IND vs SL: ಲಂಕಾ ಸರಣಿಯಲ್ಲಿ ಗುರು ದ್ರಾವಿಡ್ಗೆ ಅಗ್ನಿ ಪರೀಕ್ಷೆ! ಪ್ರತಿಯೊಂದು ಸ್ಥಾನಕ್ಕೂ ಪೈಪೋಟಿ.. ಯಾರಿಗೆ ಚಾನ್ಸ್?
IND vs SL: ಬಿಸಿಸಿಐ ಬರೋಬ್ಬರಿ 20ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಹೀಗಾಗಿ ಸಹಜವಾಗೇ ಯಾರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡ್ಬೇಕು ಅನ್ನೋದೇ ದ್ರಾವಿಡ್ಗೆ ದೊಡ್ಡ ಟೆನ್ಷನ್ ಆಗಿದೆ.
ಲಂಕಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಗುರುವಾಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ದ್ರಾವಿಡ್ ಮುಂದೆ ಸಾಲು ಸಾಲು ಸವಾಲುಗಳು ಉದ್ಭವಗೊಂಡಿವೆ. ಜುಲೈ 13ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯ ಏಕದಿನ ಮತ್ತು ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ. ಬೆಂಗಳೂರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರೋ ದ್ರಾವಿಡ್, ಈ ಹಿಂದೆ ಟೀಂ ಇಂಡಿಯಾ ಎ ಹಾಗೂ ಅಂಡರ್ 19ತಂಡಕ್ಕೆ ಕೋಚ್ ಆಗಿ ಸಕ್ಸಸ್ ತಂದುಕೊಟ್ಟಿದ್ರು. ಅಲ್ಲದೇ, ಐಪಿಎಲ್ನಲ್ಲೂ ರಾಹುಲ್, ರಾಜಸ್ಥಾನ ತಂಡಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ರು.
ಲಂಕಾ ಸರಣಿಯಲ್ಲಿ ಗುರು ದ್ರಾವಿಡ್ಗೆ ಅಗ್ನಿ ಪರೀಕ್ಷೆ! ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ದ್ರೋಣಾ ಚಾರ್ಯ ರಾಹುಲ್ಗೆ, ಪ್ರತಿಯೊಂದು ಪಂದ್ಯದಲ್ಲೂ ಅಗ್ನಿ ಪರೀಕ್ಷೆಗಳು ಎದುರಾಗಲಿವೆ. ಯಾಕಂದ್ರೆ, ಬಿಸಿಸಿಐ ಬರೋಬ್ಬರಿ 20ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಹೀಗಾಗಿ ಸಹಜವಾಗೇ ಯಾರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡ್ಬೇಕು ಅನ್ನೋದೇ ದ್ರಾವಿಡ್ಗೆ ದೊಡ್ಡ ಟೆನ್ಷನ್ ಆಗಿದೆ.
ನಾಲ್ವರು ಆರಂಭಿಕರು, ನಾಲ್ಕನೇ ಕ್ರಮಾಂಕಕ್ಕೆ ಇಬ್ಬರು ಫೈಟ್! ಸರಣಿಯಲ್ಲಿ ಯಾರನ್ನ ಅರಂಭಿಕರನ್ನಾಗಿ ಕಣಕ್ಕಿಳಿಸ ಬೇಕೆಂಬುದೇ ದೊಡ್ಡ ಪ್ರಶ್ನೆಯಾಗಿದೆ. ಶಿಖರ್ ಧವನ್ ನಾಯಕನಾಗಿದ್ದು, ಎಲ್ಲಾ ಪಂದ್ಯಗಳನ್ನ ಆಡಲಿದ್ದಾರೆ. ಆದ್ರೆ, ಧವನ್ ಜೊತೆ ಇನ್ನಿಂಗ್ಸ್ ಆರಂಭಿಸೋಕೆ ಮೂವರ ನಡುವೆ ಪೈಪೋಟಿ ನಡೀತಿದೆ. ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ಐಪಿಎಲ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದು, ಒಂದೇ ಒಂದು ಸ್ಥಾನಕ್ಕೆ ಫೈಟ್ ನಡೆಸ್ತಿದ್ದಾರೆ.
ಮುಂಬೈನ ಹೊಡಿಬಡಿ ಆಟಗಾರ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋದು ಪಕ್ಕಾ. ಆದ್ರೆ, ನಂಬರ್ ಫೋರ್ನಲ್ಲಿ ಬ್ಯಾಟಿಂಗ್ ಮಾಡೋಕೆ ಕನ್ನಡಿಗ ಮನೀಷ್ ಪಾಂಡೆ, ನಿತೀಶ್ ರಾಣಾ ಪೈಪೋಟಿ ನಡೆಸ್ತಿದ್ದಾರೆ. ಇನ್ನೂ ವಿಕೆಟ್ ಕೀಪರ್ ಕೋಟಾದಡಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಬ್ಬರು ಐಪಿಎಲ್ನಲ್ಲಿ ಬೊಂಬಾಟ್ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿ ದ್ರಾವಿಡ್ಗೆ ಇದು ಕೂಡ ತಲೆನೋವು ಹೆಚ್ಚಾಗುವಂತೆ ಮಾಡಿದೆ. ಹಾಗೇ, ಆಲ್ರೌಂಡರ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ, ಕನ್ನಡಿಗ ಕೆ.ಗೌತಮ್ ಅವಕಾಶ ಪಡೆದಿದ್ದಾರೆ.
ಸ್ಪಿನ್ನರ್ಗಳ ವಿಚಾರದಲ್ಲಿ ಯಜ್ವಿಂದರ್ ಚಹಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ರಾಹುಲ್ ಚಹರ್ ತಂಡದಲ್ಲಿದ್ದಾರೆ. ಈ ನಾಲ್ವರು ಅದ್ಭುತವಾಗೇ ಕೈಚಳಕ ತೋರುತ್ತಿದ್ದಾರೆ. ವೇಗಗಳ ಕೋಟಾದಲ್ಲೂ ಹೆಚ್ಚಿನ ಪೈಪೋಟಿ ಇದೆ. ತಂಡದಲ್ಲಿ ಐವರು ವೇಗಿಗಳಿದ್ದಾರೆ. ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ ಹಾಗೂ ಚೇತನ್ ಸಕಾರಿಯಾ ನಡುವೆ ಯಾರನ್ನ ಆಡಿಸಬೇಕು, ಯಾರಿಗೆ ಕೊಕ್ ಕೊಡಬೇಕು ಅನ್ನೋದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಬಿಸಿಸಿಐ ಏನೋ ಬರೋಬ್ಬರಿ 20ಆಟಗಾರರನ್ನ ತಂಡವನ್ನ ರಾಹುಲ್ ದ್ರಾವಿಡ್ ಕೈಗೆ ಒಪ್ಪಿಸಿದೆ. ಆದ್ರೆ, 20ರಲ್ಲಿ ಯಾವ 11ಅಟಗಾರರನ್ನ ಕಣಕ್ಕಿಳಿಸಬೇಕೆಂಬುದೇ ದ್ರಾವಿಡ್ಗೆ ತಲೆನೋವಾಗಿದೆ.