ಖೇಲ್ ರತ್ನ ಪ್ರಶಸ್ತಿಗೆ ಅಶ್ವಿನ್, ಮಿಥಾಲಿ ರಾಜ್ ನಾಮನಿರ್ದೇಶನ! ಅರ್ಜುನ ಪ್ರಶಸ್ತಿಗೆ ಕನ್ನಡಿಗನೂ ಸೇರಿ ಮೂವರು ಕ್ರಿಕೆಟಿಗರ ಆಯ್ಕೆ

|

Updated on: Jun 30, 2021 | 2:40 PM

ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಪುರುಷರ ತಂಡದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಖೇಲ್ ರತ್ನ ಪ್ರಶಸ್ತಿಗೆ ಅಶ್ವಿನ್, ಮಿಥಾಲಿ ರಾಜ್ ನಾಮನಿರ್ದೇಶನ! ಅರ್ಜುನ ಪ್ರಶಸ್ತಿಗೆ ಕನ್ನಡಿಗನೂ ಸೇರಿ ಮೂವರು ಕ್ರಿಕೆಟಿಗರ ಆಯ್ಕೆ
ಈ 32 ವಿಕೆಟ್‌ಗಳಲ್ಲಿ ಅಶ್ವಿನ್‌ 7 ವಿಕೆಟ್‌ಗಳನ್ನು ಪಡೆದಿದ್ದರು. ಎರಡನೇ ಇನಿಂಗ್ಸ್ ನಲ್ಲಿ 15 ಓವರ್ ಬೌಲಿಂಗ್ ಮಾಡಿದ್ದ ಅಶ್ವಿನ್ 27 ರನ್ ನೀಡಿ 6 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ್ದರು. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದಿದ್ದರು. ಅಶ್ವಿನ್ ಅವರಂತೆ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಕೂಡ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಉರುಳಿಸಿದ್ದರು. ಹೀಗಾಗಿಯೇ ಓವಲ್ ಮೈದಾನ ಸ್ಪಿನ್ನರ್​ಗಳ ಸ್ವರ್ಗ ಎನ್ನಲಾಗುತ್ತದೆ.
Follow us on

ದೇಶದಲ್ಲಿ ಕ್ರೀಡಾ ಪ್ರಶಸ್ತಿಗಳ ಪುರಸ್ಕಾರದ ಸಮಯ ಇನ್ನೇನೂ ಹತ್ತಿರವಾಗುತ್ತಿದೆ. ಆಗಸ್ಟ್ 29 ರಂದು ದೇಶದ ಅತ್ಯುತ್ತಮ ಆಟಗಾರರು ಮತ್ತು ತರಬೇತುದಾರರನ್ನು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷದ ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಈ ಸಂಬಂಧ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಪುರುಷರ ತಂಡದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಇಬ್ಬರಲ್ಲದೆ ಹಿರಿಯ ಓಪನರ್ ಶಿಖರ್ ಧವನ್, ಕೆ.ಎಲ್.ರಾಹುಲ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕ್ರಿಕೆಟ್‌ನಲ್ಲಿ ತನ್ನ 22 ವರ್ಷಗಳನ್ನು ಪೂರೈಸಿದರು
ಸುದ್ದಿ ಸಂಸ್ಥೆ ಎಎನ್‌ಐ ವರದಿಯ ಪ್ರಕಾರ, ಈ ಐದು ಆಟಗಾರರ ಹೆಸರನ್ನು ಹೆಚ್ಚಿನ ಚರ್ಚೆಯ ನಂತರ ಕಳುಹಿಸಲು ಮಂಡಳಿ ನಿರ್ಧರಿಸಿದೆ. ಮಿಥಾಲಿ ರಾಜ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ 22 ವರ್ಷಗಳನ್ನು ಪೂರೈಸಿದರು. ಮಿಥಾಲಿ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಮಿಥಾಲಿ ಪ್ರಸ್ತುತ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿಯಾಗಿದ್ದಾರೆ. ಮತ್ತೊಂದೆಡೆ, ಅಶ್ವಿನ್ ಸತತವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಇದೇ ವರ್ಷದಲ್ಲಿ ಟೆಸ್ಟ್‌ನಲ್ಲಿ 400 ವಿಕೆಟ್‌ಗಳನ್ನು ಪೂರೈಸಿದರು. ಅಲ್ಲದೆ, 2019 ಮತ್ತು 2021 ರ ನಡುವೆ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 71 ವಿಕೆಟ್‌ಗಳನ್ನು ಗಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗು ಪಾತ್ರರಾಗಿದ್ದಾರೆ.

ಮತ್ತೊಮ್ಮೆ ಶಿಖರ್ ಧವನ್ ಅರ್ಜುನ ಪ್ರಶಸ್ತಿಗೆ ಆಯ್ಕೆ
ವಿವರವಾದ ಚರ್ಚೆಯ ನಂತರ ಅತ್ಯುನ್ನತ ಕ್ರೀಡಾ ಗೌರವಕ್ಕಾಗಿ ಮಹಿಳಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಪುರುಷರ ತಂಡದ ಆಲ್‌ರೌಂಡರ್ ಅಶ್ವಿನ್ ಅವರ ಹೆಸರನ್ನು ಮಂಡಳಿ ಶಿಫಾರಸು ಮಾಡಿದೆ ಎಂದು ಬಿಸಿಸಿಐಗೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಮತ್ತೊಮ್ಮೆ ಶಿಖರ್ ಧವನ್ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ಬುಮ್ರಾ ಮತ್ತು ರಾಹುಲ್ ಅವರನ್ನು ಕೂಡ ಹೆಸರಿಸಲಾಗಿದೆ.

ಈ ಆಟಗಾರರ ನಾಮನಿರ್ದೇಶನ
ಕ್ರಿಕೆಟ್‌ನ ಹೊರತಾಗಿ ಹಾಕಿ ಭಾರತ, ಖೇಲ್ ರತ್ನಾಗೆ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಮತ್ತು ಅರ್ಜುನ ಪ್ರಶಸ್ತಿಗೆ ಹರ್ಮನ್‌ಪ್ರೀತ್ ಸಿಂಗ್, ವಂದನಾ ಕಟಾರಿಯಾ ಮತ್ತು ನವಜೋತ್ ಕೌರ್ ಅವರನ್ನು ನಾಮಕರಣ ಮಾಡಿದೆ. ಅದೇ ಸಮಯದಲ್ಲಿ, ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಬದಲಿಗೆ, ಒಡಿಶಾ ಸರ್ಕಾರವು ಖೇಲ್ ರತ್ನಕ್ಕೆ ಸ್ಪ್ರಿಂಟರ್ ದ್ಯೂತಿ ಚಂದ್ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ.

ಇದನ್ನೂ ಓದಿ:ನನ್ನಂತೆಯೇ ಅಶ್ವಿನ್ ಕೂಡ ಬ್ಯಾನ್ ಆಗಬೇಕಿತ್ತು! ಬಿಸಿಸಿಐನಲ್ಲಿರುವ ಹಣ ಅವರನ್ನು ಉಳಿಸಿತು; ಸಯೀದ್ ಅಜ್ಮಲ್