ಫಿಟ್​​ ಆದರೂ ಫೈನಲ್​ ಆಗಿಲ್ಲ ರೋಹಿತ್​ ಎಂಟ್ರಿ: ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ ಹಿಟ್​ ಮ್ಯಾನ್

Edited By: ರಶ್ಮಿ ಕಲ್ಲಕಟ್ಟ

Updated on: Dec 13, 2020 | 2:22 PM

ಎರಡು ವಾರ ಕ್ವಾರಂಟೈನ್ ಇರುವ ಸಂದರ್ಭದಲ್ಲಿ ರೋಹಿತ್​ ಗೆ ಕೆಲ ಟಾಸ್ಕ್​ಗಳನ್ನು ನೀಡಲಾಗಿದೆ. ಇದನ್ನು ಅವರು ಚಾಚೂ ತಪ್ಪದೇ ಮಾಡಬೇಕಿದೆ. ಇದಾದ ಮೇಲೆ ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

1 / 4
ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ಫಿಟ್​ ಆಗಿದ್ದಾರೆ ಎಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಪ್ರಮಾಣ ಪತ್ರ ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಬಾರ್ಡರ್​​ ಗವಾಸ್ಕರ್​ ಟ್ರೋಫಿ​ ಆಡೋಕೆ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಆಸ್ಟ್ರೇಲಿಯಾದ ಕೋವಿಡ್​ ನಿಯಮದ ಪ್ರಕಾರ ರೋಹಿತ್​ ಎರಡು ವಾರಗಳ ಕಾಲ ಕ್ವಾರಂಟೈನ್​ ನಲ್ಲಿ ಇರಬೇಕಾಗುತ್ತದೆ. ಈ ಮಧ್ಯೆ ರೋಹಿತ್​ ಫಿಟ್​ ಎನಿಸಿದರೂ ಅವರು ಮೈದಾನಕ್ಕೆ ಇಳಿಯೋದು ಯಾವಾಗ ಅನ್ನೋದು ಖಾತ್ರಿ ಆಗಿಲ್ಲ.

2 / 4

ರೋಹಿತ್​ ಶರ್ಮಾ ಎರಡು ವಾರ ಸಿಡ್ನಿಯಲ್ಲಿ ಕ್ವಾರಂಟೈನ್​ ನಲ್ಲಿ​ ಇರಲಿದ್ದಾರೆ. ಕ್ವಾರಂಟೈನ್​​ ಮುಗಿದ ಮೇಲೆ ಭಾರತದ ವೈದ್ಯಕೀಯ ಸಿಬ್ಬಂದಿ ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಈ ಪರೀಕ್ಷೆಯಲ್ಲಿ ಪಾಸ್​ ಆದ ನಂತರವೇ ರೋಹಿತ್​ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಎರಡು ವಾರ ಕ್ವಾರಂಟೈನ್​ ಹಾಗೂ ಒಂದು ದಿನ ಪರೀಕ್ಷೆಗೆ ಒಳಪಡೋದು ಸೇರಿದರೆ ರೋಹಿತ್​ 15 ದಿನ ಅಲಭ್ಯರಾಗಿರುತ್ತಾರೆ.

3 / 4

ಎರಡು ವಾರ ಕ್ವಾರಂಟೈನ್ ಇರುವ ಸಂದರ್ಭದಲ್ಲಿ ರೋಹಿತ್​ ಗೆ ಕೆಲ ಟಾಸ್ಕ್​ಗಳನ್ನು ನೀಡಲಾಗಿದೆ. ಇದನ್ನು ಅವರು ಚಾಚೂ ತಪ್ಪದೇ ಮಾಡಬೇಕಿದೆ. ನಂತರ ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಅವರು ಪಾಸ್​ ಆದರಷ್ಟೇ ಅವರಿಗೆ ಟೆಸ್ಟ್​ ಆಡೋಕೆ ಅವಕಾಶ ನೀಡಲಾಗುತ್ತದೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಅವರು ಕೊನೆಯ ಎರಡು ಟೆಸ್ಟ್​​ ಗಳಿಗೆ ಮಾತ್ರ ಲಭ್ಯವಾಗುವ ಸಾಧ್ಯತೆ ಇದೆ.

4 / 4

13ನೇ ಐಪಿಎಲ್​ ಸಂದರ್ಭದಲ್ಲಿ ರೋಹಿತ್​ ಶರ್ಮಾ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಪಂದ್ಯಗಳಿಂದ ಕೈ ಬಿಡಲಾಗಿತ್ತು.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us