AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 4ನೇ ಸ್ವರ್ಣ; ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಕಬಡ್ಡಿ ತಂಡ..!

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕಬಡ್ಡಿಯಲ್ಲಿ ಒಂದೇ ದಿನ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ಮಹಿಳಾ ತಂಡ ಇರಾನ್ ಅನ್ನು ಸೋಲಿಸಿದರೆ, ಪುರುಷರ ತಂಡ 40-34 ಅಂಕಗಳಿಂದ ಗೆದ್ದು ಚಿನ್ನ ಗೆದ್ದಿದೆ. ಈ ಮಹತ್ವದ ಗೆಲುವುಗಳು ಭಾರತಕ್ಕೆ ಏಷ್ಯನ್ ಕ್ರೀಡಾಕೂಟದಲ್ಲಿ ಮೂರನೇ ಮತ್ತು ನಾಲ್ಕನೇ ಚಿನ್ನದ ಪದಕಗಳಾಗಿವೆ.

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 4ನೇ ಸ್ವರ್ಣ; ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಕಬಡ್ಡಿ ತಂಡ..!
ಕಬಡ್ಡಿ ತಂಡ
ಪೃಥ್ವಿಶಂಕರ
|

Updated on:Sep 26, 2026 | 4:48 PM

Share

2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅದರಲ್ಲೂ ಒಂದೇ ದಿನ ಭಾರತಕ್ಕೆ ಒಂದೇ ಕ್ರೀಡೆಯಲ್ಲಿ ಎರಡೆರಡು ಚಿನ್ನದ ಪದಕಗಳು ಲಭಿಸಿವೆ. ಇಂದು ಬೆಳಿಗ್ಗೆ ನಡೆದ ಮಹಿಳಾ ಕಬಡ್ಡಿ ಫೈನಲ್​ನಲ್ಲಿ ಭಾರತದ ಮಹಿಳಾ ತಂಡ ಇರಾನ್ ಮಹಿಳಾ ತಂಡವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು. ಇದೀಗ ಭಾರತದ ಪುರುಷರ ಕಬಡ್ಡಿ ತಂಡವು ಫೈನಲ್‌ನಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ತಂಡವನ್ನು 40-34 ಅಂಕಗಳಿಂದ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದೆ.

ಭಾರತಕ್ಕೆ ನಾಲ್ಕನೇ ಚಿನ್ನದ ಪದಕ

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಇರಾನ್ 1 ಅಂಕದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ, ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿ 23 ಅಂಕಗಳನ್ನು ಕಲೆಹಾಕಿದರು. ಇತ್ತ ದ್ವಿತೀಯಾರ್ಧದಲ್ಲಿ ಇರಾನ್ ಕೇವಲ 16 ಅಂಕಗಳನ್ನು ಗಳಿಸಿತು. ಹೀಗಾಗಿ ಭಾರತ 6 ಅಂಕಗಳ ಅಂತರದಿಂದ ಫೈನಲ್ ಗೆದ್ದಿತು. ಮೇಲೆ ಹೇಳಿದಂತೆ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಇದು ಭಾರತದ ನಾಲ್ಕನೇ ಚಿನ್ನದ ಪದಕವಾಗಿದೆ.

9ನೇ ಚಿನ್ನದ ಪದಕ

ಈ ಗೆಲುವಿನೊಂದಿಗೆ ಭಾರತ ತಂಡ 2018 ರ ಜಕಾರ್ತಾ ಕ್ರೀಡಾಕೂಟದಲ್ಲಿನ ಸೋಲಿಗೆ ಸತತ ಎರಡನೇ ಆವೃತ್ತಿಯಲ್ಲಿ ಸೇಡು ತೀರಿಸಿಕೊಂಡಿದೆ. 2018 ರ ಆವೃತ್ತಿಯಲ್ಲಿ ಇದೇ ಇರಾನ್ ವಿರುದ್ಧ ಭಾರತ ಸೋಲನುಭವಿಸಿತ್ತು. ಆದರೆ ಅದಕ್ಕೂ ಮುನ್ನ ನಡೆದಿದ್ದ ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ಸತತ ಏಳು ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. ಇನ್ನು 2023 ರಲ್ಲಿ ನಡೆದಿದ್ದ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಏಷ್ಯನ್ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಇದು ಭಾರತದ ಒಟ್ಟಾರೆ 9 ನೇ ಚಿನ್ನದ ಪದಕವಾಗಿದೆ.

ಏಷ್ಯನ್ ಗೇಮ್ಸ್​ 2026: ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ 2ನೇ ಚಿನ್ನ

ಮಹಿಳಾ ತಂಡಕ್ಕೂ ಚಿನ್ನದ ಪದಕ

ಭಾರತದ ಮಹಿಳಾ ಕಬಡ್ಡಿ ತಂಡವು ಕೂಡ ಇಂದು ನಡೆದ ಫೈನಲ್‌ನಲ್ಲಿ ಇರಾನ್ ಮಹಿಳಾ ತಂಡವನ್ನು 37- 34 ಅಂಕಗಳ ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಮಹಿಳಾ ಕಬಡ್ಡಿ ಫೈನಲ್ಸ್ ಕೂಡ ರೋಮಾಂಚಕವಾಗಿತ್ತು. ಮೊದಲಾರ್ಧದಲ್ಲಿ ಭಾರತ 22-16 ಮುನ್ನಡೆ ಸಾಧಿಸಿತ್ತು, ಆದರೆ ದ್ವಿತೀಯಾರ್ಧದಲ್ಲಿ ಇರಾನ್ ಪುನರಾಗಮನ ಮಾಡಿ 18-15 ರಿಂದ ಮುನ್ನಡೆ ಸಾಧಿಸಿತು. ಅಂತಿಮವಾಗಿ ಭಾರತ ವಿಜಯಶಾಲಿಯಾಯಿತು. 2018 ರ ಜಕಾರ್ತಾ ಕ್ರೀಡಾಕೂಟವನ್ನು ಹೊರತುಪಡಿಸಿ, ಮಹಿಳಾ ತಂಡವು ಈಗ ಪ್ರತಿಯೊಂದು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Sat, 26 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ