ಸತತ ಮೂರನೇ ಶತಕ ದಾಖಲಿಸಿದ ವಿಲಿಯಮ್ಸನ್​ರನ್ನು ಹಾಡಿ ಹೊಗಳಿದ ಲಕ್ಷ್ಮಣ್

ಭಾರತದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ವಿವಿಎಸ್ ಲಕ್ಷ್ಮಣ್ ಟೆಸ್ಟ್​ಗಳಲ್ಲಿ ಇಂದು ಸತತ ಮೂರನೇ ಶತಕ ಬಾರಿಸಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮತ್ತು ಮಾಡಿಕೊಳ್ಳುವ ತಯಾರಿಯನ್ನು ಶ್ಲಾಘಿಸಿದ್ದಾರೆ.

ಸತತ ಮೂರನೇ ಶತಕ ದಾಖಲಿಸಿದ ವಿಲಿಯಮ್ಸನ್​ರನ್ನು ಹಾಡಿ ಹೊಗಳಿದ ಲಕ್ಷ್ಮಣ್
ಕೇನ್ ವಿಲಿಯಮ್ಸನ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 04, 2021 | 8:44 PM

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಾನ್ಯಾಕೆ ವಿಶ್ವದ ನಂಬರ್ ವನ್ ಟೆಸ್ಟ್ ಬ್ಯಾಟ್ಸ್​ಮನ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧ ಕ್ರೈಸ್ಟ್​ಚರ್ಚ್​ನ ಹೇಗ್ಲೀ ಓವಲ್​ನಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದ ಎರಡನೇ ದಿನವಾಗಿದ್ದ ಇಂದು ಕೇನ್ ಇನ್ನೊಂದು ಆಕರ್ಷಕ ಅಜೇಯ ಶತಕ ಬಾರಿಸಿ, ಸತತವಾಗಿ ಮೂರು ಟೆಸ್ಟ್​ಗಳಲ್ಲಿ ಶತಕ ದಾಖಲಿಸಿದ ಕೀರ್ತಿಗೆ ಪಾತ್ರರಾದರು.

ಪಾಕ್ ವಿರುದ್ಧ ಆಡಿದ ಮೊದಲ ಟೆಸ್ಟ್​ನಲ್ಲೂ ಶತಕ ಬಾರಿಸಿದ್ದ ಕೇನ್, ಪಿತೃತ್ವದ ರಜೆ ಪಡೆದು ಹೆರಿಗೆ ಸಮಯದಲ್ಲಿ ಪತ್ನಿಯೊಂದಿಗಿರಲು ತೆರಳುವ ಮೊದಲು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೊದಲ ಟೆಸ್ಟ್​ನಲ್ಲಿ (ಸೆಡೆನ್ ಪಾರ್ಕ್, ಹಾಮಿಲ್ಟನ್) ಮನಮೋಹಕ ದ್ವಿಶತಕ (251) ಬಾರಿಸಿದ್ದರು.

ಟೆಸ್ಟ್​ಗಳಲ್ಲಿ ಕೇನ್ ಅವರ 24ನೇ ಶತಕ ಇದಾಗಿದ್ದು ಈಗಿನ್ನೂ ಅವರು 30ರ ಪ್ರಾಯದವರಾಗಿರುವುದರಿಂದ ಮುಂಬರುವ ವರ್ಷಗಳಲ್ಲೂ ಅವರ ಬ್ಯಾಟ್​ನಿಂದ ಮತ್ತಷ್ಟು ಶತಕಗಳು ದಾಖಲಾಗುವುದು ನಿಶ್ಚಿತ.

ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಕೇನ್ ಪ್ರತಿನಿಧಿಸುವ ಸನ್ ರೈಸರ್ಸ್ ಹೈದರಾಬಾದ ತಂಡದ ಮೆಂಟರ್ ಮತ್ತು ತಾವಾಡುತ್ತಿದ್ದ ದಿನಗಳಲ್ಲಿ ಅತ್ಯಂತ ಕಲಾತ್ಮಕ ಹಾಗೂ ದಕ್ಷಿಣ ಭಾರತದ ಆಟಗಾರರಿಗೆ ಒಲಿದಿರುವ ರಿಸ್ಟೀ ಎಲೆಗೆನ್ಸ್ ಅನ್ನು ಮೈದಾನಗಳಲ್ಲಿ ಪ್ರದರ್ಶಿಸಿ ಭಾರತಕ್ಕೆ ಟನ್​ಗಟ್ಟಲೆ ರನ್ ಗಳಿಸಿದ ವಿವಿಎಸ್ ಲಕ್ಷಣ್, ಕಿವೀಸ್ ನಾಯಕನ್ನು ಮನಸಾರೆ ಕೊಂಡಾಡಿದ್ದಾರೆ.

ವಿವಿಎಸ್ ಲಕ್ಷ್ಮಣ್

‘ಕೇನ್ ವಿಲಿಯಮ್ಸನ್ ಅವರ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನಗಳು ನನ್ನಲ್ಲಿ ಸೋಜಿಗ ಹುಟ್ಟಿಸುವುದಿಲ್ಲ. ಅವರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ವಿಧಾನ ಮತ್ತು ನಡೆಸುವ ತಯಾರಿ ನಂಬಲಸದಳವಾದದ್ದು ಮತ್ತು ಅವರ ಯಶಸ್ಸಿಗೆ ಅದೇ ಕಾರಣ. ಪ್ರತಿಯೊಬ್ಬ ಯುವ ಆಟಗಾರನಿಗೆ ಅವರು ರೋಲ್ ಮಾಡೆಲ್’ ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಎರಡನೇ ಟೆಸ್ಟ್​ನ ಎರಡನೇ ದಿನವಾಗಿದ್ದ ಇಂದು ಪಾಕಿಸ್ತಾನದ ಮೊದಲ ಇನ್ನಿಂಗ್ಸ್​ನಲ್ಲಿ ಗಳಿಸಿದ 297-ರನ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಪ್ರಾರಂಭಿಸಿದ ಅತಿಥೇಯರು ಲಂಚ್ ವಿರಾಮದ ಹೊತ್ತಿಗೆ 3 ವಿಕೆಟ್​ ನಷ್ಟಕ್ಕೆ 71 ರನ್​ಗಳಿಸಿದ್ದರು.

ಆದರೆ, ಮುರಿಯದ ನಾಲ್ಕನೇ ವಿಕೆಟ್​ಗೆ ಹೆನ್ರಿ ನಿಕೊಲ್ಸ್ (ಅಜೇಯ 89) ಜತೆ 215 ರನ್ ಸೇರಿಸಿದ ವಿಲಿಯಮ್ಸನ್ ತಮ್ಮ ಟೀಮನ್ನು ಅಪಾಯದಿಂದ ಪಾರು ಮಾಡುವ ಜೊತೆಗೆ ಮೊದಲ ಇನ್ನಿಂಗ್ಸ್ ಮುನ್ನಡೆಯತ್ತ ಅದನ್ನು ಕೊಂಡೊಯ್ಯುತ್ತಿದ್ದಾರೆ. ದಿನದಾಟ ಮುಗಿದಾಗ ನ್ಯೂಜಿಲೆಂಡ್ ಸ್ಕೋರ್ 286/3 ಆಗಿತ್ತು.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ