಳಿತು ಭವಿಷ್ಯವನ್ನು ಚಿಂತಿಸುವಿರಿ. ದೈವಭಕ್ತಿಯಿಂದ ನಿಮಗೆ ಸಮಾಧಾನವು ಸಿಗಲಿದೆ. ಕಷ್ಟಗಳು ಮೋಡಗಳಂತೆ ಒಂದೇ‌ ಕಡೆ ನಿಲ್ಲದೇ ಚಲಿಸುವುವು. ಅಧಿಕ ದಾಹವು ಇರಲಿದೆ.

ಕಟಕ ರಾಶಿ: ಇಂದು ನೀವು ಮನೆಯನ್ನು ಶುದ್ಧ ಮಾಡುವಲ್ಲಿ ಆಸಕ್ತರಾಗಿರುವಿರಿ. ಸಣ್ಣ ಉದ್ಯೋಗಕ್ಕೂ ಇಂದು ಅಲ್ಪ ಲಾಭವಾಗುವುದು. ಉದ್ಯೋಗದ ನಿಮಿತ್ತ ಸುತ್ತಟವು ಅನಾರೋಗ್ಯಕ್ಕೆ ಕಾರಣವಾಗಬಹುದು. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗವನ್ನು ಉಂಟುಮಾಡಬಹುದು. ಕಬ್ಬಿಣದ ವ್ಯಾಪರವು ನಿಮಗೆ ಲಾಭವನ್ನು ತಂದುಕೊಡುವುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಸಬಹುದು. ಆಪ್ತರನ್ನು ಕ್ಷುಲ್ಲಕ ಕಾರಣಕ್ಕೆ ದೂರಮಾಡಿಕೊಂಡು ಸಂಕಟಪಡುವಿರಿ. ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಅಲ್ಪದೂರದಲ್ಲಿ ಇರುವಿರಿ. ಪ್ರಾಣಾಂತಿಕವಾದ ನೋವು ಕಾಣಿಸಿಕೊಂಡೀತು.

ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?