Shiva Puja on Mondays: ಸೋಮವಾರವೇ ಶಿವನನ್ನು ಪೂಜಿಸಲು ಕಾರಣವೇನು? ಇಲ್ಲಿದೆ ಪುರಾಣ ಕಥೆ

|

Updated on: Jan 05, 2025 | 7:40 AM

ಸೋಮವಾರ ಶಿವನ ಪೂಜೆಗೆ ಮೀಸಲಾದ ದಿನ. ಚಂದ್ರನಿಗೆ ಮತ್ತು ಶಿವನಿಗೆ ಇರುವ ಸಂಬಂಧದ ಕುರಿತು ಒಂದು ಆಸಕ್ತಿದಾಯಕ ಪುರಾಣ ಕಥೆಯನ್ನು ಇಲ್ಲಿ ವಿವರಿಸಲಾಗಿದೆ. ದಕ್ಷ ಮಹಾರಾಜನ ಶಾಪದಿಂದಾಗಿ ಚಂದ್ರ ರೋಗಕ್ಕೆ ಗುರಿಯಾಗುತ್ತಾನೆ. ಆತ ರೋಗದಿಂದ ಮುಕ್ತನಾಗುವುದಕ್ಕಾಗಿ ಸೋಮವಾರದ ದಿನದಂದು ಪರಶಿವನನ್ನು ಆರಾಧಿಸುತ್ತಾನೆ.ಅಂದಿನಿಂದ ಚಂದ್ರನನ್ನು ಸೋಮನಾಥ ಎಂದು ಕರೆಯಲಾಗುತ್ತದೆ ಮತ್ತು ಸೋಮವಾರ ಶಿವನ ಪೂಜೆಯು ತೊಂದರೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.

Shiva Puja on Mondays: ಸೋಮವಾರವೇ ಶಿವನನ್ನು ಪೂಜಿಸಲು ಕಾರಣವೇನು? ಇಲ್ಲಿದೆ ಪುರಾಣ ಕಥೆ
Worship Shiva On Mondays
Follow us on

ಹಿಂದೂ ಧರ್ಮದಲ್ಲಿ ಸೋಮವಾರ ಶಿವನನ್ನು ಪೂಜಿಸಲಾಗುತ್ತದೆ. ಹಿಂದೂಗಳು ತಮ್ಮ ಇಷ್ಟದ ದೇವರನ್ನು ಇತರ ಯಾವುದೇ ದಿನಗಳಲ್ಲಿ ಪೂಜಿಸಿದರೂ ಕೂಡ ಸೋಮವಾರಗಳನ್ನು ಶಿವನ ಆರಾಧನೆಗೆ ಮೀಸಲಿಡಲಾಗುತ್ತದೆ. ಸೋಮವಾರವನ್ನು ಹಿಂದಿಯಲ್ಲಿ ಸೋಮ್​​ವಾರ್ ಎಂದು ಕರೆಯಲಾಗುತ್ತದೆ ಮತ್ತು ಇದರರ್ಥ ಚಂದ್ರನ ದಿನ (ಹಿಂದಿಯಲ್ಲಿ ಸೋಮ್ ಎಂದರೆ ಚಂದ್ರ). ಸರಳವಾಗಿ ಹೇಳುವುದಾದರೆ, ಸೋಮವಾರವು ಚಂದ್ರನಿಂದ ನಿಯಂತ್ರಿಸಲ್ಪಡುತ್ತದೆ.

ಸೋಮ್ (ಚಂದ್ರ) ಮತ್ತು ಶಿವನಿಗೆ ಸಂಬಂಧಿಸಿದ ಆಸಕ್ತಿದಾಯಕ ದಂತಕಥೆ ಇದೆ. ಚಂದ್ರ ದೇವರು ರಾಜ ದಕ್ಷನ ಎಲ್ಲಾ ಇಪ್ಪತ್ತೇಳು ದತ್ತು ಪುತ್ರಿಯರನ್ನು ವಿವಾಹವಾದರು. ಆ ಇಪ್ಪತ್ತೇಳು ಪುತ್ರಿಯರೇ ಆಕಾಶದಲ್ಲಿ ಇಪ್ಪತ್ತೇಳು ನಕ್ಷತ್ರಗಳಾಗಿ ಪ್ರತಿನಿಧಿಸುತ್ತಾರೆ. ಚಂದ್ರ 27 ರಾಜಕುಮಾರಿಯರನ್ನು ಮದುವೆಯಾಗಿದ್ದರೂ ಕೂಡ ರೋಹಿಣಿಗೆ ಹೆಚ್ಚು ಪ್ರೀತಿ ತೋರಿಸುತ್ತಿದ್ದನು, ಇದು ಅವಳ ಸಹೋದರಿಯರ ಕೋಪಕ್ಕೆ ಗುರಿಯಾಗುವಂತೆ ಮಾಡಿತು.

ಚಂದ್ರನ ಈ ವರ್ತನೆ ಕಂಡು ರೋಹಿಣಿಯ ಒಡಹುಟ್ಟಿದವರು ತಮ್ಮ ತಂದೆಗೆ(ದಕ್ಷ ರಾಜ) ದೂರು ನೀಡಿದರು. ಆರಂಭದಲ್ಲಿ, ದಕ್ಷ ತನ್ನ ಉಳಿದ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡದಂತೆ ಚಂದ್ರನನ್ನು ವಿನಂತಿಸಿದನು, ಆದರೆ ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ, ನಂತರವೂ ಕೂಡ ಅದೇ ಮುಂದುವರಿದಾಗ ರಾಜನು ತನ್ನ ಅಳಿಯನನ್ನು ಶಪಿಸಿದನು. ಚಂದ್ರನು ಕ್ರಮೇಣ ತನ್ನ ಹೊಳಪನ್ನು ಕಳೆದುಕೊಳ್ಳಲು ಮತ್ತು ಗಾತ್ರದಲ್ಲಿ ಕುಗ್ಗಲು ಪ್ರಾರಂಭಿಸಿದ ನಂತರ ದಕ್ಷನ ಶಾಪವು ಅದರ ಪರಿಣಾಮಗಳನ್ನು ತೋರಿಸಲಾರಂಭಿಸಿತು. ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯದಿಂದ, ಚಂದ್ರನು ಸಹಾಯಕ್ಕಾಗಿ ಬ್ರಹ್ಮದೇವನ ಬಳಿಗೆ ಧಾವಿಸಿದನು, ನಂತರ ಅವನು ಶಿವನನ್ನು ಪ್ರಾರ್ಥಿಸಬೇಕೆಂದು ಸೂಚಿಸಿದನು.

ಇದನ್ನೂ ಓದಿ: ಆರ್ಥಿಕ ಸಮಸ್ಯೆ, ಮದುವೆಯಲ್ಲಿ ಅಡೆತಡೆ ಎದುರಿಸುತ್ತಿದ್ದರೆ ಗುರುವಾರ ಈ ರೀತಿ ಮಾಡಿ

ಅವನ ಭಕ್ತಿಯಿಂದ ಸಂತುಷ್ಟನಾಗುವ ತನಕ ಚಂದ್ರನು ತನ್ನ ಪ್ರಾರ್ಥನೆಯನ್ನು ಭಗವಾನ್ ಶಿವನಿಗೆ ಸಲ್ಲಿಸಿದನು. ಆದರೆ ದಕ್ಷನ ಶಾಪವು ಈಗಾಗಲೇ ಅದರ ಪರಿಣಾಮವನ್ನು ತೋರಿಸಿದ್ದರಿಂದ, ಶಿವನು ಅದನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ಕ್ರಮೇಣ ತನ್ನ ರೂಪವನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಚಂದ್ರನಿಗೆ ಅನುಗ್ರಹಿಸಿದನು. ಆದ್ದರಿಂದ, ಹುಣ್ಣಿಮೆ (ಪೂರ್ಣಿಮಾ) ಗಾತ್ರದಲ್ಲಿ ಬೆಳೆದ ನಂತರ ಸರಿಸುಮಾರು ಹದಿನೈದು ದಿನಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ ಮತ್ತು ಅದು ಕಣ್ಮರೆಯಾಗುವವರೆಗೆ (ಅಮಾವಾಸ್ಯೆ) ನಿಧಾನವಾಗಿ ಕುಗ್ಗುತ್ತದೆ. ಮತ್ತು ಶಿವನು ಚಂದ್ರನನ್ನು ತನ್ನ ರೂಪವನ್ನು ಕಳೆದುಕೊಳ್ಳದಂತೆ ರಕ್ಷಿಸಿದ್ದರಿಂದ ಅವನನ್ನು ಸೋಮನಾಥ ಎಂದೂ ಕರೆಯುತ್ತಾರೆ. ಇದಲ್ಲದೆ, ಚಂದ್ರ ಶೇಖರ್ ಎಂದು ಕೂಡ ಕರೆಯುತ್ತಾರೆ ಏಕೆಂದರೆ ಚಂದ್ರನು ಶಿವನ ಜಡೆ ಮೇಲೆ ಇರುವುದನ್ನು ನೀವು ಕಂಡಿರಬಹುದು. ಆದ್ದರಿಂದ ಸೋಮವಾರದಂದು ಶಿವನನ್ನು ಪೂಜಿಸುವುದರಿಂದ ತಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:30 am, Sun, 5 January 25