AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಕನ್ನಡದಿಂದ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ; ಈ ವರ್ಷದ ಬೆಂಗಳೂರಿನ ಅತಿದೊಡ್ಡ ಮೇಳದ ಬಗ್ಗೆ ಎಲ್ಲಾ ಮಾಹಿತಿ

Lifestyle, Automobile & Furniture Expo 2025: ಟಿವಿ9 ಕನ್ನಡ ವಾಹಿನಿಯಿಂದ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್​ಪೋ 2025 ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್ 2ರಿಂದ 5ರವರೆಗೆ ಬೃಹತ್ ಮೇಳ ನಡೆಯಲಿದೆ. ಫ್ಯಾಶನ್ ಜಗತ್ತಿನ ದೊಡ್ಡ ಬ್ರ್ಯಾಂಡ್​ಗಳು, ಹೊಚ್ಚ ಹೊಸ ಕಾರುಗಳು, ಆಕರ್ಷಕ ಪೀಠೋಕರಣಗಳು ಒಂದೇ ವೇದಿಕೆಯಲ್ಲಿ ಕಾಣಸಿಗಲಿವೆ.

ಟಿವಿ9 ಕನ್ನಡದಿಂದ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ; ಈ ವರ್ಷದ ಬೆಂಗಳೂರಿನ ಅತಿದೊಡ್ಡ ಮೇಳದ ಬಗ್ಗೆ ಎಲ್ಲಾ ಮಾಹಿತಿ
ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2025 | 4:12 PM

Share

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕದ ನಂಬರ್ ಒನ್ ಸುದ್ದಿ ವಾಹಿನಿಯಾಗಿರುವ ಟಿವಿ9 ಕನ್ನಡದಿಂದ ಮತ್ತೊಂದು ಮೆಗಾ ಎಕ್ಸ್ಪೋ ಆಯೋಜನೆಯಾಗಿದೆ. ಅರಮನೆ ಮೈದಾನದಲ್ಲಿ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ನಡೆಯಲಿದೆ. ಅಕ್ಟೋಬರ್ 2ರಿಂದ 5ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಇದು ಬೆಂಗಳೂರಿನಲ್ಲಿ ಈ ವರ್ಷ ನಡೆಯುವ ಅತಿದೊಡ್ಡ ಮೇಳವೆನಿಸಿದೆ.

ಹೊಸ ವಾಹನಗಳ ಅನ್ವೇಷಣೆಯಲ್ಲಿರುವವರಿಗೆ, ಹೋಮ್ ಡೆಕೋರೇಶನ್ ಆಸಕ್ತರಿಗೆ ಈ ಎಕ್ಸ್​ಪೋ ಸರಿಯಾದ ವೇದಿಕೆಯಾಗಿದೆ. ಈ ಹಿಂದಿನ ಆವೃತ್ತಿಯ ಮೇಳಗಳಿಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಸಾಕಷ್ಟು ಜನರು ಎಕ್ಸ್​ಪೋದ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋದಲ್ಲಿ ಏನೇನು ನಿರೀಕ್ಷಿಸಬಹುದು?

ಎಲೆಕ್ಟ್ರಾನಿಕ್ ಗ್ಯಾಜೆಟ್: ಸ್ಮಾರ್ಟ್ ಹೋಮ್ ಟೆಕ್ನಾಲಜಿಯ ಇತ್ತೀಚಿನ ಉತ್ಪನ್ನಗಳು, ಅಡುಗೆಮನೆ ಪರಿಕರಗಳು, ಪರ್ಸನಲ್ ಗ್ಯಾಜೆಟ್​ಗಳು ಮೊದಲಾದವನ್ನು ಈ ಎಕ್ಸ್​ಪೋದಲ್ಲಿ ಕಾಣಬಹುದು. ಹಾಗೆಯೇ, ದೇಶದ ಅತ್ಯುತ್ತಮ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್​ಗಳ ಉತ್ಪನ್ನಗಳನ್ನು ಈ ಮೇಳದಲ್ಲಿ ಕಾಣಬಹುದು.

ಆಟೊಮೊಬೈಲ್ ಪೆವಿಲಿಯನ್: ಹೊಚ್ಚ ಹೊಸ ಬ್ರ್ಯಾಂಡ್​ಗಳ ಎಲೆಕ್ಟ್ರಿಕ್ ವಾಹನಗಳು, ಎಸ್​ಯುವಿ, ಬೈಕ್, ಸ್ಕೂಟರ್, ಕಾನ್ಸೆಪ್ಟ್ ಕಾರ್ ಇತ್ಯಾದಿಯ ಪ್ರದರ್ಶನ ಇರುತ್ತದೆ. ಟೆಸ್ಟ್ ರೈಡ್ ಮಾಡಿ ವಾಹನದ ಪ್ರತ್ಯಕ್ಷ ಅನುಭವ ಪಡೆಯಬಹುದು. ವಿಆರ್ ಮೂಲಕವೂ ವಾಹನದ ಡ್ರೈವಿಂಗ್ ಎಕ್ಸ್​ಪೀರಿಯನ್ಸ್ ಪಡೆಯಬಹುದು.

ಫರ್ನಿಚರ್ ಮತ್ತು ಹೋಮ್ ಡೆಕೋರೇಶನ್: ಆಕರ್ಷಕ ಹಾಗೂ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳು, ಇಂಟೀರಿಯರ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್ಸ್ ಮತ್ತಿತರ ಉತ್ಪನ್ನಗಳು ಈ ಟಿವಿ9 ಎಕ್ಸ್​ಪೋದಲ್ಲಿ ನೋಡಲು ಸಿಗುತ್ತವೆ. ನಿಮ್ಮ ಮನೆ ಮತ್ತು ಮನಸ್ಸಿಗೆ ಹೊಂದಿಕೆಯಾಗುವ ಗೃಹಾಲಂಕಾರಗಳನ್ನು ಇಲ್ಲಿ ಅನ್ವೇಷಿಸಬಹುದು.

ಫ್ಯಾಷನ್ ಮತ್ತು ಜ್ಯುವೆಲರಿ: ಹೊಚ್ಚ ಹೊಸ ಫ್ಯಾಷನ್ ಟ್ರೆಂಡ್​ಗಳು, ಡಿಸೈನರ್ ಕಲೆಕ್ಷನ್ಸ್, ಟ್ರೆಂಡಿ ಡಿಸೈನ್ ಇರುವ ಜ್ಯುವೆಲರಿಗಳನ್ನು ಮೇಳದಲ್ಲಿ ಕಾಣಬಹುದು.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ವಿವರ

ಮೇಳದ ದಿನಾಂಕ: 2025ರ ಅಕ್ಟೋಬರ್ 2, 3, 4 ಮತ್ತು 5ನೇ ತಾರೀಖು.

ಮೇಳದ ಸ್ಥಳ: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್