AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಕ್ಷಿತ ಬೆಂಗಳೂರು ನಿರ್ಮಾಣ: ಫಲ ಕೊಟ್ಟ ಪೊಲೀಸ್​ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಪ್ರಯತ್ನ

ಸುರಕ್ಷಿತ ಬೆಂಗಳೂರು ನಿರ್ಮಾಣ ವಿಚಾರವಾಗಿ ಪೊಲೀಸ್​ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಕೈಗೊಂಡಿದ್ದ ಕ್ರಮಗಳು ಫಲಪ್ರದವಾಗಿವೆ. ಅಧಿಕಾರ ವಹಿಸಿಕೊಂಡ ದಿನದಿಂದ ಸಿಂಗ್​ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು, ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುವ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿವೆ.

ಸುರಕ್ಷಿತ ಬೆಂಗಳೂರು ನಿರ್ಮಾಣ: ಫಲ ಕೊಟ್ಟ ಪೊಲೀಸ್​ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಪ್ರಯತ್ನ
ಸೀಮಂತ್ ಕುಮಾರ್ ಸಿಂಗ್
ಪ್ರಸನ್ನ ಹೆಗಡೆ
|

Updated on: Oct 15, 2025 | 4:18 PM

Share

ಬೆಂಗಳೂರು, ಅಕ್ಟೋಬರ್​ 15: ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುವ ರಾಜ್ಯ ರಾಜಧಾನಿ ಬೆಂಗಳೂರು ಇವತ್ತು ಸುರಕ್ಷಿತ ಮತ್ತು ಶಾಂತ ನಗರವಾಗಿ ಹೊರ ಹೊಮ್ಮಿದೆ. ಇದಕ್ಕೆ ಪ್ರಸ್ತುತ ಬೆಂಗಳೂರು ಪೊಲೀಸ್​ ಕಮಿಷನರ್​ ಆಗಿರುವ ಸೀಮಂತ್ ಕುಮಾರ್ ಸಿಂಗ್ ಅವರ ಆಡಳಿತವೇ ಕಾರಣವಾಗಿದ್ದು, ನಗರದ ಕಾನೂನು ಮತ್ತು ಸುವ್ಯವಸ್ಥೆ ಸದ್ದಿಲ್ಲದೆ ಬಲವಾಗಿ ಪರಿವರ್ತನೆ ಆಗುತ್ತಿರುವ ಜೊತೆಗೆ ಅಪರಾಧ ಕೃತ್ಯಗಳ ಕಡಿವಾಣ ವಿಚಾರಲ್ಲೂ ಗಣನೀಯ ಬದಲಾವಣೆ ಆಗಿದೆ.

ಇಲಾಖೆಯೊಳಗಿನ ಸುಧಾರಿತ ಸಮನ್ವಯದಿಂದಾಗಿ ಚೈನ್​ ಸ್ನಾಚಿಂಗ್​, ಸಣ್ಣಪುಟ್ಟ ಕಳ್ಳತನ ಸೇರಿ ಮುಂತಾದ ಪ್ರಕರಣಗಳ ಸಂಖ್ಯೆ ಹೆಚ್ಚಿನ ವಲಯಗಳಲ್ಲಿ ಕಡಿಮೆಯಾಗಿವೆ. ಪೊಲೀಸ್​ ಕಾಯಾರ್ಚರಣೆ ಮತ್ತು ಜಾಗೃತಿ ಕಾರ್ಯಕ್ರಮಗಳಿಂದ ಸಂಶ್ಲೇಷಿತ ಮಾದಕವಸ್ತುಗಳ ಮಾರಾಟ ಪ್ರಕರಣಗಳಿಗೂ ಕಡಿವಾಣ ಬಿದ್ದಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಗಸ್ತು, ಸಹಾಯವಾಣಿಗಳಿಂದಾಗಿ ಮಹಿಳೆಯರು ಭಯವಿಲ್ಲದೆ ನಗರದಲ್ಲಿ ಓಡಾಡುತ್ತಿದ್ದು, ಅಹಿತಕರ ಘಟನೆಗಳು ನಡೆದಾಗ ಅವನ್ನು ವರದಿ ಮಾಡಲು ಪ್ರೋತ್ಸಾಹಿಸಲು ನಡೆಸಲಾಗಿರುವ ಅಭಿಯಾನಗಳು ಫಲಪ್ರದವಾಗಿವೆ. ಸಾರ್ವಜನಿಕರ ಕುಂದು ಕೊರತೆಗಳ ಪರಿಹಾರ, ದೂರುಗಳ ಬಗ್ಗೆ ತ್ವರಿತ ವಿಚಾರಣೆ ಮುಂತಾದವುಗಳು ಪೊಲೀಸರು ಮತ್ತು ನಾಗರಿಕರ ನಡುವಿನ ವಿಶ್ವಾಸ ಹೆಚ್ಚಿಸಿವೆ. ಸಾರ್ವಜನಿಕ ಸಭೆಗಳು, ಪಾರದರ್ಶಕ ಸಂವಹನ ಪೊಲೀಸರು ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿವೆ. ಮಾದಕ ವಸ್ತುಗಳ ವಿರುದ್ಧ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡ ಕಾರಣ ಯುವಜನತೆ ಜಾಗೃತರಾಗಿದ್ದಾರೆ.

ಕಾನೂನುಗಳಲ್ಲಿ ಲೋಪವಾದಾಗ ಅಪರಾಧಗಳು ಹೆಚ್ಚುವ ಕಾರಣ ಈ ವಿಚಾರವಾಗಿ ಸೀಮಂತ್ ಕುಮಾರ್ ಸಿಂಗ್ ಹೆಚ್ಚು ಗಮನಹರಿಸಿದ್ದಾರೆ. ಅವರ ನಾಯಕತ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಮತ್ತಷ್ಟು ವೇಗ ಪಡೆದಿದ್ದು, ಅಪರಾಧಗಳ ಪುನರಾವರ್ತನೆ ನಿಯಂತ್ರಣಕ್ಕೆ ಬಂದಿದೆ. ಮಹಿಳಾ ಸುರಕ್ಷತೆಯೂ ಸಿಂಗ್ ಅವರ ಆದ್ಯತೆಗಳಲ್ಲಿ ಮುಂಚೂಣಿಯಲ್ಲಿದ್ದು, ಮಹಿಳೆಯರು ಭಯವಿಲ್ಲದೆ ತಿರುಗಾಡಲು ಗಸ್ತು ವಾಹನಗಳು ಮಾತ್ರ ಸಾಕಾಗುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಹೀಗಾಗಿ ಸಹಾಯವಾಣಿಯ ಜೊತೆಗೆ ನಿಗದಿತ ಸ್ಥಳಗಳಲ್ಲಿ ಗಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆ ನಗರದ ಪ್ರಮುಖ ಸಮಸ್ಯೆಗಳಲ್ಲಿ ಒಂದು ಎಂಬುದನ್ನ ಗುರುತಿಸಿದ್ದ ಸಿಂಗ್​, ಇವುಗಳ ನಿಯಂತ್ರಣಕ್ಕೆ ಕಾರ್ಯಾಚಣೆಗಳು ಮಾತ್ರ ಸಾಲದು. ಬದಲಿಗೆ ಅವುಗಳ ಮೂಲ ಪತ್ತೆಗೆ ಗುಪ್ತಚರ ಆಧಾರಿತ ತಂತ್ರಗಳನ್ನ ಬಳಸಲು ನಿರ್ಧರಿಸಿದ್ದರು. ಹೀಗಾಗಿ ನಿಗದಿತ ಕಾರ್ಯಾಚರಣೆಗಳನ್ನು ನಡೆಸಿ ಮಾದಕ ವಸ್ತು ಜಾಲದ ಹರಡುವಿಕೆ ನಗರದಲ್ಲಿ ನಿಯಂತ್ರಣಕ್ಕೆ ಬಂದಿದೆ.

ಸೀಮಂತ್ ಕುಮಾರ್ ಸಿಂಗ್ ಅವರ ಮತ್ತೊಂದು ಸಾಧನೆಯೆಂದರೆ ಜನರನ್ನು ನೇರವಾಗಿ ತಲುಪುವ ಪ್ರಯತ್ನದಲ್ಲಿನ ಯಶಸ್ಸು. ಸಾರ್ವಜನಿಕ ಕುಂದುಕೊರತೆ ಪರಿಹಾರ ಸಭೆಗಳು, ಪಾರದರ್ಶಕ ಸಂವಹನ ಮತ್ತು ಸಮುದಾಯ ಸಂಪರ್ಕ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸವನ್ನು ಅವರು ಗಳಿಸಿದ್ದಾರೆ. ನಗರದಲ್ಲಿನ ಅಪರಾಧಗಳ ಇಳಿಕೆ ಕೇವಲ ಅಂಕಿ-ಅಂಶಗಳಾಗಿರದೆ ಜನರಲ್ಲಿ ಪೊಲೀಸರ ಮೇಲಿನ ವಿಶ್ವಾಸ ಪುನಃ ಸ್ಥಾಪಿಸಲು ನೆರವಾಗಿವೆ. ಬೆಂಗಳೂರಿನ ಭವಿಷ್ಯ ಸುರಕ್ಷಿತವಾಗಿದೆ ಎಂಬ ಭಾವನೆ ಮೂಡಿಸಿದೆ.

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ