ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಶರನ್ನವರಾತ್ರಿ ಹಬ್ಬಗಳಿಗೆ ಕ್ಷಣಗಣನೆ ಆರಂಭವಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವಗಳಲ್ಲಿ ಜಗನ್ಮಾತೆಯನ್ನು ಒಂಬತ್ತು ಅವತಾರಗಳಲ್ಲಿ ಪೂಜಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೆಯ ದಿನ ಕೂಶ್ಮಾಂಡ ದೇವಿ, ಐದನೆಯ ದಿನ ಸ್ಕಂದ ಮಾತಾ, ಆರನೆಯ ದಿನ ಕಾತ್ಯಾಯಿನಿ, ಏಳನೆಯ ದಿನ ಕಾಳರಾತ್ರಿ, ಎಂಟನೆಯ ದಿನ ಮಹಾಗೌರಿ, ಒಂಬತ್ತನೆಯ ದಿನ ಸಿದ್ಧಿದಾತ್ರಿ ಮಾತೆಯನ್ನು ಗೌರವಾದರಗಳಿಂದ, ಭಯ ಭಕ್ತಿಯಿಂದ ಪೂಜಿಸಲಾಗುತ್ತದೆ.