ಮತ್ತೊಂದು ಡಿ ವಿಲಿಯರ್ಸ್ ಸ್ಪೆಷಲ್, ಆರ್​ಸಿಬಿ 7 ವಿಕೆಟ್ ಜಯ

ರಾಯಲ್ ಚಾಲೆಂಜರ್ಸ್ ಟೀಮಿನ ಎಬಿ ಡಿವಿಲಿಯರ್ಸ್ ತಾನ್ಯಾಕೆ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಇನ್ನೂ ಅತ್ಯಂತ ಜನಪ್ರಿಯ ಆಟಗಾರ ಎನ್ನುವುದನ್ನು ಇಂದು ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಸಾಬೀತು ಮಾಡಿದರು. ದಕ್ಷಿಣ ಆಫ್ರಿಕಾದವರಾದರೂ ಬೆಂಗಳೂರಿನ ದತ್ತುಪುತ್ರನಂತಿರುವ ಎಬಿಡಿ ರಾಜಸ್ತಾನ ರಾಯಲ್ಸ್ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 22 ಎಸೆತಗಳಲ್ಲಿ ಅಜೇಯ 55 ರನ್ (1X4 6X6) ಚಚ್ಚಿ ಆರ್​ಸಿಬಿಗೆ 7 ವಿಕೆಟ್​ಗಳ ರೋಚಕ ಗೆಲುವು ದೊರಕಿಸಿಕೊಟ್ಟರು. ಗೆಲುವಿಗೆ ಬೇಕಾಗಿದ್ದ 179ರನ್​ಗಳ ಬೆನ್ನಟ್ಟಿದ ವಿರಾಟ್ ಕೊಹ್ಲಿ ಟೀಮಿನ […]

ಮತ್ತೊಂದು ಡಿ ವಿಲಿಯರ್ಸ್ ಸ್ಪೆಷಲ್, ಆರ್​ಸಿಬಿ 7 ವಿಕೆಟ್ ಜಯ
ಎಬಿ ಡಿವಿಲಿಯರ್ಸ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 17, 2020 | 9:59 PM

ರಾಯಲ್ ಚಾಲೆಂಜರ್ಸ್ ಟೀಮಿನ ಎಬಿ ಡಿವಿಲಿಯರ್ಸ್ ತಾನ್ಯಾಕೆ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಇನ್ನೂ ಅತ್ಯಂತ ಜನಪ್ರಿಯ ಆಟಗಾರ ಎನ್ನುವುದನ್ನು ಇಂದು ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಸಾಬೀತು ಮಾಡಿದರು. ದಕ್ಷಿಣ ಆಫ್ರಿಕಾದವರಾದರೂ ಬೆಂಗಳೂರಿನ ದತ್ತುಪುತ್ರನಂತಿರುವ ಎಬಿಡಿ ರಾಜಸ್ತಾನ ರಾಯಲ್ಸ್ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 22 ಎಸೆತಗಳಲ್ಲಿ ಅಜೇಯ 55 ರನ್ (1X4 6X6) ಚಚ್ಚಿ ಆರ್​ಸಿಬಿಗೆ 7 ವಿಕೆಟ್​ಗಳ ರೋಚಕ ಗೆಲುವು ದೊರಕಿಸಿಕೊಟ್ಟರು.

ಗೆಲುವಿಗೆ ಬೇಕಾಗಿದ್ದ 179ರನ್​ಗಳ ಬೆನ್ನಟ್ಟಿದ ವಿರಾಟ್ ಕೊಹ್ಲಿ ಟೀಮಿನ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಧೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಪ್ರಾರಂಭಿಸಿದ ಆರನ್ ಫಿಂಚ್ ಕೇವಲ ಎರಡು ಸಿಕ್ಸರ್​ಗಳನ್ನು ಬಾರಿ ಭರವಸೆ ಮೂಡಿಸುತ್ತಿದ್ದಂತೆಯೇ 14 ರನ್​ಗಳಿಗೆ ಔಟಾದರು. ನಂತರ ಪಡಿಕ್ಕಲ್​ರನ್ನು ಮತ್ತು ಕೊಹ್ಲಿ ಎಚ್ಚರಿಕೆ ಮಿಶ್ರಿತ ಆಕ್ರಮಣಕಾರಿ ಆಟವಾಡಿ ಸ್ಕೋರನ್ನು 102ಕ್ಕೆ ಕೊಂಡೊಯ್ದರು. ಈವತ್ತು ಸ್ವಲ್ಪ ನಿಧಾನವಾಗಿಯೇ ಬ್ಯಾಟ್ ಮಾಡಿದ ಪಡಿಕ್ಕಲ್ 37 ಎಸೆತಗಳಲ್ಲಿ 35 ರನ್ (2X4) ಗಳಿಸಿ ಔಟಾದರು. 32 ಎಸೆತಗಳಲ್ಲಿ 43 ರನ್ (1X4 2X6) ಗಳಿಸಿದ್ದ ಕೊಹ್ಲಿ ಆದೇ ಸ್ಕೋರಿಗೆ ಔಟಾದಾಗ ಬೆಂಗಳೂರು ಒತ್ತಡಕ್ಕೆ ಸಿಲುಕಿಕೊಂಡಿತು. ಆದರೆ, ಎಬಿಡಿ ಮತ್ತು ಯುವ ಆಟಗಾರ ಗುರ್ಕೀರತ್ ಸಿಂಗ್ ಮುರಿಯದ ನಾಲ್ಲನೇ ವಿಕೆಟ್​ಗೆ 75 ರನ್ ಸೇರಿಸಿ ಟೀಮನ್ನು ಇನ್ನೂ 2 ಎಸೆತಗಳಿರುವಂತೆಯೇ ಗೆಲುವಿನ ಗೆರೆ ದಾಟಿಸಿದರು.

ರಾಯಲ್ಸ್ ಪರ ಶ್ರೇಯಸ್ ಗೋಪಾಲ್, ಕಾರ್ತೀಕ್ ತ್ಯಾಗಿ ಮತ್ತು ರಾಹುಲ್ ತೆವಾಟಿಯಾ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರಾಯಲ್ಸ್ ಆರಂಭ ಚೆನ್ನಾಗಿತ್ತು. ಇನ್ನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ 50 ರನ್ ಪೇರಿಸಿದರು. ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿದ ಉತ್ತಪ್ಪ 22 ಎಸೆತಗಳಲ್ಲಿ 41 ರನ್ (7X4 1X6) ಬಾರಿಸಿ ಈ ಆವೃತಿಯಲ್ಲಿ ಮೊದಲ ಬಾರಿಗೆ ಉತ್ತಮವೆನ್ನಬಹುದಾದ ಕಾಣಿಕೆ ನೀಡಿದರು. ಸ್ಟೋಕ್ಸ್ 19 ಎಸೆತಗಳನ್ನಾಡಿ 15 ರನ್ ಗಳಿಸಿದರು. ಸ್ಕೋರು 69 ತಲುಪುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಕ್ಕಿದ್ದ ರಾಯಲ್ಸ್ ಇನ್ನಿಂಗ್ಸ್ ಅನ್ನು ನಾಯಕ ಸ್ಟಿವೆನ್ ಸ್ಮಿತ್ ಸಂಭಾಳಿಸಿದರು. ಸ್ಮಿತ್ 36 ಎಸೆತಗಳಲ್ಲಿ 57 ರನ್ (6X4 1X6) ಗಳಿಸಿದರು. ಜೊಸ್ ಬಟ್ಲರ್ (24 25 1X4 1X6) ಮತ್ತು ತೆವಾಟಿಯಾ (19 11 1X1 1X6) ಅವರ ಕಾಂಟ್ರಿಬ್ಯೂಷನ್​ಗಳಿಂದ ರಾಯಲ್ಸ್ ಮೊತ್ತ 177/6 ತಲುಪಿತು.

ಮತ್ತೊಮ್ಮೆ ತಮ್ಮ ಉಪಯುಕ್ತತೆಯ ಉದಾಹರಣೆ ನೀಡಿದ ವೇಗದ ಬೌಲರ್ ಕ್ರಿಸ್ ಮೊರಿಸ್ ಕೇವಲ 26 ರನ್ ನೀಡಿ 4 ವಿಕೆಟ್ ಪಡೆದರು. ಅವರಿಗೆ ಉತ್ತಮ ಬೆಂಬಲ ನೀಡಿದ ಯುಜ್ವೇಂದ್ರ ಚಹಲ್ 34 ರನ್​ಗಳಿಗೆ 2 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ 2 ಅಂಕಗಳನ್ನು ಸಂಪಾದಿಸಿದ ಆರ್​ಸಿಬಿ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ 3 ನೇ ಸ್ಥಾನದಲ್ಲಿದೆ.

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ