13ನೇ ಅವೃತಿಯ ಐಪಿಎಲ್​ನಲ್ಲಿ ಹಲವು ದಾಖಲೆಗಳು ಉರುಳಲಿವೆ

13ನೇ ಅವೃತಿಯ ಐಪಿಎಲ್​ನಲ್ಲಿ ಹಲವು ದಾಖಲೆಗಳು ಉರುಳಲಿವೆ

ಯುನೈಟೆಡ್ ಅರಬ್ ಎಮಿರೇಟ್ಸ್​ನ ಮೂರು ನಗರಗಳಲ್ಲಿ ಆಯೋಜನೆಗೊಳ್ಳ್ಳುತ್ತಿರುವ ಇಂಡಿಯನ್ ಪ್ರಿಮೀಯರ್ ಲೀಗ್​ನ 13 ನೇ ಆವೃತಿಯು ಕೆಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡದ ಸ್ಕಿಪ್ಪರ್ ಮಹೇಂದ್ರ ಸಿಗ್ ಧೋನಿ ಕೂಡ ತಮ್ಮ ಹೆಸರಿಗೆ ನೂತನ ದಾಖಲೆಗಳನ್ನು ಬರೆದುಕೊಳ್ಳಲಿದ್ದಾರೆ. ಈಗಿನ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಯಾವ ಫಾರ್ಮಾಟ್​ನಲ್ಲಾದರೂ ನೀರು ಕುಡಿದಷ್ಟೇ ಸುಲಭವಾಗಿ ರನ್ ಗಳಿಸುತ್ತಾರೆ. ಟೆಸ್ಟ್​ಗಳಲ್ಲಿ 7,000ಕ್ಕಿಂತ ಹೆಚ್ಚು, ಒಡಿಐಗಳಲ್ಲಿ 11,867 ಮತ್ತು ಟಿ20 ಕ್ರಿಕೆಟ್​ನಲ್ಲಿ […]

Arun Belly

|

Sep 18, 2020 | 5:23 PM

ಯುನೈಟೆಡ್ ಅರಬ್ ಎಮಿರೇಟ್ಸ್​ನ ಮೂರು ನಗರಗಳಲ್ಲಿ ಆಯೋಜನೆಗೊಳ್ಳ್ಳುತ್ತಿರುವ ಇಂಡಿಯನ್ ಪ್ರಿಮೀಯರ್ ಲೀಗ್​ನ 13 ನೇ ಆವೃತಿಯು ಕೆಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡದ ಸ್ಕಿಪ್ಪರ್ ಮಹೇಂದ್ರ ಸಿಗ್ ಧೋನಿ ಕೂಡ ತಮ್ಮ ಹೆಸರಿಗೆ ನೂತನ ದಾಖಲೆಗಳನ್ನು ಬರೆದುಕೊಳ್ಳಲಿದ್ದಾರೆ.

ಈಗಿನ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಯಾವ ಫಾರ್ಮಾಟ್​ನಲ್ಲಾದರೂ ನೀರು ಕುಡಿದಷ್ಟೇ ಸುಲಭವಾಗಿ ರನ್ ಗಳಿಸುತ್ತಾರೆ. ಟೆಸ್ಟ್​ಗಳಲ್ಲಿ 7,000ಕ್ಕಿಂತ ಹೆಚ್ಚು, ಒಡಿಐಗಳಲ್ಲಿ 11,867 ಮತ್ತು ಟಿ20 ಕ್ರಿಕೆಟ್​ನಲ್ಲಿ 8,000 ಕ್ಕೂ ಅಧಿಕ ರನ್​ಗಳನ್ನು ಬಾರಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಅವರು ಇನ್ನೂ ನೂರು ರನ್​ಗಳನ್ನು ಗಳಿಸಿದರೆ, ಈ ಫಾರ್ಮಾಟ್​ನಲ್ಲಿ 9,000 ರನ್ ಶೇಖರಿಸಿದ ಭಾರತದ ಮೊದಲ ಮತ್ತು ವಿಶ್ವದ ಏಳನೇ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ. ಈ ಎಲೀಟ್ ಕ್ಲಬ್​ನಲ್ಲಿರುವ ಇತರ ಆಟಗಾರರೆಂದರೆ, ಕ್ರಿಸ್ ಗೇಲ್, ಕೈರನ್ ಪೊಲ್ಲಾರ್ಡ್, ಬ್ರೆಂಡನ್ ಮೆಕಲ್ಲಮ್, ಶೋಯೆಬ್ ಮಲ್ಲಿಕ್, ಡೇವಿಡ್ ವಾರ್ನರ್ ಮತ್ತು ಆರನ್ ಫಿಂಚ್. 

ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ (193) ಸಿಎಸ್​ಕೆಯ ಸುರೇಶ್ ರೈನಾ ಹೆಸರಲ್ಲಿದೆ. ಅವರ ನಾಯಕ, ಧೋನಿ 190 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು ಇನ್ನು 4 ಪಂದ್ಯಗಳನ್ನಾಡಿದರೆ ರೈನಾ ದಾಖಲೆಯನ್ನು ಹಿಂದಿಕ್ಕಲ್ಲಿದ್ದಾರೆ. ರೈನಾ ವೈಯಕ್ತಿಕ ಕಾರಣಗಳಿದಾಗಿ ಈ ಆವೃತಿಯಲ್ಲಿ ಆಡುತ್ತಿಲ್ಲವಾದ್ದರಿಂದ ಈ ದಾಖಲೆ ಅವರಿಂದ ಜಾರಿ ಧೋನಿ ತೆಕ್ಕೆಗೆ ಬೀಳಲಿದೆ.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಯಾರು ಬಾರಿಸಿದ್ದಾರೆ ಆಂತ ನಿಮಗೆ ಗೊತ್ತಿರಲಿಕ್ಕೂ ಸಾಕು. ಹೌದು ನಿಮ್ಮ ಊಹೆ ಸರಿ, ಕ್ರಿಸ್ ಗೇಲ್ ಬಿಟ್ಟರೆ ಮತ್ಯಾರ ಹೆಸರಲ್ಲಿ ಈ ದಾಖಲೆ ಇರೋದಿಕ್ಕೆ ಸಾಧ್ಯ? ಟಿ20 ಕ್ರಿಕೆಟ್​ನಲ್ಲಿ ಗೇಲ್ ಇದುವರೆಗೆ 978 ಸಿಕ್ಸ್​ಗಳನ್ನು ಚಚ್ಚಿದ್ದು 1,000 ಸಿಕ್ಸರ್​ಗಳ ಅಸಾಮಾನ್ಯ ದಾಖಲೆಯಿಂದ ಕೇವಲ 22 ಸಿಕ್ಸರ್​ಗಳಷ್ಟು ದೂರವಿದ್ದಾರೆ. ಅವರು ಆಡುವ ರೀತಿ ಎಲ್ಲರಿಗೆ ಗೊತ್ತಿದೆ, ಹಾಗಾಗಿ ಈ ದಾಖಲೆ ಈ ಬಾರಿಯ ಐಪಿಎಲ್​ನಲ್ಲಿ ದಾಖಲಾಗುವುದು ನಿಶ್ಚಿತವಾಗಿದೆ. 

ವಿಸ್ಡನ್​ನಿಂದ 21ನೇ ಶತಮಾನದ ‘ಮೋಸ್ಟ್ ವ್ಯಾಲುಯೇಬಲ್ ಕ್ರಿಕೆಟರ್’ ಎಂಬ ಗೌರವಕ್ಕೆ ಪಾತ್ರರಾಗಿರುವ ಸಿಎಸ್​ಕೆಯ ರವೀಂದ್ರ ಜಡೇಜಾ ಒಂದು ಅಪರೂಪದ ರೆಕಾರ್ಡ್ ತಮ್ಮದಾಗಿಸಿಕೊಳ್ಳುವ ಹೊಸ್ತಿಲಲ್ಲಿದ್ದಾರೆ. ಐಪಿಎಲ್​ನಲ್ಲಿ ಈಗಾಗಲೇ 100 ವಿಕೆಟ್ ಕಬಳಿಸಿರುವ ಜದ್ದು ಇನ್ನೂ 72 ರನ್ ಗಳಿಸಿದರೆ, 2,000 ರನ್ ಗಡಿ ದಾಟುವ ಮೂಲಕ ಐಪಿಎಲ್​ನಲ್ಲಿ ಈ ಸಾಧನೆ ಮೊಟ್ಟಮೊದಲ ಆಲ್​ರೌಂಡರ್ ಎನಿಸಿಕೊಳ್ಳಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್​ ಟೀಮಿನ ಜಸ್ಪ್ರಿತ್ ಬುಮ್ರಾ ಇನ್ನು 18 ವಿಕೆಟ್​ಗಳನ್ನು ಪಡೆದರೆ, ಟಿ20 ಕ್ರಿಕೆಟ್​ನಲ್ಲಿ 200 ವಿಕೆಟ್ ಪಡೆದ ಮೊದಲ ಭಾರತೀಯ ವೇಗದ ಬೌಲರ್ ಅನಿಸಿಕೊಳ್ಳಲಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada