ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನೊಂದಿಗೆ 13ನೇ ಅವೃತಿಯ ಅಭಿಯಾನ ಆರಂಭಿಸಿದ ಪಂಜಾಬ್ ಎರಡನೆ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಮೂರನೆಯದರಲ್ಲಿ ರಾಜಸ್ತಾನ ರಾಯಲ್ಸ್ಗೆ ಸೋತಿತು. ಹಾಗೆಯೇ, ಚೆನೈ ಸೂಪರ್ ವಿರುದ್ಧ ಸೋಲಿನೊಂದಿಗೆ ಈ ಬಾರಿಯ ಐಪಿಎಲ್ ಸೀಸನ್ ಶುರುಮಾಡಿದ ಮುಂಬೈ ನಂತರ ಕೊಲ್ಕತಾ ನೈಟ್ರೈಟರ್ಸ್ ಮೇಲೆ ಜಯಗಳಿಸಿ ಮೂರನೆಯದನ್ನು ಬೆಂಗಳೂರಿಗೆ ಸೂಪರ್ ಓವರ್ನಲ್ಲಿ ಸೋತಿತು
[yop_poll id=”2″]
ಟೀಮುಗಳ ಬಲಾಬಲವನ್ನು ನೋಡಿದ್ದೇಯಾದರೆ, ಎರಡೂ ಸ್ಟಾರ್ ಬ್ಯಾಟ್ಸ್ಮನ್ ಮತ್ತು ಬೌಲರ್ಗಳನ್ನು ಹೊಂದಿದ್ದು ಎಲ್ಲ ಕೋನಗಳಿಂದ ಸಮತೋಲಿತ ಅನಿಸುತ್ತ್ತಿವೆ. ಪಂಜಾಬ್ ನಾಯಕ ಕೆ ಎಲ್ ರಾಹುಲ್ ಮತ್ತು ಅವರ ಜೊತೆ ಇನ್ನಿಂಗ್ಸ್ ಓಪನ್ ಮಾಡುವ ಮಾಯಾಂಕ್ ಅಗರ್ವಾಲ್ ಅತ್ಯುತ್ತಮ ಪಾರ್ಮ್ನಲ್ಲಿದ್ದಾರೆ. ಇಬ್ಬರ ಬ್ಯಾಟ್ನಿಂದ ಶತಕಗಳು ಸಿಡಿದಿವೆ. ಮೂರು ಪಂದ್ಯಗಳಿಂದ 223 ರನ್ ಶೇಖರಿಸಿರುವ ರಾಹುಲ್ ಕಿತ್ತಳೆ ವರ್ಣದ ಕ್ಯಾಪ್ನ ಒಡೆಯರಾಗಿದ್ದಾರೆ. ಆಗರ್ವಾಲ್ ಸಹ ರಾಜಸ್ತಾನ ವಿರುದ್ಧ ಐಪಿಎಲ್ನಲ್ಲಿ ತಮ್ಮ ಚೊಚ್ಚಲು ಶತಕ ದಾಖಲಿಸುವ ಮೊದಲು ಡೆಲ್ಲಿ ಮೇಲೆ ಆಕರ್ಷಕ 89 ರನ್ ಗಳಿಸಿ ಔಟಾಗಿದ್ದರು.
ಇದನ್ನೂ ಓದಿ: IPL 2020: MI vs KXIP Live Score
ಬಿರುಸಿನ ಹೊಡೆತಗಳನ್ನಾಡುವ ನಿಕೊಲಾಸ್ ಪೂರನ್ ಅವರಿಂದ ರನ್ ಬರುತ್ತಿಲ್ಲ, ಆದರೆ ಅವರು ಫೀಲ್ಡಿಂಗ್ನಲ್ಲಿ ಹೆಸರು
ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ರವಿ ಬಿಷ್ಣೊಯಿ ಮಿಂಚುತ್ತಿದ್ದಾರೆ. ರಾಜಸ್ತಾನದ ರಾಹುಲ್ ತೆವಾಟಿಯ ಕೈಲಿ ಓಂದೇ ಓವರ್ನಲ್ಲಿ 5 ಸಿಕ್ಸರ್ಗಳನ್ನು ಚಚ್ಚಿಸಿಕೊಂಡ ಶೆಲ್ಡನ್ ಕಾಟ್ರೆಲ್, ಆ ಪಂದ್ಯವನ್ನು ಹೊರತುಪಡಿಸಿ ಉಳಿದವುಗಳಲ್ಲಿ ಉತ್ತಮವಾಗಿ ಬೌಲ್ ಮಾಡಿರುವುದರಿಂದ ಟೀಮ್ ಮ್ಯಾನೇಜ್ಮೆಂಟ್ನಿಂದ ಅವಕೃಪೆಗಳಗಾಗುವ ಸಾಧ್ಯತೆ ತೀರ ಕಡಿಮೆ. ಕೃಷ್ಣಪ್ಪ ಗೌತಮ್ ಇವತ್ತಿನ ಪಂದ್ಯ ಆಡುವುದು ಅನುಮಾನ.
ರೋಹಿತ್ ಓಪನಿಂಗ್ ಪಾರ್ಟ್ನರ್ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ಗಳಿಂದ ಮಹತ್ವದ ಕಾಣಿಕೆಗಳು ಬರುತ್ತಿಲ್ಲವಾದರೂ ನೆಚ್ಚಿಕೊಳ್ಳಬಹುದಾದ ಆಟಗಾರರಾಗಿದ್ದಾರೆ. ಆದರೆ ಎಲ್ಲರ ಕಣ್ಣು ಬೆಂಗಳೂರು ವಿರುದ್ಧ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಷನ್ ಅವರ ಮೇಲಿರುವುದು ನಿಶ್ಚಿತ. ಗಾಯಗೊಂಡ ಸೌರಭ್ ತಿವಾರಿ ಸ್ಥಾನದಲ್ಲಿ ಆಡಲು ಬಂದ ಕಿಷನ್, ಬೆಂಗಳೂರು ವಿರುದ್ಧ ಡ್ರೀಮ್ ಇನ್ನಿಂಗ್ಸ್ ಆಡಿ ಕೇವಲ ಇಂದು ರನ್ನಿಂದ ಶತಕ ವಂಚಿತರಾಗಿದ್ದು ದುರದೃಷ್ಟಕರ. ರಾಯಲ್ಸ್ನ ಸಂಜು ಸ್ಯಾಮ್ಸನ್ ಅವರಂತೆ ಕಿಷನ್ ಸಹ ಕ್ರಿಕೆಟಿಂಗ್ ಹೊಡೆತಗಳನ್ನು ಬಾರಿಸುತ್ತಾರೆಯೇ ಹೊರತು ಸ್ಲಾಗ್ ಮಾಡಲ್ಲ. ಈ ಹುಡುಗ ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದ್ದಾನೆ ಅಂತ ಮಾಜಿ ಆಟಗಾರರು, ಕಾಮೆಂಟೇಟರ್ಗಳು ಹೇಳುತ್ತಿರುವುದು ಖಂಡಿತವಾಗಿಯೂ ಉತ್ಪ್ರೇಕ್ಷೆಯಲ್ಲ.
ಕೈರನ್ ಪೊಲ್ಲಾರ್ಡ್ ಸಹ ಬೆಂಗಳೂರು ವಿರುದ್ಧ ಭರ್ಜರಿಯಾಗಿ ಆಡಿದರು. ಅವರು ಯಾವತ್ತಿಗೂ ಯುಟಿಲಿಟಿ ಆಟಗಾರರಾಗಿರುವುದರಿಂದ ಅಂಬಾನಿಗಳು ಅವರನ್ನು ಪ್ರತಿವರ್ಷ ರಿಟೇನ್ ಮಾಡಿಕೊಳ್ಳುತ್ತಾರೆ. ಮತ್ತಿಬ್ಬರು ಆಲ್ರೌಂಡರ್ಗಳು ಕೃಣಾಲ್ ಮತ್ತು ಹಾರ್ದಿಕ್ ಪಾಂಡ್ಯ ಎಡವುತ್ತಿದ್ದಾರೆ. ರೋಹಿತ್ ಟೀಮಿನ ಬೌಲಿಂಗ್ ಅದ್ಭುತವಾಗಿದೆ. ಜಸ್ಪ್ರಿತ್ ಬುಮ್ರಾ, ಜೇಮ್ಸ್ ಪ್ಯಾಟಿಸನ್, ಟ್ರೆಂಟ್ ಬೌಲ್ಟ್ ಮತ್ತು ರಾಹುಲ್ ಚಹರ್ ಯಾವುದೇ ಟೀಮು ಹೆಮ್ಮೆಪಟ್ಟುಕೊಳ್ಳಬಹುದಾದ ಬೌಲರ್ಗಳು.
ಇವತ್ತು ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಕ್ರಿಕೆಟ್ ರಸದೌತಣ ಸಿಗುವುದು ಗ್ಯಾರೆಂಟಿ.
Published On - 5:13 pm, Thu, 1 October 20