ಭಾರತದ ಲೆಜಂಡರಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಕೊವಿಡ್-19 ಸೋಂಕಿನಿಂದ ಬೇಗ ಗುಣಮುಖ ಗೊಂಡು ಮನೆಗೆ ಹಿಂತಿರುಗಲಿ ಅಂತ ಶುಕ್ರವಾರದಂದು ಪಾಕಿಸ್ತಾನದ ಲೆಜೆಂಡರಿ ವೇಗದ ಬೌಲರ್ ವಾಸಿಮ್ ಅಕ್ರಮ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು ಭಾರತದ ಬ್ಯಾಟಿಂಗ್ ಗ್ರೇಟ್ ವೈರಸ್ ಅನ್ನು ಸಿಕ್ಸರ್ಗೆ ಬಾರಿಸಲಿದ್ದಾರೆ ಎಂದು ಹೇಳಿದ್ದಾರೆ. ಕೇವಲ 16ನೇ ವಯಸ್ಸಿನಲ್ಲಿ ಅವರು ಹೇಗೆ ವಿಶ್ವದ ಖ್ಯಾತ ಬೌಲರ್ಗಳನ್ನು ಸದೆಬಡಿದರು ಅನ್ನುವುದನ್ನು ಸಹ ಅಕ್ರಮ್ ನೆನಪಿಸಿಕೊಂಡಿದ್ದಾರೆ.
‘ನೀವು ಕೇವಲ 16 ವರ್ಷದವರಾಗಿದ್ದಾಗ, ವಿಶ್ವದ ಶ್ರೇಷ್ಠ ಬೌಲರ್ಗಳನ್ನು ದಿಟ್ಟತನದಿಂದ ಮತ್ತು ಅಷ್ಟೇ ಲೀಲಾಜಾಲವಾಗಿ ಎದುರಿಸಿದರಿ….ಹಾಗಾಗಿ, ನೀವು ಕೊವಿಡ್-19 ಅನ್ನು ಸಿಕ್ಸರ್ಗೆ ಬಾರಿಸುತ್ತೀರೆಂಬ ಭರವಸೆ ನನಗಿದೆ. ಬೇಗ ಚೇತರಿಸಿಕೊಳ್ಳಿ ಮಾಸ್ಟರ್. ಭಾರತ 2011 ರಲ್ಲಿ ವಿಶ್ವಕಪ್ ಗೆದ್ದ ವಾರ್ಷಿಕೋತ್ಸವನ್ನು ನೀವು ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಆಚರಿಸಿರಬಹುದೆಂದು ಭಾವಿಸಿತ್ತೇನೆ…..ಅಲ್ಲಿನ ಒಂದು ಚಿತ್ರವನ್ನು ನನಗೆ ಕಳಿಸಿ,’ ಎಂದು ಅಕ್ರಮ್ ಟ್ವೀಟ್ ಮಾಡಿದ್ದಾರೆ.
Even when you were 16, you battled world’s best bowlers with guts and aplomb… so I am sure you will hit Covid-19 for a SIX! Recover soon master! Would be great if you celebrate India’s World Cup 2011 anniversary with doctors and hospital staff… do send me a pic! https://t.co/ICO3vto9Pb
— Wasim Akram (@wasimakramlive) April 2, 2021
ಪಾಕಿಸ್ತಾನದ ಇನ್ನೊಬ್ಬ ಮಾಜಿ ಕ್ಯಾಪ್ಟನ್ ಶಾಹಿದ್ ಅಫ್ರಿದಿ ಸಹ ಟ್ವೀಟ್ ಮಾಡಿ, ಬೇಗ ಚೇತರಿಸಿಕೊಳ್ಳವಂತೆ ಹಾರೈಸಿದ್ದಾರೆ.
‘ಬೇಗ ಗುಣಮುಖರಾಗಿರಿ ಎಂದು ಹಾರೈಸುತ್ತಿದ್ದೇನೆ, ಲೆಜೆಂಡ್. ನೀವು ಬೇಗ ಚೇತರಿಸಿಕೊಳ್ಳುವ ಬಗ್ಗೆ ನನಗೆ ಸಂಶಯವೇ ಇಲ್ಲ. ನಿಮ್ಮ ಆಸ್ಪತ್ರೆ ವಾಸ ಚಿಕ್ಕದಾಗಿರಲಿ ಮತ್ತು ಚೇತರಿಕೆಯ ಅವಧಿ ಅದಕ್ಕಿಂತಲೂ ಚಿಕ್ಕದಾಗಿರಲಿ ಎಂದು ಹಾರೈಸುತ್ತೇನೆ,’ ಎಂದು ಆಫ್ರಿದಿ ಟ್ವೀಟ್ ಮಾಡಿದ್ದಾರೆ.
Wishing you a speedy recovery Legend . No doubt that you will make a strong recovery.
May your hospital stay be short and your recovery even shorter! https://t.co/JfYhJeBTre— Shahid Afridi (@SAfridiOfficial) April 2, 2021
ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ತೆಂಡೂಲ್ಕರ್ ಅವರನ್ನು ಮುನ್ನಚ್ಚೆರಿಕೆಯ ಕ್ರಮವಾಗಿ ಆರು ದಿನಗಳ ಅವಧಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. 47-ವರ್ಷ ವಯಸ್ಸಿನ ಲಿಟ್ಲ್ ಮಾಸ್ಟರ್ ತಮ್ಮ ಟ್ಟಿಟ್ಟರ್ ಹ್ಯಾಂಡಲ್ ಮೂಲಕ ಬೇಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಾ ತಮ್ಮನ್ನು ಹಾರೈಸಿದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
‘ನಿಮ್ಮ ಹಾರೈಕೆ ಮತ್ತು ಪ್ರಾರ್ಥನೆಗಳಿಗಾಗಿ ವಂದನೆಗಳು. ಮುನ್ನೆಚ್ಚರಿಕೆಯ ಕ್ರಮವಾಗಿ ಮತ್ತು ವೈದ್ಯಕೀಯ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕೆಲ ದಿನಗಳಲ್ಲಿ ನಾನು ವಾಪಸ್ಸಾಗಲಿದ್ದೇನೆ. ನೀವೆಲ್ಲ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ,’ ಎಂದು ತೆಂಡೂಲ್ಕರ್ ಟ್ವೀಟ್ನಲ್ಲಿ ಹೇಳಿದ್ದಾರೆ.
ರೈಪುರ್ನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನಲ್ಲಿ ಇಂಡಿಯ ಲೆಜೆಂಡ್ಸ್ ತಂಡದ ನಾಯಕರಾಗಿ ಕ್ರಿಕೆಟ್ ಮೈದಾನಕ್ಕೆ ತೆಂಡೂಲ್ಕರ್ ವಾಪಸ್ಸಾಗಿದ್ದರು. ಅವರು ಮಾತ್ರವಲ್ಲದೆ ಭಾರತ ಮತ್ತು ವಿಶ್ವದ ಹಲವಾರು ಆಟಗಾರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಇಂಡಿಯ ಲೆಜೆಂಡ್ಸ್ ತಂಡದಲ್ಲಿ ವಿರೇಂದ್ರ ಸೆಹ್ವಾಗ್ ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಮೊಹ್ಮದ್ ಕೈಫ್ ಮೊದಲಾದವರು ಇದ್ದರು. ಮಾರ್ಚ್ 21 ರಂದು ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಸೋಲಿಸಿದ ಭಾರತ ಪ್ರಶಸ್ತಿಯನ್ನು ಗೆದ್ದಿತ್ತು.