ವಿಶ್ವ ಜಲದಿನದಂದು ಸ್ವಚ್ಛಮೇವ ಜಯತೆ; ಶುದ್ಧ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಟಿವಿ9 ನೆಟ್ವರ್ಕ್, ಲಿವ್​ಪ್ಯೂರ್ ಸಹಯೋಗ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Mar 22, 2024 | 6:32 PM

ಈ ವಿಶ್ವ ಜಲದಿನದಂದು ಟಿವಿ9 ನೆಟ್‌ವರ್ಕ್ ಮತ್ತು ಲಿವ್‌ಪ್ಯೂರ್, ಸ್ವಚ್ಛಮೇವ ಜಯತೇ ಎಂಬ ಅಭಿಯಾನದ ಮೂಲಕ ಶುದ್ಧ ಕುಡಿಯುವ ನೀರಿಗೆ ಕರೆ ನೀಡುತ್ತಿವೆ.

ವಿಶ್ವ ಜಲದಿನದಂದು ಸ್ವಚ್ಛಮೇವ ಜಯತೆ; ಶುದ್ಧ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಟಿವಿ9 ನೆಟ್ವರ್ಕ್, ಲಿವ್​ಪ್ಯೂರ್ ಸಹಯೋಗ
ಲಿವ್​ಪ್ಯೂರ್ ಸ್ವಚ್ಛಮೇವ ಜಯತೆ
Follow us on

ನವದೆಹಲಿ, ಮಾರ್ಚ್ 22: ಈ ಬಾರಿಯ ವಿಶ್ವ ಜಲ ದಿನದಂದು, ಟಿವಿ9 ನೆಟ್‌ವರ್ಕ್ ಮತ್ತು ಪ್ರಮುಖ ವಾಟರ್ ಪ್ಯೂರಿಫೈಯರ್ ಕಂಪನಿ ಲಿವ್‌ಪ್ಯೂರ್ ಕೈಜೋಡಿಸಿದ್ದು, ಆರೋಗ್ಯಕರ ರಾಷ್ಟ್ರಕ್ಕಾಗಿ ಶುದ್ಧ ನೀರನ್ನು ಸೇವಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿವೆ.

ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಪೂರ್ಣ ಬಲದೊಂದಿಗೆ ಸಾಗುತ್ತಿರುವಾಗ, ದೇಶವು ತನ್ನ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಇದರಿಂದ ಸಮೃದ್ಧಿಯ ಹಾದಿ ಸುಗಮವಾಗಿರುತ್ತದೆ. ಈ ಸಂದರ್ಭದಲ್ಲಿಯೇ ಆರೋಗ್ಯಕರ ಭಾರತಕ್ಕಾಗಿ ಶುದ್ಧ ಮತ್ತು ಆರೋಗ್ಯಕರ ಕುಡಿಯುವ ನೀರಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಬೇಕಿಲ್ಲ. ಏಕೆಂದರೆ ಇದು ಒಟ್ಟಾರೆ ಯೋಗಕ್ಷೇಮಕ್ಕೆ ಮುಖ್ಯವಾದ ಪರಿಣಾಮಗಳನ್ನು ಹೊಂದಿದೆ.

ಅದಕ್ಕಾಗಿಯೇ ಈ ವಿಶ್ವ ಜಲದಿನದಂದು ಟಿವಿ9 ನೆಟ್‌ವರ್ಕ್ ಮತ್ತು ಲಿವ್‌ಪ್ಯೂರ್, ಸತ್ಯಮೇವ ಜಯತೇ ಎಂಬ ಅಭಿಯಾನದ ಮೂಲಕ ಶುದ್ಧ ಕುಡಿಯುವ ನೀರಿಗೆ ಕರೆ ನೀಡುತ್ತಿವೆ. ನೀರಿನ ಮೂಲಕ ಸಂಭವಿಸುವ ರೋಗಗಳಿಂದ ಅಪಾಯ ಕಡಿಮೆ ಮಾಡಲು, ಸರಿಯಾದ ದೈಹಿಕ ಜಲೀಕರಣಗೊಳಿಸಲು ಮತ್ತು ದೈಹಿಕ ಅಂಗಳ ಕಾರ್ಯಚಟುವಟಿಕೆ ಸುಗಮಗೊಳಿಸಲು ಶುದ್ಧ ಜಲ ಎಷ್ಟು ಉಪಯೋಗ ಎಂಬುದರ ಜಾಗೃತಿ ಮೂಡಿಸಲಾಗುತ್ತದೆ.

ಅಭಿಯಾನದ ಮೇಲೆ ಬೆಳಕು ಚೆಲ್ಲುತ್ತಾ, ಲಿವ್‌ಪ್ಯೂರ್​ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕೌಲ್, “ಸರ್ವರಿಗೂ ಸ್ವಚ್ಛ ನೀರಿನ ಲಭ್ಯತೆ ಸಿಗುವಂತೆ ಮಾಡುವ ಒಂದು ಸಾಮಾನ್ಯ ಗುರಿಗಾಗಿ ಕೈಜೋಡಿಸುವುದು ಇದು. ಇದರ ಮಹತ್ವ ಗುರುತಿಸಿರುವ ಲಿವ್‌ಪ್ಯೂರ್ ದೇಶಾದ್ಯಂತ ಶುದ್ಧ ನೀರನ್ನು ಒದಗಿಸಿದೆ, ಅದನ್ನು ಹೆಚ್ಚು ಕೈಗೆಟುಕುವ ಮತ್ತು ಗ್ರಾಹಕರಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ನಮ್ಮ ಬದ್ಧತೆಯ ಮೂಲಕ, ಸ್ವಚ್ಛ ಜೀವನ ಎಲ್ಲರಿಗೂ ಸಿಗುವಂತೆ ಮಾಡುವ, ಮತ್ತು ಆರೋಗ್ಯಕರ ಜೀವನಶೈಲಿಗೆ ಪ್ರತಿಯೊಬ್ಬರಿಗೂ ಅವಕಾಶ ಸಿಗುವುದನ್ನು ಖಚಿತಪಡಿಸುವ ದೊಡ್ಡ ಪ್ರಯತ್ನಕ್ಕೆ ನಮ್ಮ ಕೊಡುಗೆ ಇದೆ” ಎಂದು ಹೇಳಿದರು.

ಸ್ವಚ್ಛ ಕುಡಿಯುವ ನೀರು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಲು ಲಿವ್​ಪ್ಯೂರ್ ಹೊಂದಿರುವ ಬದ್ಧತೆ ಬಗ್ಗೆ ಮಾತನಾಡಿದ ಕೌಲ್, ‘ಒತ್ತೀಚೆಗೆ ಲಿವ್​ಪ್ಯೂರ್​ನ ಅಲ್ಲೂರಾ ವಾಟರ್ ಪ್ಯೂರಿಫೈರ್ ರೇಂಜ್ ಅನ್ನು ಆರಂಭಿಸಲಾಗಿದ್ದು, ಇದು ಮನೆಗಳಲ್ಲಿ ವಾಟರ್ ಪ್ಯೂರಿಫೈರ್​ಗಳನ್ನು ಸರಿಯಾಗಿ ನಿರ್ವಹಿಸಲು ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಲಿವ್​ಪ್ಯೂರ್ 30 ತಿಂಗಳ ಕಾಲ ನಿರ್ವಹಣೆ ವೆಚ್ಚ ಇಲ್ಲದೆ ಉಚಿತವಾಗಿ ಸರ್ವಿಸ್ ನೀಡುತ್ತದೆ. ಇಂಥದ್ದು ಈ ಉದ್ಯಮದಲ್ಲಿ ಇದೇ ಮೊದಲು. ದೇಶಾದ್ಯಂತ ತೊಡಕುರಹಿತ ಪರಿಹಾರ ಒದಗಿಸಲು ನಮಗಿರುವ ಬದ್ಧತೆಯನ್ನು ಇದು ತೋರಿಸುತ್ತದೆ,’ ಎಂದು ಹೇಳಿದರು.

ಕುಡಿಯುವ ಶುದ್ಧ ನೀರನ್ನು ಎಲ್ಲರಿಗೂ ತಲುಪಿಸುವ ವಿಚಾರದಲ್ಲಿ ಕ್ರಾಂತಿಕಾರಿ ನಡೆ ಕೈಗೊಂಡಿರುವ ಬಗ್ಎ ಮಾತನಾಡಿದ ಅವರು, ‘ಲಿವ್​ಪ್ಯೂರ್ ತನ್ನ ಅತ್ಯಾಧುನಿಕ ಶುದ್ಧೀಕರಣ ತಂತ್ರಜ್ಞಾನ ಬಳಸಿ ಸ್ಮಾರ್ಟ್ ವಾಟರ್ ಪ್ಯೂರಿಫೈರ್​ಗಳಿಂದ ಅಗತ್ಯ ಖನಿಜಗಳು ನೀರಿಗೆ ಸೇರ್ಪಡೆ ಆಗುವುದನ್ನು ಖಚಿತಪಡಿಸುತ್ತದೆ. ವಾಟರ್ ಪ್ಯೂರಿಫಯರ್ ಖರೀದಿಗೆ ಮಾತ್ರವಲ್ಲ, ಬಾಡಿಗೆಗೂ ಲಭ್ಯ ಇರುವಂತೆ ಮಾಡಲಾಗಿದೆ. ಇದರಿಂದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಲಭ್ಯತೆಯ ಅವಕಾಶ ಇರುತ್ತದೆ,’ ಎಂದರು.

ಈ ವಿಶ್ವ ಜಲ ದಿನದಂದು ಶುದ್ಧ ನೀರು ಎಲ್ಲರಿಗೂ ಸಿಗಬೇಕೆನ್ನುವ ತನ್ನ ಬದ್ಧತೆಯನ್ನು ಲಿವ್​ಪ್ಯೂರ್ ಮತ್ತೊಮ್ಮೆ ಒತ್ತಿಹೇಳುತ್ತಿದೆ ಎಂದರು ಕೌಲ್. ‘ಪ್ರತಿಯೊಂದು ಹನಿಯೂ ಮುಖ್ಯ. ಸುರಕ್ಷಿತ ಮತ್ತು ಪರಿಶುದ್ಧ ನೀರು ಐಷಾರಾಮಿ ಆಗದೇ ಮೂಲಭೂತ ಹಕ್ಕು ಎನಿಸುವ ಬವಿಷ್ಯದತ್ತ ನಾವೆಲ್ಲರೂ ಒಟ್ಟಿಗೆ ಪ್ರಯತ್ನಿಸಬೇಕು,’ ಎಂದು ಅವರು ಕರೆ ನೀಡಿದರು.

ಈ ಯೋಜನೆಯನ್ನು ಬೆಂಬಲಿಸಲು ಗರ್ವ ಪಡುವ ಟಿವಿ9 ನೆಟ್ವರ್ಕ್, ಸುಧಾರಿತ ವ್ಯವಸ್ಥೆಗಳ ಮೂಲಕ ಫಿಲ್ಟರ್ ಆಗಿ ಬರುವ ಮತ್ತು ಅವಶ್ಯಕ ಖನಿಜಗಳಿರುವ ಸುರಕ್ಷಿತ ಕುಡಿಯುವ ನೀರನ್ನು ಜನರು ಬಳಸುವಂತೆ ಒತ್ತಾಯಿಸುತ್ತದೆ.

(ಇದು ಪ್ರಾಯೋಜಿತ ಸುದ್ದಿ)