AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs PBKS Record Alert: ಚೆಪಾಕ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ ಆಯುಷ್ ಮ್ಹಾತ್ರೆ

CSK vs PBKS Record Alert: ಚೆಪಾಕ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ ಆಯುಷ್ ಮ್ಹಾತ್ರೆ

ಪೃಥ್ವಿಶಂಕರ
|

Updated on: Apr 03, 2026 | 9:23 PM

Share

Ayush Mhatre's IPL 2026 Heroics: ಆಯುಷ್ ಮ್ಹಾತ್ರೆ ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಈ ಸಾಧನೆಯೊಂದಿಗೆ, ಅವರು 18 ವರ್ಷ 261 ದಿನಗಳಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಆಗಿ ರೈನಾ ಅವರ ದಾಖಲೆಯನ್ನು ಮುರಿದರು. ಐಪಿಎಲ್‌ನಲ್ಲಿ 19 ವರ್ಷದೊಳಗಿನವರಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ ಆಯುಷ್, ಪವರ್‌ಪ್ಲೇನಲ್ಲಿ 183.93 ರ ಅತ್ಯುತ್ತಮ ಸ್ಟ್ರೈಕ್ ರೇಟ್ ಸಹ ಹೊಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಏಳನೇ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಹಾದಿಯಲ್ಲಿ ಅವರು ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಅಂತಿಮವಾಗಿ ಆಯುಷ್ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 73 ರನ್ ಬಾರಿಸಿ ಔಟಾದರು.

ಈ ಅದ್ಭುತ ಇನ್ನಿಂಗ್ಸ್‌ನೊಂದಿಗೆ, ಆಯುಷ್ ಮ್ಹಾತ್ರೆ, ಚೆಪಾಕ್ ಕ್ರೀಡಾಂಗಣದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 18 ವರ್ಷ 261 ದಿನಗಳಲ್ಲಿ ಈ ಸಾಧನೆ ಮಾಡಿದ ಆಯುಷ್, ಈ ಹಿಂದೆ 21 ವರ್ಷ 148 ದಿನಗಳಲ್ಲಿ ಈ ಸಾಧನೆ ಮಾಡಿದ್ದ ರೈನಾ ಅವರ ದಾಖಲೆಯನ್ನು ಮುರಿದರು.

ಇದರ ಜೊತೆಗೆ 19 ವರ್ಷಕ್ಕೂ ಮೊದಲೇ ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ ದಾಖಲಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಇದೀಗ ಆಯುಷ್ ಸೇರಿದ್ದಾರೆ. ಆಯುಷ್ ಇಲ್ಲಿಯವರೆಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದು, ಇದುವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್ 2025 ರ ನಂತರ ಪವರ್‌ಪ್ಲೇನಲ್ಲಿ ಕನಿಷ್ಠ 100 ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಆಯುಷ್ ಮ್ಹಾತ್ರೆ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 183.93 ಸ್ಟ್ರೈಕ್ ರೇಟ್‌ನೊಂದಿಗೆ, ಈ ಪಟ್ಟಿಯಲ್ಲಿ ಆಯುಷ್ ಅಗ್ರಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 34.33 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us