
ಕುಂಕುಮ ಇಟ್ಟುಕೊಳ್ಳುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಆಚಾರ ವಿಚಾರ. ಮಹಿಳೆಯರು ತಮ್ಮ ಗಂಡಂದಿರ ಕ್ಷೇಮಕ್ಕಾಗಿ, ಅವರು ಸೌಖ್ಯವಾಗಿ ಇರಬೇಕೆಂದು ಕುಂಕುಮ ಇಟ್ಟುಕೊಳ್ಳುತ್ತಾರೆ. ಇನ್ನು ಭಕ್ತರು ಪೂಜೆ ಮಾಡುವಾಗ ಕುಂಕುಮ ಇಟ್ಟುಕೊಳ್ಳುತ್ತಾರೆ. ದೇವಾಲಯದಲ್ಲಿ ದೇವರನ್ನು ದರ್ಶಿಸಿಕೊಳ್ಳುವಾಗ ತಿಲಕ ಇಟ್ಟುಕೊಳ್ಳುತ್ತಾರೆ. ಇನ್ನು ಶಿವಭಕ್ತರು ವಿಭೂತಿ ಧರಿಸಿದರೆ, ವಿಷ್ಣು ಭಕ್ತರು ನಾಮ ಧರಿಸುತ್ತಾರೆ. ಅದೇನೇ ಇರಲ್ಲಿ ಎಲ್ಲವೂ ತಿಲಕವಾಗಿಯೇ ಪರಿಗಣಿಸಲಾಗುತ್ತದೆ. ಇನ್ನು ಹಿರಿಯರು ಆಶೀರ್ವದಿಸುತ್ತಾ ಕೆಲವು ಸಂದರ್ಭಗಳಲ್ಲಿ ತಿಲಕ ಇಡುತ್ತಾರೆ. ಹಾಗಾದರೆ ಯಾವ ಬೆರಳಿನಿಂದ ಹಣೆಗೆ ಕುಂಕುಮ/ ತಿಲಕ ಇಟ್ಟುಕೊಂಡರೆ ಯಾವ ರೀತಿಯ ಫಲ ಸಿಗುತ್ತದೆ? ತಿಲಕ ಇಡಲು ಬಹಳಷ್ಟು ಮಂದಿ ಬಲಗೈನ ಉಂಗುರ ಬೆರಳನ್ನು ಬಳಸುತ್ತಾರೆ. ಆದರೆ ನಿಮಗೆ ಗೊತ್ತಾ..? ಅಷ್ಟೇ ಅಲ್ಲ… ಇತರೆ ಬೆರಳುಗಳಲ್ಲೂ ಸಹ ತಿಲಕ ಇಟ್ಟುಕೊಳ್ಳಬಹುದು. ಹಾಗಿದ್ದರೆ ಯಾವ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಏನು ಪ್ರತಿಫಲ ಸಿಗುತ್ತದೆ. ಇಲ್ಲಿದೆ ಬೆರಳೆಣಿಕಿಯೆ ವಿವರಗಳು? 1. ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಶನಿಗ್ರಹದ ಸ್ಥಾನ. ಈ ಗ್ರಹ ನಮಗೆ ದೀರ್ಘವಾದ ಆಯಸ್ಸನ್ನು ನೀಡುತ್ತದೆ. ಆದಕಾರಣ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಆಯಸ್ಸು ಹೆಚ್ಚುತ್ತದೆ. Also Read: Secrets of Gayatri Mantra: ಮನುಷ್ಯನ ಗುಣವೇ ಅಹಂಕಾರ -ನಾನು ಎಂಬ ಅಹಂಕಾರವನ್ನು ದೂರ ಮಾಡುವುದೇ ಸಂಧ್ಯಾವಂದನೆ! 2. ಉಂಗುರದ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮಾನಸಿಕ ಪ್ರಶಾಂತಿ ಉಂಟಾಗುತ್ತದೆ. ಯಾಕೆಂದರೆ ಆ ಬೆರೆಳಿನ ಸ್ಥಾನ ಸೂರ್ಯನದು. ಅವನು ನಮಗೆ ಮಾನಸಿಕ ಶಾಂತಿಯನ್ನು ಉಂಟು ಮಾಡುತ್ತಾನೆ. ಹಾಗಾಗಿ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮನಸ್ಸು ಪ್ರಶಾಂತವಾಗಿ ಇರುತ್ತದೆ. ಸೂರ್ಯನಲ್ಲಿರುವ ಶಕ್ತಿ ನಮಗೆ ಲಭಿಸುತ್ತದೆ. 3....
Published On - 4:04 am, Fri, 20 September 24