ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಲ್ಲಿ ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮನ ಜನ್ಮ ದಿನವಾಗಿ ರಾಮ ನವಮಿಯನ್ನು ಆಚರಿಸಲಾಗುವುದು. ರಾಮ ನವಮಿ ಈ ವರ್ಷ ಮಾರ್ಚ್ 30ಕ್ಕೆ ಬಂದಿದೆ. ಈ ದಿನ ಭಕ್ತರು ಉಪವಾಸವಿದ್ದು, ರಾಮನ ಮಂತ್ರಗಳನ್ನು ಪಠಿಸಿ ರಾಮ ನವಮಿಯನ್ನು ಆಚರಿಸುತ್ತಾರೆ. ರಾಮನ ದೇವಸ್ಥಾನದಲ್ಲಿ ಹೂವಿನ ಅಲಂಕಾರ, ವಿಶೇಷ ಪೂಜೆಗಳು ನೆರವೇರುತ್ತವೆ. ಇನ್ನು ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ಸಾವಿರಾರು ಲಕ್ಷ ದೀಪಗಳನ್ನು ಬೆಳಗಿ ಸಂಭ್ರಮಿಸಲಾಗುತ್ತೆ. ರಾಮ, ಸೀತಾದೇವಿ, ಹನುಮಂತ, ಲಕ್ಷ್ಮಣನ ವೇಷ ಧರಿಸಿ ರಥಯಾತ್ರೆ ಮಾಡಲಾಗುತ್ತೆ.
ರಾಮ ನವಮಿ ತಿಥಿ ಪ್ರಾರಂಭ: ಮಾರ್ಚ್ 29 ರಾತ್ರಿ 09:07ಕ್ಕೆ
ರಾಮ ನವಮಿ ತಿಥಿ ಮುಕ್ತಾಯ: ಮಾರ್ಚ್ 30 ರಾತ್ರಿ 11:30ಕ್ಕೆ
ಶ್ರೀ ರಾಮನನ್ನು ಮನೆದೇವರಾಗಿ ಪಡೆದವರು ರಾಮ ನವಮಿಯನ್ನು 9 ದಿನಗಳ ಕಾಲ ಆಚರಿಸುತ್ತಾರೆ. ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ. ಹೀಗೆ 9 ದಿನದ ರಾಮನ ಉತ್ಸವ ಆಚರಿಸಲಾಗುತ್ತದೆ. ಹಾಘೂ ಈ ದಿನದಂದು ರಥಯಾತ್ರೆ ಮಾಡಿ ಬೀದಿ ಬೀದಿಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಹಂಚಲಾಗುತ್ತೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡಲಾಗುತ್ತೆ. ಮತ್ತೊಂದು ವಿಶೇಷವೆಂದರೆ, ರಾಮನಾಮ ಬರೆಯುವುದು. ರಾಮನಾಮ ಜಪಿಸಿದರೆ ರಾಮ ನಮ್ಮನ್ನು ಸಂರಕ್ಷಿಸುತ್ತಾನೆಂಬ ನಂಬಿಕೆ ಇದೆ.
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ
ಆರ್ತಾನಾಮಾರ್ತಿಹಂತಾರಂ ಬೀತಾನಂ ಭೀತಿನಾಶಂ
ದ್ವಿಷದಾಂ ಕಾಲದಂಡಂ ಚ ರಾಮಚಂದ್ರಂ ನಮಾಮ್ಯಹಂ
ನಮಃ ಕೋದಂಡಹಸ್ತಾಯ ಸಂಧೀಕೃತಶರಾಯ ಚ
ಖಂಡಿತಾಲಿಲದೈತ್ಯಾಯ ರಾಮಾಯಾಪನ್ನಿವಾರಿಣೇ
ಅಗ್ರತಃ ಬೃಷ್ಠತಶ್ಚೈವ ಪಾರ್ಶ್ವತಶ್ಚ ಮಹಾಬಲೌ.
ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮ ಲಕ್ಷ್ಮಣ್
ಸನ್ನದ್ಧ ಕವಚೀ ಖಡ್ಗೀ ಚಾಪಬಾಣಧರೋ ಯುವಾ
ಗಚ್ಚನ್ ಮಮಾಗ್ತೋ ನಿತ್ಯಂ ರಾಮಃ ಪಾತು ಸಲಕ್ಷಣಃ
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಯ ನಾಥಯ ಸೀತಾಯಾಃ ಪತಯೇ ನಮಃ
ಮತ್ತಷ್ಟು ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ