ಪಂತ್​ಗೆ ಬೌಂಡರಿ ನಿರಾಕರಿಸಿದ ಐಸಿಸಿಯ ಡಿಆರ್​ಎಸ್ ನಿಯಮ ಪುನರ್​ಪರಿಶೀಲಿಸಬೇಕು: ಆಕಾಶ್ ಚೋಪ್ರಾ

|

Updated on: Mar 26, 2021 | 11:06 PM

40 ನೇ ಓವರ್​ನಲ್ಲಿ ಟಾಮ್ ಕರನ್ ಅವರ ಎಸೆತವೊಂದು ಪಂತ್ ಅವರ ಪ್ಯಾಡ್​ಗೆ ತಾಕಿ ಫೈನ್​ಲೆಗ್ ಬೌಂಡರಿ ಗೆರೆ ದಾಟಿತು. ಅ ಎಸೆತ ವಿಕೆಟ್​ಗೆ ಅಪ್ಪಳಿಸುತ್ತಿತ್ತು ಅಂತ ಭಾವಿಸಿದ ಕರನ್ ಎಲ್​ಬಿ ಗೆ ಮನವಿ ಮಾಡಿದಾಗ ಅವರ ಮನವಿಯನ್ನು ಮೇನ್ ಅಂಪೈರ್ ಪುರಸ್ಕರಿಸಿದರು.

ಪಂತ್​ಗೆ ಬೌಂಡರಿ ನಿರಾಕರಿಸಿದ ಐಸಿಸಿಯ ಡಿಆರ್​ಎಸ್ ನಿಯಮ ಪುನರ್​ಪರಿಶೀಲಿಸಬೇಕು: ಆಕಾಶ್ ಚೋಪ್ರಾ
ರಿಷಭ್ ಪಂತ್
Follow us on

ಪುಣೆ: ಡಿಆರ್​ಎಸ್​ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ನಿಯಮಗಳು ಮತ್ತೊಮ್ಮೆ ಚರ್ಚೆಗೊಳಗಾಗಿವೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪುಣೆಯಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್ ರಿಷಬ್ ಪಂತ ಅವರಿಗೆ ಬೌಂಡರಿಯನ್ನು ನಿರಾಕರಿಸಿದ ಡೆಡ್ ಬಾಲ್ ನಿಯಮ ವಿವೇಚನೆರಹಿತವಾದ್ದದ್ದು ಎಂದು ಭಾರತದ ಮಾಜಿ ಆರಂಭ ಆಟಗಾರ ಮತ್ತು ಕ್ರಿಕೆಟ್ ಕಾಮೆಂಟೇಟರ್ ಆಕಾಶ್ ಚೋಪ್ರಾ ಹೇಳಿದ್ದ್ದಾರೆ. ಇಂಥದ್ದೇ ಸಂದರ್ಭ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್​ ಪಂದ್ಯದಲ್ಲಾದರೆ ಆಗ ಯಾವ ನಿರ್ಣಯ ತೆಗೆದುಕೊಳ್ಳಲಾಗುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 66 ರನ್ ಗಳಿಸಿ ಔಟಾದ ನಂತರ ರಿಷಭ್ ಪಂತ್ ಬ್ಯಾಟ್​ ಮಾಡಲು ಕ್ರೀಸಿಗೆ ಆಗಮಿಸಿದ್ದರು.

40 ನೇ ಓವರ್​ನಲ್ಲಿ ಟಾಮ್ ಕರನ್ ಅವರ ಎಸೆತವೊಂದು ಪಂತ್ ಅವರ ಪ್ಯಾಡ್​ಗೆ ತಾಕಿ ಫೈನ್​ಲೆಗ್ ಬೌಂಡರಿ ಗೆರೆ ದಾಟಿತು. ಅ ಎಸೆತ ವಿಕೆಟ್​ಗೆ ಅಪ್ಪಳಿಸುತ್ತಿತ್ತು ಅಂತ ಭಾವಿಸಿದ ಕರನ್ ಎಲ್​ಬಿ ಗೆ ಮನವಿ ಮಾಡಿದಾಗ ಅವರ ಮನವಿಯನ್ನು ಮೇನ್ ಅಂಪೈರ್ ಪುರಸ್ಕರಿಸಿದರು. ಆದರೆ, ಅಂಪೈರ್ ನಿರ್ಧಾರವನ್ನು ಪಂತ್ ಪ್ರಶ್ನಿಸಿದ್ದರಿಂದ ಡಿಆರ್​ಎಸ್ ಮೊರೆ ಹೋಗಲಾಯಿತು. ರೀಪ್ಲೇಗಳು ಬಾಲ್ ಪಂತ್ ಅವರ ಬ್ಯಾಟಿಗೆ ತಾಕಿದ್ದನ್ನು ಸ್ಪಷ್ಟಪಡಿಸಿದವು.

ಡಿಆರ್​ಎಸ್​ ನಿಯಮದೊಂದಿಗೆ ವ್ಯವಹರಿಸುವ ಐಸಿಸಿ ಆಡುವ ನಿಯಮ ಕ್ಲಾಸ್ 3.7 ಅಪೆಂಡಿಕ್ಸ್ ಡಿ ಪ್ರಕಾರ, ‘ಆಟಗಾರನೊಬ್ಬನ ಮನವಿಯ ಮೇರೆಗೆ ರಿವ್ಯೂ ತೆಗೆದುಕೊಂಡಾಗ ಔಟ್​ ಎಂದಿದ್ದ ಮೂಲ ನಿರ್ಣಯ ನಾಟ್​ ಔಟ್​ ಆಂತಾದರೆ, ಮೂಲ ನಿರ್ಣಯ ಔಟ್​ ಆಗಿದ್ದರಿಂದ ಆ ಬಾಲ್ ಡೆಡ್ ಆಗಿರುತ್ತದೆ.’

ರಿವ್ಯೂ, ಬ್ಯಾಟಿಂಗ್ ಮಾಡುವ ತಂಡಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸುವುದರಿಂದ ಅದಕ್ಕೆ ಯಾವುದೇ ರನ್ ಸಿಗುವುದಿಲ್ಲ. ಯಾಕೆಂದರೆ, ಒಮ್ಮೆ ಫೀಲ್ಡ್ ಅಂಪೈರ್ ಔಟ್ ಎಂದು ನಿರ್ಣಯ ನೀಡಿದ ನಂತರ ಆ ಬಾಲು ಡೆಡ್ ಎಂದು ಪರಿಗಣಿಸಲಾಗುತ್ತದೆ,’ ಎಂದು ನಿಯಮ ಹೇಳುತ್ತದೆ.

ಸದರಿ ನಿಯಮವನ್ನು ಆಕಾಶ್ ತನ್ನ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಪ್ರಶ್ನಿಸಿದ್ದಾರೆ. ವಿಶ್ವಕಪ್​ ಫೈನಲ್​ನಲ್ಲಿ ಇಂಥ ಘಟನೆ ನಡೆದರೆ ಐಸಿಸಿ ಏನು ಮಾಡಲಿದೆ, ಎಂದು ಅವರು ಕೇಳಿದ್ದಾರೆ.

‘ಅಂಪೈರ್ ಎಸಗಿದ ಘೋರ ಪ್ರಮಾದಕ್ಕೆ ಪಂತ್ 4 ರನ್ ಕಳೆದುಕೊಳ್ಳುವಂತಾಯಿತು. ಇಂಥ ಪ್ರಮಾದಗಳು 101010364 ಸಲ ಆಗಿವೆ. ಒಂದು ಪಕ್ಷ ಇದೇ ಪ್ರಮಾದ ವಿಶ್ವಕಪ್​ ಪೈನಲ್​ ಪಂದ್ಯದ ಕೊನೆ ಎಸೆತದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಮಿಗೆ 2 ರನ್ ಬೇಕಿದ್ದಾಗ ಜರುಗಿದರೆ ಹೇಗೆ? ಯೋಚಸಿ, ಯೋಚಿಸಿ,’ ಅಂತ ಆಕಾಶ್ ಟ್ವೀಟ್ ಮಾಡಿದ್ದಾರೆ

ಪವರ್​-ಹಿಟ್ಟಿಂಗ್​ನ ಅಮೋಘ ಪ್ರದರ್ಶನ ನೀಡಿದ ಪಂತ್ ಶುಕ್ರವಾರದ ಪಂದ್ಯದಲ್ಲಿ, ಟಾಮ್ ಕರನ್​ಗೆ ವಿಕೆಟ್​ ಒಪ್ಪಿಸುವ ಮೊದಲು 40 ಎಸೆತಗಳಲ್ಲಿ 77 ರನ್ ಬಾರಿಸಿದರು. ಭಾರತ ನಿಗದಿತ 50 ಓವರ್​ಗಳಲ್ಲಿ 336/6 ರನ್​ಗಳ ಭಾರೀ ಮೊತ್ತ ಪೇರಿಸಲು ಪಂತ್ ಇನ್ನಿಂಗ್ಸ್ ನಿರ್ಣಾಯಕ ಪಾತ್ರ ನಿರ್ವಹಿಸಿತು.

ಇದನ್ನೂ ಓದಿ: India vs England | ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಭಾರತಕ್ಕೆ ಜಟಿಲವಾಗಲಿದೆ: ಆಕಾಶ್ ಚೋಪ್ರಾ

Published On - 11:04 pm, Fri, 26 March 21