ಯುನೈಟೆಡ್ ಅರಬ್ ಎಮಿರೇಟ್ಸ್ನ ಮೂರು ನಗರಗಳಲ್ಲಿ ಆಯೋಜನೆಗೊಳ್ಳ್ಳುತ್ತಿರುವ ಇಂಡಿಯನ್ ಪ್ರಿಮೀಯರ್ ಲೀಗ್ನ 13 ನೇ ಆವೃತಿಯು ಕೆಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡದ ಸ್ಕಿಪ್ಪರ್ ಮಹೇಂದ್ರ ಸಿಗ್ ಧೋನಿ ಕೂಡ ತಮ್ಮ ಹೆಸರಿಗೆ ನೂತನ ದಾಖಲೆಗಳನ್ನು ಬರೆದುಕೊಳ್ಳಲಿದ್ದಾರೆ. ಈಗಿನ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಯಾವ ಫಾರ್ಮಾಟ್ನಲ್ಲಾದರೂ ನೀರು ಕುಡಿದಷ್ಟೇ ಸುಲಭವಾಗಿ ರನ್ ಗಳಿಸುತ್ತಾರೆ. ಟೆಸ್ಟ್ಗಳಲ್ಲಿ 7,000ಕ್ಕಿಂತ ಹೆಚ್ಚು, ಒಡಿಐಗಳಲ್ಲಿ 11,867 ಮತ್ತು ಟಿ20 ಕ್ರಿಕೆಟ್ನಲ್ಲಿ […]
ಅರುಣ್ ಕುಮಾರ್ ಬೆಳ್ಳಿ
Updated on:
Sep 18, 2020 | 5:23 PM
ಯುನೈಟೆಡ್ ಅರಬ್ ಎಮಿರೇಟ್ಸ್ನ ಮೂರು ನಗರಗಳಲ್ಲಿ ಆಯೋಜನೆಗೊಳ್ಳ್ಳುತ್ತಿರುವ ಇಂಡಿಯನ್ ಪ್ರಿಮೀಯರ್ ಲೀಗ್ನ 13 ನೇ ಆವೃತಿಯು ಕೆಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡದ ಸ್ಕಿಪ್ಪರ್ ಮಹೇಂದ್ರ ಸಿಗ್ ಧೋನಿ ಕೂಡ ತಮ್ಮ ಹೆಸರಿಗೆ ನೂತನ ದಾಖಲೆಗಳನ್ನು ಬರೆದುಕೊಳ್ಳಲಿದ್ದಾರೆ.
ಈಗಿನ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಯಾವ ಫಾರ್ಮಾಟ್ನಲ್ಲಾದರೂ ನೀರು ಕುಡಿದಷ್ಟೇ ಸುಲಭವಾಗಿ ರನ್ ಗಳಿಸುತ್ತಾರೆ. ಟೆಸ್ಟ್ಗಳಲ್ಲಿ 7,000ಕ್ಕಿಂತ ಹೆಚ್ಚು, ಒಡಿಐಗಳಲ್ಲಿ 11,867 ಮತ್ತು ಟಿ20 ಕ್ರಿಕೆಟ್ನಲ್ಲಿ 8,000 ಕ್ಕೂ ಅಧಿಕ ರನ್ಗಳನ್ನು ಬಾರಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅವರು ಇನ್ನೂ ನೂರು ರನ್ಗಳನ್ನು ಗಳಿಸಿದರೆ, ಈ ಫಾರ್ಮಾಟ್ನಲ್ಲಿ 9,000 ರನ್ ಶೇಖರಿಸಿದ ಭಾರತದ ಮೊದಲ ಮತ್ತು ವಿಶ್ವದ ಏಳನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಈ ಎಲೀಟ್ ಕ್ಲಬ್ನಲ್ಲಿರುವ ಇತರ ಆಟಗಾರರೆಂದರೆ, ಕ್ರಿಸ್ ಗೇಲ್, ಕೈರನ್ ಪೊಲ್ಲಾರ್ಡ್, ಬ್ರೆಂಡನ್ ಮೆಕಲ್ಲಮ್, ಶೋಯೆಬ್ ಮಲ್ಲಿಕ್, ಡೇವಿಡ್ ವಾರ್ನರ್ ಮತ್ತು ಆರನ್ ಫಿಂಚ್.
ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ (193) ಸಿಎಸ್ಕೆಯ ಸುರೇಶ್ ರೈನಾ ಹೆಸರಲ್ಲಿದೆ. ಅವರ ನಾಯಕ, ಧೋನಿ 190 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು ಇನ್ನು 4 ಪಂದ್ಯಗಳನ್ನಾಡಿದರೆ ರೈನಾ ದಾಖಲೆಯನ್ನು ಹಿಂದಿಕ್ಕಲ್ಲಿದ್ದಾರೆ. ರೈನಾ ವೈಯಕ್ತಿಕ ಕಾರಣಗಳಿದಾಗಿ ಈ ಆವೃತಿಯಲ್ಲಿ ಆಡುತ್ತಿಲ್ಲವಾದ್ದರಿಂದ ಈ ದಾಖಲೆ ಅವರಿಂದ ಜಾರಿ ಧೋನಿ ತೆಕ್ಕೆಗೆ ಬೀಳಲಿದೆ.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಯಾರು ಬಾರಿಸಿದ್ದಾರೆ ಆಂತ ನಿಮಗೆ ಗೊತ್ತಿರಲಿಕ್ಕೂ ಸಾಕು. ಹೌದು ನಿಮ್ಮ ಊಹೆ ಸರಿ, ಕ್ರಿಸ್ ಗೇಲ್ ಬಿಟ್ಟರೆ ಮತ್ಯಾರ ಹೆಸರಲ್ಲಿ ಈ ದಾಖಲೆ ಇರೋದಿಕ್ಕೆ ಸಾಧ್ಯ? ಟಿ20 ಕ್ರಿಕೆಟ್ನಲ್ಲಿ ಗೇಲ್ ಇದುವರೆಗೆ 978 ಸಿಕ್ಸ್ಗಳನ್ನು ಚಚ್ಚಿದ್ದು 1,000 ಸಿಕ್ಸರ್ಗಳ ಅಸಾಮಾನ್ಯ ದಾಖಲೆಯಿಂದ ಕೇವಲ 22 ಸಿಕ್ಸರ್ಗಳಷ್ಟು ದೂರವಿದ್ದಾರೆ. ಅವರು ಆಡುವ ರೀತಿ ಎಲ್ಲರಿಗೆ ಗೊತ್ತಿದೆ, ಹಾಗಾಗಿ ಈ ದಾಖಲೆ ಈ ಬಾರಿಯ ಐಪಿಎಲ್ನಲ್ಲಿ ದಾಖಲಾಗುವುದು ನಿಶ್ಚಿತವಾಗಿದೆ.
ವಿಸ್ಡನ್ನಿಂದ 21ನೇ ಶತಮಾನದ ‘ಮೋಸ್ಟ್ ವ್ಯಾಲುಯೇಬಲ್ ಕ್ರಿಕೆಟರ್’ ಎಂಬ ಗೌರವಕ್ಕೆ ಪಾತ್ರರಾಗಿರುವ ಸಿಎಸ್ಕೆಯ ರವೀಂದ್ರ ಜಡೇಜಾ ಒಂದು ಅಪರೂಪದ ರೆಕಾರ್ಡ್ ತಮ್ಮದಾಗಿಸಿಕೊಳ್ಳುವ ಹೊಸ್ತಿಲಲ್ಲಿದ್ದಾರೆ. ಐಪಿಎಲ್ನಲ್ಲಿ ಈಗಾಗಲೇ 100 ವಿಕೆಟ್ ಕಬಳಿಸಿರುವ ಜದ್ದು ಇನ್ನೂ 72 ರನ್ ಗಳಿಸಿದರೆ, 2,000 ರನ್ ಗಡಿ ದಾಟುವ ಮೂಲಕ ಐಪಿಎಲ್ನಲ್ಲಿ ಈ ಸಾಧನೆ ಮೊಟ್ಟಮೊದಲ ಆಲ್ರೌಂಡರ್ ಎನಿಸಿಕೊಳ್ಳಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಟೀಮಿನ ಜಸ್ಪ್ರಿತ್ ಬುಮ್ರಾ ಇನ್ನು 18 ವಿಕೆಟ್ಗಳನ್ನು ಪಡೆದರೆ, ಟಿ20 ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಮೊದಲ ಭಾರತೀಯ ವೇಗದ ಬೌಲರ್ ಅನಿಸಿಕೊಳ್ಳಲಿದ್ದಾರೆ.
Arun Belly
ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.