ICC ದಶಕದ ತಂಡ ಪ್ರಕಟ; ಕ್ರಿಕೆಟ್​ನ 3 ಆವೃತ್ತಿಯಲ್ಲೂ ಸ್ಥಾನ ಪಡೆದ ಕಿಂಗ್ ಕೊಹ್ಲಿ, ಭಾರತೀಯರದ್ದೇ ಸಿಂಹ ಪಾಲು..

|

Updated on: Dec 27, 2020 | 4:51 PM

ದಶಕದ ಉತ್ತಮ ಏಕದಿನ ತಂಡವನ್ನ ಆಯ್ಕೆ ಮಾಡಿರುವ ICC (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಏಕದಿನ ತಂಡದ ನಾಯಕತ್ವದ ಜವಬ್ದಾರಿಯನ್ನ ಟೀಂ ಇಂಡಿಯಾದ ಕ್ಯಾಪ್ಟನ್​ ಕೂಲ್​ ಧೋನಿಗೆ ವಹಿಸಿಕೊಟ್ಟಿದೆ. ಈ ಏಕದಿನ ತಂಡದಲ್ಲಿ 3 ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ICC ದಶಕದ ತಂಡ ಪ್ರಕಟ; ಕ್ರಿಕೆಟ್​ನ 3 ಆವೃತ್ತಿಯಲ್ಲೂ ಸ್ಥಾನ ಪಡೆದ ಕಿಂಗ್ ಕೊಹ್ಲಿ, ಭಾರತೀಯರದ್ದೇ ಸಿಂಹ ಪಾಲು..
ವಿರಾಟ್​ ಕೊಹ್ಲಿ
Follow us on

ದುಬೈ: ಪ್ರತಿ ಬಾರಿಯಂತೆ ಈ ಬಾರಿಯು ICC (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಕ್ರಿಕೆಟ್​ನ 3 ಆವೃತ್ತಿಯಲ್ಲೂ ದಶಕದ ಉತ್ತಮ ತಂಡವನ್ನು ಆಯ್ಕೆ ಮಾಡಿದೆ. ಟಿ20, ಒನ್​ಡೇ ಮತ್ತು ಟೆಸ್ಟ್​ಗಾಗಿ ICC ಆಯ್ಕೆ ಮಾಡಿರುವ ತಂಡಗಳಲ್ಲಿ ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ದಶಕದ ಉತ್ತಮ ಏಕದಿನ ತಂಡವನ್ನು ಆಯ್ಕೆ ಮಾಡಿರುವ ICC ಏಕದಿನ ತಂಡದ ನಾಯಕತ್ವದ ಜವಾಬ್ದಾರಿಯನ್ನು ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್​ ಧೋನಿಗೆ ವಹಿಸಿಕೊಟ್ಟಿದೆ. ಈ ಏಕದಿನ ತಂಡದಲ್ಲಿ 3 ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಆರಂಭಿಕ ಆಟಗಾರ ರೋಹಿತ್​ ಶರ್ಮ ಹಾಗೂ ವಿರಾಟ್​ ಕೊಹ್ಲಿ ಮತ್ತು ಮಹೇಂದ್ರ ಸಿಂಗ್​ ಧೋನಿ ಇದ್ದಾರೆ.

 ICC ಪ್ರಕಟಿಸಿರುವ ಏಕದಿನ ತಂಡ ಹೀಗಿದೆ.
ಮಹೇಂದ್ರ ಸಿಂಗ್​ ಧೋನಿ (ನಾಯಕ), ರೋಹಿತ್​ ಶರ್ಮ, ಡೇವಿಡ್​ ವಾರ್ನರ್​, ವಿರಾಟ್​ ಕೊಹ್ಲಿ, ಎಬಿಡಿ ವಿಲಿಯರ್ಸ್​, ಶಕೀಬ್​ ಉಲ್​ ಹಸನ್​, ಬೆನ್​ ಸ್ಟೋಕ್​, ಮಿಚೆಲ್​ ಸ್ಟಾರ್ಕ್​, ಟ್ರೆಂಟ್​ ಬೋಲ್ಟ್​, ಇಮ್ರಾನ್​ ತಾಹೀರ್​, ಲಸಿತ್​ ಮಲಿಂಗ​

ICC ಪ್ರಕಟಿಸಿರುವ ಟಿ20 ತಂಡದಲ್ಲಿ ಟೀಂ ಇಂಡಿಯಾದ 4 ಆಟಗಾರರು ಸ್ಥಾನ ಪಡೆದಿದ್ದು, ಮೂವರು ಬ್ಯಾಟಿಂಗ್​ ವಿಭಾಗದಲ್ಲಿ ಕಾಣಿಸಿಕೊಂಡರೆ, ಒಬ್ಬನೇ ಒಬ್ಬ ಬೌಲರ್​ ಆಯ್ಕೆಯಾಗಿದ್ದಾನೆ. ಟಿ20 ತಂಡಕ್ಕೂ ನಾಯಕನಾಗಿ ಮಹೇಂದ್ರ ಸಿಂಗ್​ ಧೋನಿ ಆಯ್ಕೆಯಾಗಿದ್ದಾರೆ.

ICC ಪ್ರಕಟಿಸಿರುವ ಟಿ20 ತಂಡ ಹೀಗಿದೆ.
ಮಹೇಂದ್ರ ಸಿಂಗ್​ ಧೋನಿ (ನಾಯಕ), ರೋಹಿತ್​ ಶರ್ಮ, ಕ್ರಿಸ್​ ಗೇಲ್​, ಆರನ್​ ಪಿಂಚ್​, ವಿರಾಟ್​ ಕೊಹ್ಲಿ, ಎಬಿಡಿ ವಿಲಿಯರ್ಸ್​, ಗ್ಲೇನ್​ ಮ್ಯಾಕ್ಸ್​ವೆಲ್ಲ್​, ಕೆರನ್​ ಪೋಲಾರ್ಡ್​, ರಶೀದ್​ ಖಾನ್​, ಜಸ್ಪ್ರೀತ್​ ಬುಮ್ರಾ, ಲಸಿತ್​ ಮಲಿಂಗ

ಇನ್ನೂ ICC ಪ್ರಕಟಿಸಿರುವ ಟೆಸ್ಟ್​ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದು, ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ರವಿಚಂದ್ರನ್​ ಅಶ್ವಿನ್​ ಸ್ಥಾನ ಪಡೆದಿದ್ದಾರೆ. ಟೆಸ್ಟ್​ ತಂಡದ ಜವಬ್ದಾರಿಯನ್ನು ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ನೀಡಲಾಗಿದೆ.

ICC ಪ್ರಕಟಿಸಿರುವ ಟೆಸ್ಟ್​ ತಂಡ ಹೀಗಿದೆ.
ವಿರಾಟ್​ ಕೊಹ್ಲಿ (ನಾಯಕ), ಆಲಿಸ್ಟರ್​ ಕುಕ್, ಡೇವಿಡ್​ ವಾರ್ನರ್​, ಕೇನ್​ ವಿಲಿಯಮ್ಸನ್​, ಸ್ಟೀವ್​ ಸ್ಮಿತ್​, ಕುಮಾರ ಸಂಗಾಕ್ಕಾರ, ಬೆನ್​ ಸ್ಟೋಕ್, ಆರ್​ ಅಶ್ವಿನ್​, ಡೇಲ್​ ಸ್ಟೈನ್, ಸ್ಟುವರ್ಟ್​ ಬ್ರಾಡ್​, ಜೇಮ್ಸ್​ ಅಂಡರ್​ಸನ್​

ವಿಶೇಷ ಸಂಗತಿಯೆಂದರೆ ICC ಪ್ರಕಟಿಸಿರುವ 3 ಆವೃತ್ತಿಯ ತಂಡದಲ್ಲಿ ಸ್ಥಾನ ಪಡೆದ ಏಕೈಕ ಆಟಗಾರನೆಂದರೆ ಅದು ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಆಗಿದ್ದಾರೆ.

Published On - 4:47 pm, Sun, 27 December 20