AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಗುರಿಗೆ ನಡುಗಿದ ಕೊರಿಯಾ: ಕೊನೆಯ ಬಾಣದಲ್ಲಿ 10ಕ್ಕೆ ಗುರಿಯಿಟ್ಟ ಕುಮ್‌ಕುಮ್; ಮೊದಲ ಬಾರಿಗೆ ಸ್ವರ್ಣ ಕಿರೀಟ

ನಾಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತೀಯ ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಅಂಕಿತಾ ಭಕತ್, ಕೀರ್ತಿ ಹಾಗೂ ಕುಮ್‌ಕುಮ್ ಅನಿಲ್ ಮೊಹೋಡ್ ಅವರ ತ್ರಿವಳಿ ಪಡೆ, ಬಲಶಾಲಿ ದಕ್ಷಿಣ ಕೊರಿಯಾ ತಂಡವನ್ನು ರೋಚಕ ಫೈನಲ್‌ನಲ್ಲಿ ಮಣಿಸಿ ಭಾರತಕ್ಕೆ ಪ್ರಥಮ ಬಾರಿಗೆ ಚಿನ್ನದ ಪದಕ ಗೆದ್ದಿದೆ. ಈ ಗೆಲುವು ಭಾರತದ ಬಿಲ್ಲುಗಾರಿಕೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಭಾರತದ ಗುರಿಗೆ ನಡುಗಿದ ಕೊರಿಯಾ: ಕೊನೆಯ ಬಾಣದಲ್ಲಿ 10ಕ್ಕೆ ಗುರಿಯಿಟ್ಟ ಕುಮ್‌ಕುಮ್; ಮೊದಲ ಬಾರಿಗೆ ಸ್ವರ್ಣ ಕಿರೀಟ
ಷ್ಯನ್ ಗೇಮ್ಸ್ ಬಿಲ್ಲುಗಾರಿಕೆImage Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:Oct 02, 2026 | 9:50 AM

Share

ನಾಗೋಯಾ, ಅ.2: ಏಷ್ಯನ್ ಗೇಮ್ಸ್ 2026ರ ರಿಕರ್ವ್ ಮಹಿಳಾ ತಂಡ ವಿಭಾಗದಲ್ಲಿ ಭಾರತದ ಬಿಲ್ಲುಗಾರಿಕೆ (Archery) ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಅಂಕಿತಾ ಭಕತ್, ಕೀರ್ತಿ ಹಾಗೂ ಕುಮ್‌ಕುಮ್ ಅನಿಲ್ ಮೊಹೋಡ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತ್ರಿವಳಿ ಪಡೆ, ಬಲಶಾಲಿ ದಕ್ಷಿಣ ಕೊರಿಯಾ ತಂಡವನ್ನು ರೋಚಕ ಫೈನಲ್‌ನಲ್ಲಿ ಮಣಿಸಿ ಭಾರತಕ್ಕೆ ಪ್ರಥಮ ಬಾರಿಗೆ ಏಷ್ಯನ್ ಗೇಮ್ಸ್ ರಿಕರ್ವ್ ಮಹಿಳಾ ತಂಡ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟಿದೆ.

ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತದ ಮಹಿಳಾ ರಿಕರ್ವ್ ತಂಡವು ಎಂದಿಗೂ ಫೈನಲ್ ಪ್ರವೇಶಿಸಿರಲಿಲ್ಲ. ಆದರೆ ಈ ಬಾರಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಪಡೆ, ಕೌಂಗ್ ಚೇಯಂಗ್, ಲೀ ಯುಂಜಿ ಹಾಗೂ ಓ ಯೇಜಿನ್ ಅವರನ್ನೊಳಗೊಂಡ ಬಲಶಾಲಿ ಕೊರಿಯನ್ ತಂಡಕ್ಕೆ ಶಾಕ್ ನೀಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ರೋಚಕ ಫೈನಲ್ ಹೆಜ್ಜೆ

ಆರಂಭಿಕ ಎಂಡ್ : ಸ್ಕೋರ್ 54-54 (ಸಮಬಲ 1-1)

ಫೈನಲ್‌ನ ಮೊದಲ ಎಂಡ್‌ನ ಆರಂಭಿಕ 3 ಬಾಣಗಳ ಹೊಡೆತದಲ್ಲಿ ಭಾರತ 28-26 ರ ಮುನ್ನಡೆ ಸಾಧಿಸಿತು. ಆದರೆ, ನಂತರ ಕೀರ್ತಿ ಅವರು 7 ಅಂಕಕ್ಕೆ ಗುರಿ ನೆಟ್ಟು ಸಣ್ಣ ಹಿನ್ನಡೆ ಅನುಭವಿಸಿದರು. ಈ ಹಂತದಲ್ಲಿ ಸಮಯಪ್ರಜ್ಞೆ ಮೆರೆದ ಕುಮ್‌ಕುಮ್, ಕೊನೆಯ ಬಾಣದಲ್ಲಿ ’10’ ಅಂಕಗಳ ಬುಲ್‌ಐ ಹೊಡೆಯುವ ಮೂಲಕ 54-54 ರಿಂದ ಎಂಡ್ ಸಮಬಲಗೊಳ್ಳುವಂತೆ ಮಾಡಿದರು. ಇದರಿಂದ ಉಭಯ ತಂಡಗಳು 1-1 ಸೆಟ್ ಪಾಯಿಂಟ್ ಹಂಚಿಕೊಂಡವು.

ಎರಡನೇ ಎಂಡ್ : ಸ್ಕೋರ್ 56-56 (ಸಮಬಲ 2-2)

ಎರಡನೇ ಎಂಡ್‌ನಲ್ಲಿ ದಕ್ಷಿಣ ಕೊರಿಯಾ ಮೊದಲ 3 ಯತ್ನಗಳಲ್ಲಿ 10-9-9 (28 ಅಂಕ) ಗಳಿಸಿತು. ಭಾರತದ ಪರ ಅಂಕಿತಾ ’10’ ರೊಂದಿಗೆ ಶುಭಾರಂಭ ಮಾಡಿದರೂ ಕೀರ್ತಿ ಮತ್ತೆ ‘8’ ಗಳಿಸಿ ಹಿನ್ನಡೆ ತಂದಿತ್ತರು. ಆದರೆ ಕುಮ್‌ಕುಮ್ ಮತ್ತೆ ರಕ್ಷಣೆಗೆ ನಿಂತು ’10’ ಬಾರಿಸಿ 28-28 ರ ಸಮಬಲ ತಂದರು. ಮುಂದಿನ 3 ಯತ್ನಗಳಲ್ಲೂ ಕೊರಿಯಾ 28 ಅಂಕ ಬಾಗಿಸಿ ಒಟ್ಟು 56 ಅಂಕ ಗಳಿಸಿತು. ಒತ್ತಡದ ನಡುವೆಯೂ ಅಂಕಿತಾ (10) ಹಾಗೂ ಕುಮ್‌ಕುಮ್ (10) ಅವರ ಪ್ರದರ್ಶನದಿಂದ ಭಾರತ ಮತ್ತೆ 56-56 ರ ಸಮಬಲ ಸಾಧಿಸಿ, ಸೆಟ್ ಪಾಯಿಂಟ್ಸ್ ಅನ್ನು 2-2 ಮಾಡಿಕೊಂಡಿತು.

ಮೂರನೇ ಎಂಡ್ : ಭಾರತಕ್ಕೆ 55-51ರ ಮುನ್ನಡೆ (ಸೆಟ್ ಪಾಯಿಂಟ್ಸ್ 4-2)

ಮೂರನೇ ಎಂಡ್‌ನಲ್ಲಿ ಭಾರತ ಕ್ರಮಾಂಕ ಬದಲಿಸಿ, ಕೀರ್ತಿ ಅವರನ್ನು ಮೊದಲು ಕಣಕ್ಕಿಳಿಸಿತು. ತಪ್ಪು ತಿದ್ದುಕೊಂಡ ಕೀರ್ತಿ ’10’ ಅಂಕ ಗಳಿಸಿದರೆ, ಅಂಕಿತಾ ಮತ್ತು ಕುಮ್‌ಕುಮ್ ತಲಾ ‘9’ ಬಾರಿಸಿ 28-27ರ ಸಣ್ಣ ಮುನ್ನಡೆ ಒದಗಿಸಿದರು. ಕೊರಿಯನ್ ಬಿಲ್ಲುಗಾರ್ತಿಯರು ಒತ್ತಡಕ್ಕೆ ಸಿಲುಕಿ ಕೊನೆಯ 3 ಯತ್ನಗಳಲ್ಲಿ ತಲಾ 8 ಅಂಕಗಳನ್ನಷ್ಟೇ ಗಳಿಸಿದರು. ಇದನ್ನು ಸರಿಯಾಗಿ ಬಳಸಿಕೊಂಡ ಭಾರತೀಯ ಆಟಗಾರ್ತಿಯರು 8-9-10 ಬಾರಿಸುವ ಮೂಲಕ 3ನೇ ಎಂಡ್ ಅನ್ನು 55-51 ರಿಂದ ಗೆದ್ದು 4-2 ರ ಸ್ಪಷ್ಟ ಮುನ್ನಡೆ ಸಾಧಿಸಿದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2026: 4x400m ರಿಲೇಯಲ್ಲಿ ಭಾರತೀಯ ವನಿತೆಯರಿಗೆ ಬಂಗಾರ: ಈ ಸಾಧನೆಗೆ ಸಾಕ್ಷಿಯಾದ ಕರ್ನಾಟಕದ ಪೂವಮ್ಮ

ನಾಲ್ಕನೇ ಎಂಡ್ : ಕೊನೆಯ ಬಾಣದಲ್ಲಿ 10 ಬಾರಿಸಿ ಇತಿಹಾಸ ಬರೆದ ಕುಮ್‌ಕುಮ್!

ಅಂತಿಮ ಹಾಗೂ ನಿರ್ಣಾಯಕ ಎಂಡ್‌ನಲ್ಲಿ ಕೊರಿಯಾ ಮೊದಲ 3 ಯತ್ನಗಳಲ್ಲಿ 28 ಅಂಕಗಳಿಸಿತು (9-9-10). ಭಾರತದ ಪರ ಕೀರ್ತಿ (9), ಅಂಕಿತಾ (8) ಹಾಗೂ ಕುಮ್‌ಕುಮ್ (8) ಗಳಿಸಿ ಅರ್ಧದಷ್ಟರಲ್ಲಿ 25-28 ರಿಂದ ಹಿನ್ನಡೆಯಲ್ಲಿದ್ದರು. ನಂತರ ಕೊರಿಯಾ ತನ್ನ ಉಳಿದ 3 ಯತ್ನಗಳಲ್ಲಿ 8, 9, 9 ಬಾರಿಸಿ ಒಟ್ಟು 54 ಅಂಕಗಳೊಂದಿಗೆ ಮುಗಿಸಿತು.

ಚಿನ್ನದ ಪದಕ ಗೆಲ್ಲಲು ಭಾರತಕ್ಕೆ ಕೊನೆಯ 3 ಬಾಣಗಳಲ್ಲಿ ಎರಡು 9 ಹಾಗೂ ಒಂದು 10 ಅಂಕಗಳ ಅಗತ್ಯವಿತ್ತು. ಕೀರ್ತಿ ‘9’ ಹಾಗೂ ಅಂಕಿತಾ ‘9’ ಬಾರಿಸಿ ಆಸೆ ಜೀವಂತವಾಗಿರಿಸಿದರು. ಕೊನೆಯ ಬಾಣ ಎಸೆಯಲು ಬಂದ ಕುಮ್‌ಕುಮ್ ಅನಿಲ್ ಮೊಹೋಡ್, ಇಡೀ ಭಾರತವೇ ಉಸಿರುಬಿಗಿಡಿದು ನೋಡುತ್ತಿದ್ದಾಗ ಕರಾರುವಾಕ್ಕಾಗಿ ’10’ ಅಂಕಗಳ ಬುಲ್‌ಐ ಹೊಡೆಯುವ ಮೂಲಕ ಸೆಟ್ ಅನ್ನು 54-54 ರಿಂದ ಸಮಬಲಗೊಳಿಸಿ, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 am, Fri, 2 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ