ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಆಡಳಿತಾತ್ಮಕ ಮ್ಯಾನೇಜರ್ ಗಿರೀಷ್ ಡೊಂಗ್ರೆ ಅವರು ಶುಭ್ಮನ್ ಗಿಲ್ ಗಾಯಗೊಂಡಿರುವುದರಿಂದ ಇಬ್ಬರು ಬದಲೀ ಅಟಗಾರರರನ್ನು ಇಂಗ್ಲೆಂಡ್ ಕಳಿಸಬೇಕೆಂದು ಬಿಸಿಸಿಐಗೆ ಜೂನ್ 28 ರಂದು ಪತ್ರ ಬರೆದಿದ್ದರು. ಆದರೆ ಸೀನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಚೇರ್ಮನ್ ಚೇತನ್ ಶರ್ಮ ಅವರು ಡೊಂಗ್ರೆ ಅವರ ಮೇಲ್ಗೆ ಯಾವುದೇ ಉತ್ತರ ನೀಡಿಲ್ಲ. ತಂಡದಲ್ಲಿ ನಾಲ್ವರು ಸ್ಪೆಷಲಿಸ್ಟ್ ಆರಂಭ ಅಟಗಾರರು ಇರುವುದರಿಂದ ಯಾರನ್ನೂ ಕಳಿಸುವ ಅವಶ್ಯಕತೆಯಿಲ್ಲ ಎಂದು ಆಯ್ಕೆ ಸಮಿತಿ ಭಾವಿಸಿದಂತಿದೆ.
ಪೃಥ್ವಿ ಶಾ ಅವರನ್ನು ಬದಲೀ ಆಟಗಾರನಾಗಿ ಯುಕೆಗೆ ಕಳಿಸುವ ಯೋಜನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಹೆಸರು ಹೇಳಿಕೊಳ್ಳಲಿಚ್ಛಿಸಿದ ಬಿಸಿಸಿಐ ಅಧಿಕಾರಿಯೊಬ್ಬರು, ‘ಪೃಥ್ವಿ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾನೆ ಮತ್ತು ಅಲ್ಲಿ 6 ಪಂದ್ಯಗಳು ಮುಗಿಯುವವರೆಗೆ ಅಂದರೆ ಜುಲೈ 26ರವರೆಗೆ ಅವನು ಅಲ್ಲೇ ಇರುತ್ತಾನೆ.’ ಎಂದು ಹೇಳಿದರು.
‘ಒಮ್ಮೆ ಶ್ರೀಲಂಕಾ ಪ್ರವಾಸ ಮುಗಿಯಿತು ಅಂತಾದ್ರೆ ನಾವು ಅ ವಿಷಯದ ಬಗ್ಗೆ ಯೋಚಿಸಬಹುದೇ ಹೊರತು ಸದ್ಯಕ್ಕಂತೂ ಅಂಥ ಯೋಚನೆಗಳಿಲ್ಲ,’ ಎಂದು ಅವರು ಹೇಳಿದ್ದಾರೆ.
ಆರಂಭ ಆಟಗಾರ ಅಭಿಮನ್ಯು ಈಶ್ವರನ್ ತಂಡದ ಜೊತೆಗಿದ್ದರೂ ಅವರು ಟೀಮ್ ಮ್ಯಾನೇಜ್ಮೆಂಟ್ನ ವಿಶ್ವಾಸ ಗೆಲ್ಲುವಲ್ಲಿ ವಿಫಲವಾಗಿರುವುದರಿಂದ ಇಬ್ಬರು ಸ್ಪೆಷಲಿಸ್ಟ್ ಓಪನರ್ಗಳನ್ನು ಕಳಿಸಬೇಕೆಂದು ಡೊಂಗ್ರೆ ಮೇಲ್ ಕಳಿಸಿರುವರೆಂದು ಮೂಲಗಳಿಂದ ಗೊತ್ತಾಗಿದೆ. ಈಶ್ವರನ್, ಟೀಮ್ ಇಂಡಿಯಾದ ಥ್ರೋ-ಇನ್ ಪರಿಣಿತ ರಾಘವೇಂದ್ರ ಅವರ ಎಸೆತಗಳನ್ನು ಆಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ಸನ್ನಿವೇಶವು ಬಿಸಿಸಿಐಗೆ ಅಹಿತಕರ ಪ್ರಶ್ನೆಗಳಿಗೆ ಉತ್ತರ ನೀಡುವಂಥ ಸ್ಥಿತಿಯನ್ನು ನಿರ್ಮಿಸಿದೆ.
‘ಕೆ ಎಲ್ ರಾಹುಲ್ ಅವರನ್ನು ಯಾಕೆ ಕೇವಲ ಒಬ್ಬ ಮಧ್ಯಮ ಕ್ರಮಾಂಕದ ಆಟಗರನಾಗಿ ನೋಡಲಾಗುತ್ತಿದೆ? ಅವರು ಸೀಮಿತ ಓವರ್ಗಳ ಪಂದ್ಯಗಳಲ್ಲಿ ಓಪನರ್ ಸ್ಥಾನದಲ್ಲಿ ಆಡುವುದಿಲ್ಲವೇ? ಇಂಗ್ಲೆಂಡ್ ಪಿಚ್ಗಳಲ್ಲಿ ಆರಂಭ ಆಟಗಾರನಾಗಿ ಆಡುವವರಿಗೆಲ್ಲ ಸಮಾನ ಅವಕಾಶ ಮತ್ತು ಸಮಾನ ರಿಸ್ಕ್ಗಳು ಇದ್ದೇ ಇರುತ್ತವೆ,’ ಎಂದು ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಟೆಸ್ಟ್ ಕ್ರಿಕೆಟ್ನಲ್ಲಿ 2000 ಕ್ಕಿಂತ ಹೆಚ್ಚು ರನ್ ಗಳಿಸಿರುವ ರಾಹುಲ್ ಅವರು ಜಿಮ್ಮಿ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರು ಡ್ಯೂಕ್ ಬಾಲ್ನಿಂದ ದಾಳಿ ಮಾಡುವಾಗ ಅವರ ವಿರುದ್ಧ ಕಷ್ಟ ಪಡಬಹುದು ಅಂತ ಟೀಮ್ ಮ್ಯಾನೇಜ್ಮೆಂಟ್ ಭಾವಿಸುತ್ತಿದ್ದರೆ ಅಡಿಲೇಡ್ ಟೆಸ್ಟ್ ನಂತರ ಯಾವುದೇ ಪ್ರಥಮ ದರ್ಜೆ ಪಂದ್ಯ ಆಡಿರದ ಪೃಥ್ವಿ ಇಂಗ್ಲಿಷ್ ಬೌಲರ್ಗಳನ್ನು ಎದುರಿಸಿ ರನ್ ಗಳಿಸಬಲ್ಲ ಎನ್ನುವುದಕ್ಕೆ ಖಾತ್ರಿ ಏನು?’ ಅಂತ ಭಾರತದ ಮಾಜಿ ಆಟಗಾರರೊಬ್ಬರು ಕೇಳಿದ್ದಾರೆ.
ಹಾಗೆಯೇ ಕೇವಲ ಥ್ರೋ-ಇನ್ಗಳ ಆಧಾರದ ಮೇಲೆ ಈಶ್ವರನ್ ಅವರ ಸಾಮರ್ಥ್ಯವನ್ನು ಯಾಕೆ ಅಳೆಯಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
‘ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡುವಾಗ ವಿರಾಟ್ ಕೊಹ್ಲಿ ಅವರ ಜೊತೆ ಕೂತಿರುತ್ತಾರೆ. ಚೇತನ್ ಮತ್ತು ಅವರು ತಂಡ ಈಶ್ವರನ್ ಅವರನ್ನು ಆಯ್ಕೆ ಮಾಡಿದಾಗ ಕೊಹ್ಲಿ ಯಾಕೆ ವಿರೋಧಿಸಲಿಲ್ಲ. ಬಾಯಿ ಮುಚ್ಚಿಕೊಂಡು ಕೂತಿರು ಅಂತ ಅವರಿಗೆ ಯಾರಾದರೂ ಹೇಳಿದ್ದರೇ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಅವರು ಈಶ್ವರನ್ರನ್ನು ಆಯ್ಕೆ ಮಾಡಿರುವುದರಿಂದ ನ್ಯಾಯವಾಗಿ ಅವರೇ ಆಡುವ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸಬೇಕು. ಆದರೆ ಅವರು ಆಡುವ ಸಂದರ್ಭ ಏರ್ಪಡುವುದಾದರೂ ಯಾವಾಗ? ರೋಹಿತ್ ಶರ್ಮ, ಮಾಯಾಂಕ್ ಅಗರ್ವಾಲ್ ಮತ್ತು ರಾಹುಲ್ ಅವರು ವಿಫಲರಾದರೆ ಮಾತ್ರ ಈಶ್ವರನ್ ಪಿಕ್ಚರ್ನಲ್ಲಿ ಬರುತ್ತಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಇಂಥ ನೆಗೆಟಿವ್ ಯೋಚನೆಗಳು ಯಾಕೆ ಹುಟ್ಟಿಕೊಳ್ಳುತ್ತಿವೆ?’ ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ಆಂಗ್ಲರನ್ನು ಅವರ ನೆಲದಲ್ಲೇ ಮಣಿಸಲಿದೆ ಟೀಂ ಇಂಡಿಯಾ; ಭವಿಷ್ಯ ನುಡಿದ ರಾಹುಲ್ ದ್ರಾವಿಡ್