ದೃಢ ಮನಸ್ಸಿನ ವ್ಯಕ್ತಿಗೆ ಹಿಮಾಲಯವೂ ಚಿಕ್ಕದಾಗಿ ಕಾಣಿಸುತ್ತದೆ ಎಂಬ ನಾಣ್ನುಡಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಈ ಮಾತನ್ನು ಹರಿಯಾಣದ ಅಜ್ಜಿಯೊಬ್ಬರು ಈಡೇರಿಸಿದ್ದು , ಹರಿಯಾಣ (Haryana)ದ ಕದ್ಮಾ ಗ್ರಾಮದ ರಾಂಬಾಯಿ ಹೊಸ ದಾಖಲೆ (record) ಬರೆದಿದ್ದಾರೆ . ಈ ಅಜ್ಜಿಯ ವಯಸ್ಸು ಕೇಳಿದರೆ ಬೆಚ್ಚಿ ಬೀಳುತ್ತೀರಿ. ಈ ಅಜ್ಜಿಗೆ 105 ವರ್ಷ ಎಂದು ಪರಿಗಣಿಸಲಾಗಿದ್ದು, ಈಗ ಈ ಅಜ್ಜಿ 105 ವರ್ಷ ವಯಸ್ಸಿನಲ್ಲಿ ಓಟದಲ್ಲಿ ದಾಖಲೆ ಬರೆದಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆದಿತ್ತು. ಈ ಸ್ಪರ್ಧೆಯಲ್ಲಿ ಅಜ್ಜಿ ಓಡಿ ದಾಖಲೆ ನಿರ್ಮಿಸಿದ್ದಾರೆ. ಅಜ್ಜಿ 100 ಮೀಟರ್ ಓಟವನ್ನು 45.40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಈ ಮೊದಲು ಈ ದಾಖಲೆ ಮನ್ ಕೌರ್ ಎಂಬ ವೃದ್ಧೆಯ ಹೆಸರಿನಲ್ಲಿತ್ತು. ಅವರು ಈ ಓಟವನ್ನು 74 ಸೆಕೆಂಡುಗಳಲ್ಲಿ ಮುಗಿಸಿದ್ದರು.
ಅಜ್ಜಿಯ ಈ ದಾಖಲೆಯಿಂದ ಹರಿಯಾಣದಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಅಜ್ಜಿಯ ಊರಿನಲ್ಲಿ ವಿಶೇಷ ಸಂತಸ ಎದ್ದು ಕಾಣುತ್ತಿತ್ತು. ಈ ವಯಸ್ಸಿನಲ್ಲೂ ಕ್ರೀಡೆಯಲ್ಲಿ ಹೆಸರು ಮಾಡಿರುವುದು ರಾಂಬಾಯಿ ಮಾತ್ರ ಅಲ್ಲ. ಅವರ ಕುಟುಂಬದವರು ಕೂಡ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ಎಂಬುದು ಗಮನಾರ್ಹ. ಅವರ ಕುಟುಂಬದ ಇತರ ಸದಸ್ಯರು ಸಹ ಕ್ರೀಡೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ರಾಂಬಾಯಿ, ಸ್ಪರ್ಧೆಯಲ್ಲಿ 100,200 ಮೀಟರ್ಸ್, ರಿಲೇ ಮತ್ತು ಲಾಂಗ್ ಜಂಪ್ನಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು.
ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ವಾಕಿಂಗ್
ಜನವರಿ 1, 1917 ರಂದು ಜನಿಸಿದ ರಾಂಬಾಯಿ ಹಿರಿಯ ಕ್ರೀಡಾಪಟು. ಅವರು ನವೆಂಬರ್, 2021 ರಲ್ಲಿ ವಾರಣಾಸಿಯಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿದರು. 105ರ ಹರೆಯದಲ್ಲೂ ಕಠಿಣ ಪರಿಶ್ರಮದಿಂದ ಹಲವು ಸಾಧನೆಗಳನ್ನು ಮಾಡಿದ್ದಾರೆ. ಹಿರಿಯ ಅಥ್ಲೀಟ್ ರಾಂಬಾಯಿ ಕೃಷಿ ಕೆಲಸಗಳೊಂದಿಗೆ ಓಡುವುದನ್ನು ಅಭ್ಯಾಸ ಮಾಡುತ್ತಾರೆ. ಅವರು ಬೆಳಿಗ್ಗೆ 4 ಗಂಟೆಗೆ ಎದ್ದು ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ನಿರಂತರವಾಗಿ ಓಡುವುದನ್ನು ರಾಂಬಾಯಿ ಅಭ್ಯಾಸ ಮಾಡಿಕೊಂಡಿದ್ದಾರೆ. ಜೊತೆಗೆ, ಈ ವಯಸ್ಸಿನಲ್ಲೂ, ಅವರು 5-6 ಕಿಲೋಮೀಟರ್ಗಳಷ್ಟು ಆರಾಮವಾಗಿ ಓಡುತ್ತಾರೆ.
ಪ್ರತಿದಿನ 250 ಗ್ರಾಂ ತುಪ್ಪ ಸೇವನೆ
80 ವರ್ಷ ದಾಟಿದ ಜನರು ಸಾಮಾನ್ಯವಾಗಿ ಹಾಸಿಗೆ ಹಿಡಿದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ರಾಂಬಾಯಿ ಅವರು 105 ನೇ ವಯಸ್ಸಿನಲ್ಲಿಯೂ ಅನುಕರಣೀಯ ಸಾಧನೆಯನ್ನು ಸಾಧಿಸಿದ್ದಾರೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ದೇಹದಲ್ಲಿ ತುಂಬಾ ಉತ್ಸಾಹವಿದೆ ಎಂದು ಹೇಳುವ ಅವರು, ಬ್ರೆಡ್, ಮೊಸರಿನ ಜೊತೆಗೆ ಹೆಚ್ಚು ಹೆಚ್ಚು ಹಾಲು ಕುಡಿಯುತ್ತಾರೆ. ಪ್ರತಿದಿನ 250 ಗ್ರಾಂ ತುಪ್ಪವನ್ನು ರೊಟ್ಟಿ ಅಥವಾ ಚೂರ್ಮಾದೊಂದಿಗೆ ತಿನ್ನುತ್ತಾರೆ.
ಇಡೀ ಕುಟುಂಬ ಕ್ರೀಡೆಯಲ್ಲಿ ಹೆಸರು ಮಾಡಿದೆ
ರಾಂಬಾಯಿ ಅವರ ಇಡೀ ಕುಟುಂಬ ಕ್ರೀಡೆಯಲ್ಲಿ ಹೆಸರು ಮಾಡಿದೆ. ಅವರ ಪುತ್ರಿ ಸಂತಾರಾ ದೇವಿ (62) ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ರಾಂಬಾಯಿ ಅವರ ಪುತ್ರ 70 ವರ್ಷದ ಮುಖ್ತಿಯಾರ್ ಸಿಂಗ್ 200 ಮೀ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೊಸೆ ಭಟೇರಿ ರಿಲೇಯಲ್ಲಿ ಚಿನ್ನ ಮತ್ತು 200 ಮೀ.ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ.