ಭಾರತದ ಮಾಜಿ ಆರಂಭ ಆಟಗಾರನ ಗೂಗ್ಲಿಗಳನ್ನು ಅರ್ಥಮಾಡಿಕೊಳ್ಳದ ಅಭಿಮಾನಿಗಳು ಸುಸ್ತು!
ಭಾರತದ ಮಾಜಿ ಕ್ರಿಕೆಟರ್ ವಾಸಿಮ್ ಜಾಫರ್ ಬ್ರೇನ್ ಟೀಸರ್ಗಳಂಥ ಟ್ವೀಟ್ಗಳನ್ನು ಮಾಡುತ್ತಾ ಸುದ್ದಿಯಲ್ಲಿದ್ದಾರೆ. ಅವರ ಟ್ವೀಟ್ಗಳನ್ನು ಡಿಕೋಡ್ ಮಾಡುವುದು ಅಷ್ಟು ಸುಲಭವಲ್ಲ ಅಂತ ಅವರ ಅಭಿಮಾನಿಗಳಿಗೆ ಗೊತ್ತಾಗಿಬಿಟ್ಟಿದೆ.
ಭಾರತದ ಮಾಜಿ ಆರಂಭ ಆಟಗಾರ ವಾಸಿಮ್ ಜಾಫರ್ ಇತ್ತೀಚಿಗೆ ತಮ್ಮ ವಿಚಿತ್ರವಾದ ಟ್ವೀಟ್ಗಳಿಂದ ಸುದ್ದಿಯಲ್ಲಿದ್ದಾರೆ. ಮೆಲ್ಬರ್ನ್ನಲ್ಲಿ ಎರಡನೆ ಟೆಸ್ಟ್ ಶುರುವಾಗುವ ಮೊದಲು ಅವರು ಒಂದು ಟ್ವೀಟ್ ಮಾಡಿ ಅದನ್ನು ಡಿಕೋಡ್ ಮಾಡಿ ಅರ್ಥಮಾಡಿಕೊಳ್ಳಿ ಅಂತ ಓದುಗರಿಗೆ ತಿಳಿಸಿದ್ದರು. ಇಂಗ್ಲಿಷ್ ಭಾಷೆಯಲ್ಲಿದ್ದ ಅವರ ಟ್ವೀಟ್ ಹೀಗಿತ್ತು.
People In Cricket Know Grief in Life Lingers Aplenty Never Dabble Rise And Handicraft Unique Legacy.
ಅಸಲಿಗೆ ಜಾಫರ್ರ ಈ ಟ್ವೀಟ್ ಜನರಿಗೆ ಅರ್ಥವಾಗಿರಲಿಲ್ಲ. ಅಂತಿಮವಾಗಿ ಜಾಸ್ತಿ ಐಕ್ಯೂ ಇರುವವರು ಅದನ್ನು ಡಿಕೋಡ್ ಮಾಡಿಯೇ ಬಿಟ್ಟರು. ಜಾಫರ್, ಪ್ರತಿ ಶಬ್ದದ ಮೊದಲ ಅಕ್ಷರವನ್ನು ಸೇರಿಸಿ Pick Gill and Rahul ಎನ್ನುವ ಪದಪುಂಜವನ್ನು ಮೆಲ್ಬರ್ನ್ನಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದ ಅಜಿಂಕ್ಯಾ ರಹಾನೆಗೆ ಸಂದೇಶ ರವಾನಿಸಿದ್ದರು.
ಇಂದು ಅವರು ಮೆದುಳಿಗೆ ಕಸರತ್ತು ನೀಡುವ ಮತ್ತೊಂದು ಟ್ವೀಟ್ ಮಾಡಿದ್ದು ಅದು ಹೀಗಿದೆ.
Today I had nice filter coffee by the lake. Amazing how fish can breathe underwater. Then I walked past a potrait of Che Guevara before bumping into an old pal from Dombivali who now has a restaurant in Borivali.
Btw good luck for SCG test @ajinkyarahane88 #Decode ? #AUSvIND
— Wasim Jaffer (@WasimJaffer14) January 4, 2021
ಈ ಟ್ವೀಟ್ ಕೆಳಗೆ ಅವರು, Btw good luck for SCG Test ಅಂತ ಬರೆದಿದ್ದಾರೆ.
ಇದನ್ನು ಡಿಕೋಡ್ ಮಾಡುವುದೂ ಸುಲಭವಾಗಿಲ್ಲ, ಯಾಕೆಂದರೆ ಮೊದಲಿನದಕ್ಕಿಂತ ಇದು ಭಿನ್ನವಾಗಿದೆ. ಆದರೆ ಅವರನ್ನು ಫಾಲೊ ಮಾಡುವ ಬುದ್ಧಿವಂತ ಕ್ರಿಕೆಟ್ ಪ್ರೇಮಿಗಳು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಟ್ವೀಟ್ ಮೂಲಕ ಅವರು ಸಿಡ್ನಿಯಲ್ಲಿ ನಡೆಯುವ ಮೂರನೆ ಟೆಸ್ಟ್ಗೆ ಭಾರತದ ಬ್ಯಾಟಿಂಗ್ ಲೈನಪ್ ಸೂಚಿಸಿದ್ದಾರೆ.
ಫಿಲ್ಟರ್ ಕಾಫಿಯ ಉಲ್ಲೇಖವನ್ನು ಜಾಫರ್ ಹಿಂದೆ ‘ಕಾಫಿ ವಿಥ್ ಕರಣ್’ ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅದರಲ್ಲಿ ವಿವಾದಕ್ಕೆ ಸಿಲುಕುವಂಥ ಮಾತುಗಳನ್ನಾಡಿದ್ದ ಕೆ.ಎಲ್. ರಾಹುಲ್ಗೆ ಮಾಡಿದ್ದಾರೆ. ಗಿಲ್ ಅವರನ್ನು ನೀರಿನಲ್ಲಿ ಉಸಿರಾಡುವ ಮೀನಿಗೆ (gill-ಕಿವಿರು) ಹೋಲಿಸಿದ್ದಾರೆ. ಚೇತೇಶ್ವರ್ ಪೂಜಾರಾ ಅವರಿಗೆ ಅರ್ಜೆಂಟೀನಾದ ಕ್ರಾಂತಿಕಾರ ನಾಯಕ ಮತ್ತು ಲೇಖಕ ಚೆ ಗವೆರಾ ಅವರನ್ನು ಉಲ್ಲೇಖಿಸಿದ್ದಾರೆ. ಅವರ ಓಲ್ಡ್ ಪಾಲ್ ಎಂದರೆ ರೋಹಿತ್ ಶರ್ಮ ಮತ್ತು ಡೊಂಬಿವಿಲ್ಲಿಯ ಕ್ರಿಕೆಟರ್ ಅಂದರೆ ಅಜಿಂಕ್ಯಾ ರಹಾನೆ. ಭಾರತದ ಹಂಗಾಮಿ ನಾಯಕನ ಕ್ರಿಕೆಟ್ ಬದುಕು ಆರಂಭವಾಗಿದ್ದು ಡೊಂಬಿವಿಲ್ಲಿಯಿಂದ ಎಲ್ಲರಿಗೂ ಗೊತ್ತಿದೆ.
ಅಸಲಿಗೆ, ಜಾಫರ್ ಈ ಟ್ವೀಟ್ನಲ್ಲಿ ಮೂರನೆ ಟೆಸ್ಟ್ಗೆ ಭಾರತದ ಬ್ಯಾಟಿಂಗ್ ಲೈನಪ್ ಹೇಗಿರಬೇಕೆಂದು ಹೇಳಿದ್ದಾರೆ. ಕೆಎಲ್ ರಾಹುಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರಾ, ರೋಹಿತ್ ಶರ್ಮ ಮತ್ತು ಅಜಿಂಕ್ಯಾ ರಹಾನೆ.
ನಿಸ್ಸಂದೇಹವಾಗಿ, ಒಂದು ಹೊಸ ಬ್ರೇನ್ ಟೀಸರನ್ನು ಜಾಫರ್ ಕ್ರಿಕೆಟ್ ಪ್ರೇಮಿಗಳಿಗೆ ಒದಗಿಸಿದ್ದಾರೆ. ಮುಂದೆ ಬರೋದು ಹೇಗಿರಲಿದೆಯೋ?
Published On - 7:28 pm, Mon, 4 January 21