Zodiac Signs Compatibility: ಮೇಷ ರಾಶಿಯವರಿಗೆ ಬಾಳ ಸಂಗಾತಿಯಾಗುವವರು ಈ 3 ರಾಶಿಯವರಾದರೆ ಅದೃಷ್ಟ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 16, 2024 | 5:14 PM

ಮೇಷ ರಾಶಿಗೆ ಬಾಳ ಸಂಗಾತಿಯನ್ನು ಹುಡುಕುವುದು ತುಂಬಾ ಕಷ್ಟ. ಏಕೆಂದರೆ ಅವರು ಎಲ್ಲರ ಜೊತೆಯಲ್ಲಿ ಹೊಂದಿಕೊಳ್ಳುವುದಿಲ್ಲ ಅಲ್ಲದೆ ಎಲ್ಲರೂ ಇವರಿಗೂ ಹೊಂದಿಕೆಯಾಗಲಾರರು. ಆದರೆ ಈ ಮೂರು ರಾಶಿಯವರು ಮೇಷ ರಾಶಿಯವರಿಗೆ ಉತ್ತಮ ಜೋಡಿಯಾಗಬಲ್ಲರು. ಹಾಗಾದರೆ ಆ ರಾಶಿಗಳು ಯಾವುವು? ಸಾಮಾನ್ಯವಾಗಿ ಮೇಷ ರಾಶಿಯವರ ವ್ಯಕ್ತಿತ್ವ ಸ್ವಭಾವ ಹೇಗಿರುತ್ತದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Zodiac Signs Compatibility: ಮೇಷ ರಾಶಿಯವರಿಗೆ ಬಾಳ ಸಂಗಾತಿಯಾಗುವವರು ಈ 3 ರಾಶಿಯವರಾದರೆ ಅದೃಷ್ಟ
Follow us on

ಹನ್ನೆರಡು ರಾಶಿಗಳಲ್ಲಿ ಮೊದಲನೇಯದು ಮೇಷ ರಾಶಿ. ಇನ್ನು ಪ್ರತಿ ರಾಶಿಯವರಿಗೂ ಒಂದೊಂದು ವಿಶೇಷ ಗುಣ ಇದ್ದೇ ಇರುತ್ತದೆ. ಗ್ರಹಗತಿಗಳ ಬದಲಾವಣೆಯಿಂದ ಅದು ಬದಲಾಗುತ್ತಿದ್ದರೂ, ಜನ್ಮ ಕುಂಡಲಿ ಮತ್ತು ರಾಶಿಯ ಪ್ರಕಾರ ಕೆಲವು ಗುಣಗಳನ್ನು ಅವರು ಹೊಂದಿರುತ್ತಾರೆ. ಆ ಆಧಾರದಲ್ಲಿ ಹೇಳುವುದಾದರೆ ಮೇಷ ರಾಶಿಯವರು ಧೈರ್ಯಶಾಲಿಗಳಾಗಿರುತ್ತಾರೆ ಆದರೆ ಮಕ್ಕಳಂತೆ ಮುಗ್ಧರು. ಅಲ್ಲದೆ ಅವರು ತಮ್ಮದೇ ಆದ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇನ್ನು ಮೇಷ ರಾಶಿಗೆ ಬಾಳ ಸಂಗಾತಿಯನ್ನು ಹುಡುಕುವುದು ತುಂಬಾ ಕಷ್ಟ. ಏಕೆಂದರೆ ಅವರು ಎಲ್ಲರ ಜೊತೆಯಲ್ಲಿ ಹೊಂದಿಕೊಳ್ಳುವುದಿಲ್ಲ ಅಲ್ಲದೆ ಎಲ್ಲರೂ ಇವರಿಗೂ ಹೊಂದಿಕೆಯಾಗಲಾರರು. ಆದರೆ ಈ ಮೂರು ರಾಶಿಯವರು ಮೇಷ ರಾಶಿಯವರಿಗೆ ಉತ್ತಮ ಜೋಡಿಯಾಗಬಲ್ಲರು. ಹಾಗಾದರೆ ಆ ರಾಶಿಗಳು ಯಾವುವು? ಸಾಮಾನ್ಯವಾಗಿ ಮೇಷ ರಾಶಿಯವರ ವ್ಯಕ್ತಿತ್ವ ಸ್ವಭಾವ ಹೇಗಿರುತ್ತದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ ರಾಶಿಯವರ ಸ್ವಭಾವ;

ಮೇಷ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತುಂಬಾ ಹಠಮಾರಿಗಳಾಗಿರುತ್ತಾರೆ, ನಾವು ಹೇಳಿದ್ದೆ ಆಗಬೇಕು ಎಂಬ ಮನೋಭಾವ ಇರುತ್ತದೆ. ಇನ್ನು ನ್ಯಾಯ, ನೀತಿ, ಧರ್ಮಕ್ಕೆ ಮಹತ್ವ ಕೊಡುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಸ್ನೇಹಿತರು ಹೆಚ್ಚು. ಆದರೆ ಬೇರೆಯವರನ್ನು ನಂಬಿ ಬೇಗ ಮೋಸ ಕೂಡ ಹೋಗುತ್ತಾರೆ. ಇವರು ತುಂಬಾ ಚಂಚಲ ಸ್ವಭಾವದವರು ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಆದರೆ ಇವರು ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಕೆಲಸ ಪರಿಪೂರ್ಣ ಆಗುವ ತನಕ ಬಿಡುವುದಿಲ್ಲ. ಜೀವನದಲ್ಲಿ ತುಂಬಾ ಸ್ವಾವಲಂಬಿಗಳಾಗಿರುತ್ತಾರೆ, ನಾವೇ ದುಡಿದು ತಿನ್ನಬೇಕು ಎಂಬ ಛಲವಿರುತ್ತದೆ. ಹಾಗಾಗಿ ಅವರು ಎಂದಿಗೂ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ವಿಪರೀತ ಕೋಪ ಬರುವುದರಿಂದ ಅದನ್ನು ನಿಯಂತ್ರಣ ಮಾಡುವುದು ಕಷ್ಟ, ಆದರೆ ತಾಳ್ಮೆಯಿಂದ ಇದ್ದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಮೇಷ ರಾಶಿಯವರಿಗೆ ಯಾವ ರಾಶಿಯವರು ಬಾಳ ಸಂಗಾತಿಯಾಗಬೇಕು?

ಸಾಮಾನ್ಯವಾಗಿ ಮೇಷ ರಾಶಿಯವರಿಗೆ ಮದುವೆಯ ನಂತರದ ಜೀವನ ತುಂಬಾ ಒಳ್ಳೆಯದಾಗಿರುತ್ತದೆ. ಅವರಿಗೆ ಬಾಳ ಸಂಗಾತಿ ಬಂದ ಮೇಲೆ ಬದುಕು ಹಸನಾಗುತ್ತದೆ. ಅವರು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲವೂ ಸಂಗಾತಿ ಬಾಳಿನಲ್ಲಿ ಬಂದ ಬಳಿಕವೇ ಸಿಗುತ್ತದೆ. ಆದರೆ ಅವರ ಬದುಕಿನಲ್ಲಿ ಯಾವ ರಾಶಿಯವರು ಬರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಏಕೆಂದರೆ ಯಾವಾಗಲೂ ಆಯಾ ರಾಶಿಯ ಮಿತ್ರ ರಾಶಿಯವರನ್ನು ಮದುವೆಯಾಗಬೇಕು ಆಗ ಜೀವನ ತುಂಬಾ ಚೆನ್ನಾಗಿರುತ್ತದೆ. ಉದಾಹರಣೆಗೆ ಮೇಷ ರಾಶಿಯ ಮಿತ್ರ ರಾಶಿ ಸಿಂಹ, ತುಲಾ, ಧನು. ಈ ರಾಶಿಯವರ ಜೊತೆ ವಿವಾಹವಾದಲ್ಲಿ ಮೇಷ ರಾಶಿಯವರ ಅದೃಷ್ಟ ಖುಲಾಯಿಸುತ್ತೆ. ಏಕೆಂದರೆ ಈ ಮೂರು ರಾಶಿಯವರು ಮೇಷ ರಾಶಿಯವರಿಗೆ ಚೆನ್ನಾಗಿ ಹೊಂದಿಕೆಯಾಗುತ್ತಾರೆ. ಅಲ್ಲದೆ ಅವರ ಕೋಪ ಕಡಿಮೆ ಮಾಡುವಲ್ಲಿ, ಪ್ರೀತಿ ನೀಡುವ, ಉತ್ತಮ ಸಂವಹನ ನಡೆಸುವ, ನಂಬಿಕೆ ಇಡುವ ಮತ್ತು ಗೌರವ ನೀಡುವ ಸಂಬಂಧವಾಗಿರುತ್ತದೆ. ಸಿಂಹ ಮತ್ತು ತುಲಾ ರಾಶಿಯವರು ಅಹಂಗಿಂತ ಸಂಬಂಧಗಳನ್ನು ಹೆಚ್ಚು ಗೌರವಿಸುತ್ತಾರೆ. ಆದ್ದರಿಂದ ಅವರು ಅಹಂ ಇಟ್ಟುಕೊಳ್ಳುವುದಿಲ್ಲ. ಅದೂ ಅಲ್ಲದೆ ಈ ಮೂರು ರಾಶಿಗಳಲ್ಲಿ ಲೈಂಗಿಕ ಬಯಕೆಗಳು ಮುಂದಾಳತ್ವ ವಹಿಸುವುದರಿಂದ ಜಗಳ ಹೆಚ್ಚು ಸಮಯ ಇರುವುದಿಲ್ಲ. ಪ್ರೀತಿ ಮೇಲುಗೈ ಸಾಧಿಸುತ್ತದೆ. ಇನ್ನು ಮೇಷ ರಾಶಿಗೆ, ಮಿಥುನ ಮತ್ತು ಕನ್ಯಾ ಶತ್ರು ರಾಶಿಗಳಾಗಿರುವುದರಿಂದ ಈ ರಾಶಿಯವರನ್ನು ಆದಷ್ಟು ಮದುವೆಯಾಗದಿರುವುದು ಒಳ್ಳೆಯದು. ಆದಲ್ಲಿ, ಹೊಂದಾಣಿಕೆ ಕಡಿಮೆ ಇರುವುದರಿಂದ ಜಗಳಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರ ಹೊರತಾಗಿ ಯಾವುದೇ ತೊಂದರೆ ಇಲ್ಲ.

ಇದನ್ನೂ ಓದಿ: ಹೊಸ ಒಡವೆ ಧರಿಸೋದಕ್ಕು ಮೊದಲು ಇದನ್ನ ಮಾಡಿ, ಲಾಭ ಪಡೆಯಿರಿ

ಯಾವ ಬಣ್ಣ, ವಾರ ಉತ್ತಮ?

ಮೇಷ ರಾಶಿಯವರಿಗೆ ಬಿಳಿ ಮತ್ತು ಕೆಂಪು ಬಣ್ಣಗಳು ಉತ್ತಮ ಎನ್ನಲಾಗುತ್ತದೆ. ಹಾಗಾಗಿ ಒಳ್ಳೆಯ ಕೆಲಸಕ್ಕೆ ಹೋಗುವಾಗ ಈ ಬಣ್ಣದ ಉಡುಗೆಯನ್ನು ತೊಟ್ಟುಕೊಳ್ಳಿ. ಇವರಿಗೆ ಒಳ್ಳೆಯ ವಾರವೆಂದರೆ ಅದು ಭಾನುವಾರ ಮತ್ತು ಮಂಗಳವಾರ ಹಾಗಾಗಿ ಈ ದಿನಗಳಲ್ಲಿ ನಿಮಗೆ ಗೆಲುವು ನಿಶ್ಚಿತ. ಇನ್ನು ಮೇಷ ರಾಶಿಯವರು ಹನುಮಂತ ಮತ್ತು ಸುಬ್ರಹ್ಮಣ್ಯ ದೇವರನ್ನು ಹೆಚ್ಚು ಪೂಜಿಸಬೇಕು ಆಗ ಯಶಸ್ಸು ನಿಮ್ಮದಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ