ಕೊವಿಡ್ ನಿಯಮಾವಳಿ ಅನುಸರಿಸದಿದ್ದರೆ ಕ್ರಿಕೆಟ್ ಆಡಲು ಬರಬೇಡಿ: ಬೇಟ್ಸ್ ಹೇಳಿಕೆಗೆ BCCI ಅಸಮಧಾನ

| Updated By: ganapathi bhat

Updated on: Apr 06, 2022 | 11:01 PM

ಭಾರತೀಯ ಕ್ರಿಕೆಟ್ ತಂಡಕ್ಕೆ ಕೊವಿಡ್ ನಿಯಮಾವಳಿಗಳನ್ನು ಅನುಸರಿಸುವ ಆಸಕ್ತಿ ಇಲ್ಲ ಎಂಬಂತೆ ಆಸ್ಟ್ರೇಲಿಯಾ ರಾಜಕಾರಣಿಗಳು ಮಾತನಾಡಿದ್ದಾರೆ.

ಕೊವಿಡ್ ನಿಯಮಾವಳಿ ಅನುಸರಿಸದಿದ್ದರೆ ಕ್ರಿಕೆಟ್ ಆಡಲು ಬರಬೇಡಿ: ಬೇಟ್ಸ್ ಹೇಳಿಕೆಗೆ BCCI ಅಸಮಧಾನ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಕೊವಿಡ್-19ರ ನಡುವೆ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯ ವೇಳೆ, ಭಾರತೀಯ ಕ್ರಿಕೆಟ್ ತಂಡ ಕೊವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆಸ್ಟ್ರೇಲಿಯಾ ಕ್ವೀನ್ಸ್​ಲ್ಯಾಂಡ್ ರಾಜಕಾರಣಿ ರಾಸ್ ಬೇಟ್ಸ್ BCCI ವಿರುದ್ಧ ಹೇಳಿಕೆ ನೀಡಿದ್ದಾರೆ. ರಾಸ್ ಬೇಟ್ಸ್ ಹೇಳಿಕೆ ಬಗ್ಗೆ BCCI ಅಸಮಾಧಾನ ವ್ಯಕ್ತಪಡಿಸಿದೆ.

ಭಾರತೀಯ ಕ್ರಿಕೆಟ್ ತಂಡದ ವಿರುದ್ಧದ ಸಾಲು ಸಾಲು ಹೇಳಿಕೆಗಳಿಗೆ ಬೇಸರ ವ್ಯಕ್ತಪಡಿಸಿರುವ BCCI, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಮೂರು ಪಂದ್ಯದಲ್ಲಿ ಅಂತ್ಯಗೊಳಿಸುವ ಬಗ್ಗೆ ಯೋಚನೆ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಿಡ್ನಿ ಮೈದಾನದಲ್ಲಿ ನಡೆಯುವ ಮೂರನೇ ಪಂದ್ಯಕ್ಕೆ ಸರಣಿಯನ್ನು ಮುಕ್ತಾಯಗೊಳಿಸುವ ಆಲೋಚನೆಯಲ್ಲಿ BCCI ಇದೆ ಎಂದು ತಿಳಿದುಬಂದಿದೆ.

ಭಾರತೀಯ ಕ್ರಿಕೆಟ್ ಸಂಸ್ಥೆಯು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೊಂದಿಗೆ ಒಗ್ಗಟ್ಟಾಗಿ ವರ್ತಿಸಿದೆ. ಭಾರತದ ಆಸಿಸ್ ಪ್ರವಾಸವು ಸೂಕ್ತ ರೀತಿಯಲ್ಲಿ ನಡೆಯುವಲ್ಲಿ ಶ್ರಮಿಸುತ್ತಿದೆ. ಈ ನಡುವೆ, ರಾಸ್ ಬೇಟ್ಸ್ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಭಾರತೀಯ ಕ್ರಿಕೆಟ್ ಸಂಸ್ಥೆಯ ಮೂಲಗಳು ಪ್ರತಿಕ್ರಿಯೆ ನೀಡಿವೆ.

ಭಾರತೀಯ ಕ್ರಿಕೆಟ್ ತಂಡಕ್ಕೆ ಕೊವಿಡ್ ನಿಯಮಾವಳಿಗಳನ್ನು ಅನುಸರಿಸುವ ಆಸಕ್ತಿ ಇಲ್ಲ ಎಂಬಂತೆ ಆಸ್ಟ್ರೇಲಿಯಾ ರಾಜಕಾರಣಿಗಳು ಮಾತನಾಡಿದ್ದಾರೆ. ಭಾರತೀಯ ತಂಡವು ಆಸಿಸ್​ನಲ್ಲಿ ಕ್ರಿಕೆಟ್ ಆಡುವುದು ಅವರಿಗೆ ಇಷ್ಟವಿಲ್ಲ ಎಂಬುದು ನೋವಿನ ಸಂಗತಿ ಎಂದು ಹೇಳಿದ್ದಾರೆ.

ರಾಜಕಾರಣಿಗಳ ಹೇಳಿಕೆಗಳು ಭಾರತೀಯ ಕ್ರಿಕೆಟ್ ಆಟಗಾರರನ್ನು ಕೀಳುಮಟ್ಟದಲ್ಲಿ ನೋಡಿದೆ. ಆದರೆ, ಭಾರತೀಯ ಕ್ರಿಕೆಟ್ ಸಂಸ್ಥೆಗೆ ನಿಯಮಾವಳಿಗಳನ್ನು ಪಾಲಿಸುವುದೇ ಮುಖ್ಯವಾಗಿದೆ. ಅದೇ ಕಾರಣಕ್ಕೆ ರೋಹಿತ್ ಶರ್ಮಾಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ನೀಡಲಾಗಿದೆ ಎಂದು BCCI ಹೇಳಿದೆ.

ಕೊವಿಡ್ ನಿಯಮಾವಳಿಗಳನ್ನು ಅನುಸರಿಸುವುದಿಲ್ಲವಾದರೆ, ಭಾರತ ತಂಡ ಕ್ರಿಕೆಟ್ ಆಡಲು ಬರುವುದು ಬೇಡ ಎಂದು ರಾಸ್ ಬೇಟ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದೇ ಹೇಳಿಕೆಯನ್ನು ಕ್ವೀನ್ಸ್​ಲ್ಯಾಂಡ್ ಶಾಡೋ ಕ್ರೀಡಾ ಸಚಿವ ಟಿಮ್ ಮ್ಯಾಂಡರ್ ಕೂಡ ಪುನರುಚ್ಚರಿಸಿದ್ದರು. ಆದ್ದರಿಂದ, ಭಾರತೀಯ ಕ್ರಿಕೆಟ್ ಸಂಸ್ಥೆ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಬಗ್ಗೆ ಯೋಚಿಸುವಂತಾಗಿದೆ. ಮೂರನೇ ಟೆಸ್ಟ್ ಪಂದ್ಯವು ಜನವರಿ 7ರಿಂದ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

India vs Australia Test Series | ಟೀಮ್ ಇಂಡಿಯಾದ ಸದಸ್ಯರ ವಿರುದ್ಧ ಸಲ್ಲದ ಆರೋಪ ಮಾಡಲಾರಂಭಿಸಿದ ಆಸ್ಸೀ ಮಿಡಿಯಾ

Published On - 5:23 pm, Mon, 4 January 21