AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026 ರ ಕ್ರೀಡಾ ಕ್ಯಾಲೆಂಡರ್; ಯಾವೆಲ್ಲಾ ಪ್ರಮುಖ ಕ್ರೀಡಾಕೂಟಗಳು ನಡೆಯಲಿವೆ ಗೊತ್ತಾ?

Sports Calendar 2026: 2026ರ ವರ್ಷವು ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ. ಕ್ರಿಕೆಟ್ ವಿಶ್ವಕಪ್‌ಗಳು, ಫಿಫಾ ವಿಶ್ವಕಪ್, ಒಲಿಂಪಿಕ್ಸ್ ಅರ್ಹತಾ ಸುತ್ತುಗಳು ಸೇರಿದಂತೆ ಹಲವು ಪ್ರಮುಖ ಕ್ರೀಡಾಕೂಟಗಳು ನಡೆಯಲಿವೆ. ಭಾರತ ಕ್ರಿಕೆಟ್, ಚೆಸ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪಾಲ್ಗೊಂಡು ಪದಕಗಳ ಬೇಟೆಗೆ ಸಿದ್ಧವಾಗಿದೆ. ಯುವ ಆಟಗಾರರಿಗೆ ಇದು ದೊಡ್ಡ ವೇದಿಕೆಯಾಗಲಿದೆ.

2026 ರ ಕ್ರೀಡಾ ಕ್ಯಾಲೆಂಡರ್; ಯಾವೆಲ್ಲಾ ಪ್ರಮುಖ ಕ್ರೀಡಾಕೂಟಗಳು ನಡೆಯಲಿವೆ ಗೊತ್ತಾ?
Sports Calendar 2026
ಪೃಥ್ವಿಶಂಕರ
|

Updated on:Jan 01, 2026 | 3:46 PM

Share

2025 ಕ್ಕೆ ಅದ್ಧೂರಿಯಾಗಿ ವಿದಾಯ ಹೇಳಿರುವ ಕ್ರೀಡಾಲೋಕ ಇದೀಗ 2026 ರಲ್ಲಿ (Sports Calendar 2026) ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ. ಈ ವರ್ಷ ಕ್ರೀಡಾ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಿದೆ. ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಪ್ರಮುಖ ಕ್ರೀಡಾಕೂಟಗಳು ಈ ವರ್ಷ ಜರುಗಲಿವೆ. ಕ್ರಿಕೆಟ್‌ನಲ್ಲಿ ಐಸಿಸಿ (ICC) ಈವೆಂಟ್​ಗಳು ನಡೆಯಲಿದ್ದರೆ, 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಪ್ರಯಾಣವೂ ಪ್ರಾರಂಭವಾಗಲಿದೆ. ಕ್ರಿಕೆಟ್‌ನಿಂದ ಚೆಸ್, ಬ್ಯಾಡ್ಮಿಂಟನ್ ಮತ್ತು ಅಥ್ಲೆಟಿಕ್ಸ್‌ವರೆಗೆ, ಪ್ರತಿಯೊಂದು ಕ್ಷೇತ್ರವು ವರ್ಷದ ಮೊದಲ ತಿಂಗಳಿನಿಂದಲೇ ಅಭಿಮಾನಿಗಳನ್ನು ರಂಜಿಸಲಿದೆ.

ಕ್ರಿಕೆಟ್‌ನಲ್ಲಿ 2 ಪ್ರಮುಖ ಈವೆಂಟ್ಸ್

ಈ ವರ್ಷ ಕ್ರಿಕೆಟ್‌ನೊಂದಿಗೆ ಆರಂಭವಾಗಲಿದೆ. ಜನವರಿ 15 ರಿಂದ ಫೆಬ್ರವರಿ 6 ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಅಂಡರ್-19 ವಿಶ್ವಕಪ್ ನಡೆಯಲಿದ್ದು, ಅಲ್ಲಿ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಯುವ ತಾರೆಯರು ಮಿಂಚುವ ಅವಕಾಶವನ್ನು ಹೊಂದಿದ್ದಾರೆ. ಮುಂದೆ, ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್ ನಡೆಯಲಿದ್ದು, ಅಲ್ಲಿ ಭಾರತ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದೆ. ಟೆನಿಸ್‌ನಲ್ಲಿ, ಆಸ್ಟ್ರೇಲಿಯನ್ ಓಪನ್ ಜನವರಿಯಲ್ಲಿ ನಡೆಯಲಿದ್ದು, ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು ಅವರಂತಹ ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ. ಫುಟ್‌ಬಾಲ್ ಅಭಿಮಾನಿಗಳಿಗೆ, ಭಾರತೀಯ ಮಹಿಳಾ ತಂಡವು ದೀರ್ಘ ವಿರಾಮದ ನಂತರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ನಲ್ಲಿ ಭಾಗವಹಿಸಲಿದೆ.

ಚೆಸ್, ಬ್ಯಾಡ್ಮಿಂಟನ್ ಮತ್ತು ಮಹಿಳಾ ಕ್ರಿಕೆಟ್

ಏಪ್ರಿಲ್‌ನಲ್ಲಿ ಸೈಪ್ರಸ್‌ನಲ್ಲಿ ನಡೆಯುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಹಾಲಿ ಚಾಂಪಿಯನ್ ಡಿ. ಗುಕೇಶ್ ಸೇರಿದಂತೆ ಪ್ರಜ್ಞಾನಂದ, ವೈಶಾಲಿ, ಕೊನೆರೂ ಹಂಪಿ ಮತ್ತು ದಿವ್ಯಾ ಅವರಂತಹ ಚೆಸ್ ಚತುರರು ಭಾಗವಹಿಸಲಿದ್ದಾರೆ. ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮಂಗೋಲಿಯಾದಲ್ಲಿ ನಡೆಯಲಿದೆ. ಏತನ್ಮಧ್ಯೆ, ಭಾರತೀಯ ತಂಡಗಳು ಅಹಮದಾಬಾದ್‌ನಲ್ಲಿ ನಡೆಯುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್, ಥಾಮಸ್-ಉಬರ್ ಕಪ್ ಬ್ಯಾಡ್ಮಿಂಟನ್ ಮತ್ತು ಲಂಡನ್‌ನಲ್ಲಿ ನಡೆಯುವ ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ಗಳಿಗೆ ಅರ್ಹತೆ ಪಡೆದಿವೆ.

ಇದರ ನಂತರ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಜೂನ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದೆ. ಅಥ್ಲೆಟಿಕ್ಸ್‌ನಲ್ಲಿ ಡೈಮಂಡ್ ಲೀಗ್ ಆರಂಭವಾಗಲಿದ್ದು, ನೀರಜ್ ಚೋಪ್ರಾ ಪದಕ ಗೆಲ್ಲುವ ಇರಾದೆಯಲಿದ್ದಾರೆ. ಇದಲ್ಲದೆ, ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್‌ಗಳು, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಸಹ ಈ ಅವಧಿಯಲ್ಲಿ ನಡೆಯಲಿವೆ. ಪ್ರಮುಖ ಫಿಫಾ ವಿಶ್ವಕಪ್ ಜೂನ್‌ನಲ್ಲಿ ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ ಮತ್ತು ಕೆನಡಾದಲ್ಲಿ ನಡೆಯಲಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಏಷ್ಯನ್ ಕ್ರೀಡಾಕೂಟದವರೆಗೆ

ಜುಲೈ-ಆಗಸ್ಟ್‌ನಲ್ಲಿ, ಕಾಮನ್‌ವೆಲ್ತ್ ಕ್ರೀಡಾಕೂಟವು ಗ್ಲ್ಯಾಸ್ಗೋದಲ್ಲಿ ನಡೆಯಲಿದ್ದು, ಅಲ್ಲಿ ಭಾರತವು ವಿಶೇಷವಾಗಿ ಅಥ್ಲೆಟಿಕ್ಸ್, ಬಾಕ್ಸಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದೆ. ಆದರೆ ಈ ಕ್ರೀಡಾಕೂಟದಿಂದ ಶೂಟಿಂಗ್, ಕುಸ್ತಿ ಮತ್ತು ಹಾಕಿಯಂತಹ ಕ್ರೀಡೆಗಳನ್ನು ಹೊರಗಿಟ್ಟಿರುವುದು ಭಾರತಕ್ಕೆ ಬರುವ ಪದಕಗಳ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ಏತನ್ಮಧ್ಯೆ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಳು ದೆಹಲಿಯಲ್ಲಿ, ಹಾಕಿ ವಿಶ್ವಕಪ್ (ಪುರುಷರ ತಂಡ ಅರ್ಹತಾ ಪಂದ್ಯಗಳು, ಮಹಿಳಾ ಅರ್ಹತಾ ಪಂದ್ಯಗಳು) ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಮತ್ತು ಭುವನೇಶ್ವರದಲ್ಲಿ ಅಥ್ಲೆಟಿಕ್ಸ್ ಪ್ರವಾಸ ನಡೆಯಲಿದೆ. ಮುಂದೆ, ಸೆಪ್ಟೆಂಬರ್‌ನಲ್ಲಿ, ಜಪಾನ್‌ನಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಡೈಮಂಡ್ ಲೀಗ್ ಫೈನಲ್ಸ್ ಮತ್ತು ಚೆಸ್ ಒಲಿಂಪಿಯಾಡ್ ಸಹ ಈ ಸಮಯದಲ್ಲಿ ನಡೆಯಲಿದೆ.

ವರ್ಷಾಂತ್ಯ ಹೀಗಿರಲಿದೆ

ವರ್ಷದ ಕೊನೆಯ ತಿಂಗಳುಗಳಲ್ಲಿ ಬಹ್ರೇನ್‌ನಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌, ವೇಟ್‌ಲಿಫ್ಟಿಂಗ್ ವಿಶ್ವ ಚಾಂಪಿಯನ್‌ಶಿಪ್‌, ದೋಹಾದಲ್ಲಿ ISSF ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಡಿಸೆಂಬರ್‌ನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ (ದಿನಾಂಕಗಳು ಮತ್ತು ಸ್ಥಳ ಇನ್ನೂ ನಿರ್ಧರಿಸಲಾಗಿಲ್ಲ) ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Thu, 1 January 26

ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು