WTC Final: ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ! ಆಡುವ 11 ಆಟಗಾರರ ಪಟ್ಟಿ ಹೀಗಿದೆ

|

Updated on: Jun 17, 2021 | 7:54 PM

India Playing 11 for WTC Final: ನಿರೀಕ್ಷೆಯಂತೆ ಟೀಂ ಇಂಡಿಯಾ ಮೂವರು ವೇಗದ ಬೌಲರ್​ ಹಾಗೂ ಇಬ್ಬರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಇದರ ಜೊತೆಗೆ ಆರು ಬ್ಯಾಟ್ಸ್​ಮನ್​ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

WTC Final: ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ! ಆಡುವ 11 ಆಟಗಾರರ ಪಟ್ಟಿ ಹೀಗಿದೆ
ಟೀಮ್ ಇಂಡಿಯಾ
Follow us on

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೆಲವೇ ಗಂಟೆಗಳ ದೂರದಲ್ಲಿದೆ. ಜೂನ್ 18 ರ ಬೆಳಿಗ್ಗೆ ಸೌತಾಂಪ್ಟನ್‌ನಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಟೆಸ್ಟ್​ ವಿಶ್ವಕಪ್​ ಎನ್ನಿಸಿಕೊಂಡಿರುವ ಈ ಪಂದ್ಯಕ್ಕೆ ಟೀಂ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ನಿರೀಕ್ಷೆಯಂತೆ ಟೀಂ ಇಂಡಿಯಾ ಮೂವರು ವೇಗದ ಬೌಲರ್​ ಹಾಗೂ ಇಬ್ಬರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಇದರ ಜೊತೆಗೆ ಆರು ಬ್ಯಾಟ್ಸ್​ಮನ್​ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಕೆಟ್​ ಕೀಪಿಗ್​ ವಿಭಾಗವನ್ನು ರಿಷಭ್ ಪಂತ್ ನಿಭಾಯಿಸಲಿದ್ದಾರೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ.

ಇಶಾಂತ್, ಶಮಿ, ಬುಮ್ರಾ, ಅಶ್ವಿನ್ ಮತ್ತು ಜಡೇಜಾ ಅವರ ಸಂಯೋಜನೆಯೊಂದಿಗೆ ಟೀಮ್ ಇಂಡಿಯಾ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದಕ್ಕೂ ಮೊದಲು ಈ ಐದು ಆಟಗಾರರು ಒಟ್ಟಿಗೆ ಟೆಸ್ಟ್ ಆಡಿಲ್ಲ. ಅಚ್ಚರಿಯೆಂದರೆ, ಈ ಐದು ಜನರು ಕಳೆದ ಕೆಲವು ವರ್ಷಗಳಿಂದ ಭಾರತೀಯ ಬೌಲಿಂಗ್‌ನ ಪ್ರಮುಖ ಅಸ್ತ್ರಗಳಾಗಿದ್ದಾರೆ. ಸೌತಾಂಪ್ಟನ್ ಪಿಚ್ ಸ್ಪಿನ್ ಬೌಲಿಂಗ್​ಗೆ ಸಹಾಯ ಮಾಡುವ ಸಾಧ್ಯತೆಯಿಂದಾಗಿ ಭಾರತವು ಅಶ್ವಿನ್ ಮತ್ತು ಜಡೇಜಾ ಇಬ್ಬರಿಗೂ ಅವಕಾಶ ನೀಡಿದೆ. ಈ ಮೈದಾನದಲ್ಲಿ ಭಾರತ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ ಮತ್ತು ಎರಡರಲ್ಲೂ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಅಲ್ಲದೆ, ಇಂಗ್ಲೆಂಡ್ ಸ್ಪಿನ್ನರ್ ಇಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ಎರಡೂ ಬಾರಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಶಃ ಈ ಇತಿಹಾಸದ ದೃಷ್ಟಿಯಿಂದ, ಭಾರತವು ಸ್ಪಿನ್ ಬೌಲಿಂಗ್​ಗೆ ಹೆಚ್ಚಿನ ಆಧ್ಯತೆ ನೀಡಿದೆ.

ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೀಗಿದೆ
ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ(ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ರಿಷಭ್ ಪಂತ್, ಆರ್​.ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್​ ಶಮಿ.

ನ್ಯೂಜಿಲೆಂಡ್ ಆಡುವ ಇಲೆವೆನ್ ಘೋಷಿಸಲಿಲ್ಲ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕಾಗಿ ಭಾರತ ಈಗಾಗಲೇ ತನ್ನ ಅಂತಿಮ 15 ಆಟಗಾರರನ್ನು ಘೋಷಿಸಿತ್ತು. ಈಗ ಇವರುಗಳಲ್ಲಿ 11 ಜನರನ್ನು ಆಯ್ಕೆ ಮಾಡಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಜೂನ್ 18 ರಂದು ಮಧ್ಯಾಹ್ನ 3 ಗಂಟೆಗೆ ಸೌತಾಂಪ್ಟನ್‌ನಲ್ಲಿ ಪ್ರಾರಂಭವಾಗಲಿದೆ. ಆದರೆ ಇದುವರೆಗೂ ನ್ಯೂಜಿಲೆಂಡ್‌ನ ಆಡುವ ಇಲೆವೆನ್ ಘೋಷಿಸಲಾಗಿಲ್ಲ. ಟಾಸ್ ಸಮಯದಲ್ಲಿ ಕಿವಿ ತಂಡವು ತನ್ನ ಆಡುವ ಇಲೆವೆನ್​ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಪಂದ್ಯವನ್ನು ಯಾರು ಗೆದ್ದರೂ ಅವರು ಟೆಸ್ಟ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡವಾಗುತ್ತಾರೆ. ಅಲ್ಲದೆ, ಅವರು ಐಸಿಸಿ ಟೆಸ್ಟ್ ಮೇಸ್ ಅನ್ನು ಟ್ರೋಫಿಯಾಗಿ ಪಡೆಯಲಿದ್ದಾರೆ.

Published On - 7:47 pm, Thu, 17 June 21