ನನ್ನಂತೆಯೇ ಅಶ್ವಿನ್ ಕೂಡ ಬ್ಯಾನ್ ಆಗಬೇಕಿತ್ತು! ಬಿಸಿಸಿಐನಲ್ಲಿರುವ ಹಣ ಅವರನ್ನು ಉಳಿಸಿತು; ಸಯೀದ್ ಅಜ್ಮಲ್
ನಾನು ಎಂಟು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೆ. ಎಲ್ಲಾ ನಿಯಮಗಳು ನನಗೆ ಮಾತ್ರವೇ ಇದ್ದವು, ಅಷ್ಟೆ. ಅದೇ ಸಂದರ್ಭದಲ್ಲಿ ಆರ್ ಅಶ್ವಿನ್ ಕ್ರಿಕೆಟ್‌ನಿಂದ 6 ತಿಂಗಳುಗಳ ಕಾಲ ದೂರವಿದ್ದರು. ಅದು ಯಾವ ಕಾರಣಕ್ಕಾಗಿ?
ರವಿಚಂದ್ರನ್ ಅಶ್ವಿನ್ ಅವರನ್ನು ಈ ಕಾಲದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂದು ಎಣಿಸಲಾಗಿದೆ. ಅವರು ತಮ್ಮ ಕಠಿಣ ಪರಿಶ್ರಮದಿಂದ ಈ ಹೆಸರನ್ನು ಗಳಿಸಿದ್ದಾರೆ ಮತ್ತು ಅವರ ಅಂಕಿ ಅಂಶಗಳು ಅವರು ಎಂತಹ ಶ್ರೇಷ್ಠ ಸ್ಪಿನ್ನರ್ ಎಂಬುದಕ್ಕೆ ಸಾಕ್ಷಿಯಾಗಿದೆ. ಟೆಸ್ಟ್‌ನಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಅಶ್ವಿನ್ ಅವರ ಕೊಡುಗೆ ಕೂಡ ಬಹಳ ಮುಖ್ಯವಾಗಿದೆ. ಭಾರತದ ಹೊರತಾಗಿ ಅವರು ವಿದೇಶಿ ನೆಲದಲ್ಲೂ ಪ್ರಬಲ ಪ್ರದರ್ಶನ ನೀಡಿದ್ದಾರೆ. ಕ್ರಿಕೆಟ್ ಪಂಡಿತರು ಅವರನ್ನು ಹೊಗಳಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಅಶ್ವಿನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನನಗೆ ಎಲ್ಲಾ ನಿಯಮಗಳು ನೀವು ಎಲ್ಲಾ ನೀತಿ ನಿಯಮಗಳನ್ನು ಯಾರಲ್ಲಿಯೂ ಕೇಳದೆ ಬದಲಾವಣೆ ಮಾಡಿದಿರಿ. ನಾನು ಎಂಟು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೆ. ಎಲ್ಲಾ ನಿಯಮಗಳು ನನಗೆ ಮಾತ್ರವೇ ಇದ್ದವು, ಅಷ್ಟೆ. ಅದೇ ಸಂದರ್ಭದಲ್ಲಿ ಆರ್ ಅಶ್ವಿನ್ ಕ್ರಿಕೆಟ್‌ನಿಂದ 6 ತಿಂಗಳುಗಳ ಕಾಲ ದೂರವಿದ್ದರು. ಅದು ಯಾವ ಕಾರಣಕ್ಕಾಗಿ? ಆತನ ಬೌಲಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಿ ನಿಷೇಧಗಳನ್ನು ಮಾಡಿ ನಿಷೇಧದಿಂದ ತಪ್ಪಿಸಿದಿರಿ. ಆದರೆ ಅವರು ಪಾಕಿಸ್ತಾನ ಬೌಲರ್ ನಿಷೇಧಗೊಂಡರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಕೇವಲ ಹಣದ ಬಗ್ಗೆ ಮಾತ್ರವೇ ತಲೆಕೆಡಿಸಿಕೊಳ್ಳುತ್ತಾರೆ. ಎಂದು ಅಜ್ಮಲ್ ಕ್ರಿಕ್ ವಿಕ್‌ಗೆ ನೀಡಿದ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಡಿಆರ್ಎಸ್ ಸಚಿನ್ ಅವರನ್ನು ಉಳಿಸಿತು 2011 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಆಡಿದ ಪಂದ್ಯದ ಬಗ್ಗೆಯೂ ಅಜ್ಮಲ್ ಮಾತನಾಡಿದ್ದು, ಈ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಸಚಿನ್ ಎಲ್‌ಬಿಡಬ್ಲ್ಯೂ ಔಟ್ ಆಗಿದ್ದರು ಆದರೆ ಡಿಆರ್‌ಎಸ್ ಅವರನ್ನು ಉಳಿಸಿತು ಎಂದು ಹೇಳಿದರು. ಆನ್‌ಫೀಲ್ಡ್‌ನಲ್ಲಿ ಸಚಿನ್ ಔಟ್ ಎಂದು ತೀರ್ಪು ನೀಡಿದ್ದ ಅಂಪೈರ್, ಅದು ಸರಿಯಾದ ನಿರ್ಧಾರ ಎಂದು ಹೇಳಿಕೆ ಕೊಡಲು ಸಿದ್ದರಿದ್ದರು. ಏಕೆಂದರೆ ಆ ತೀರ್ಪು ಅಷ್ಟು ಸ್ಪಷ್ಟವಾಗಿತ್ತು. ಆದರೆ, ಡಿಆರ್‌ಎಸ್‌ನಲ್ಲಿ ಏನನ್ನು ಬೇಕಾದರೂ ಬದಲಾಯಿಸಬಹುದು. ಲೈವ್‌ನಲ್ಲಿ ಈಗಲೂ ಕೂಡ ಕೇವಲ ನನಗಷ್ಟೇ ಅಲ್ಲ ಯಾವುದೇ ಅಂಪೈರ್‌ಗೆ ಅದು ಔಟ್ ಎಂದು ಗೊತ್ತಾಗುತ್ತದೆ. ಆದರೆ, ಡಿಆರ್‌ಎಸ್ ಮಾತ್ರ ನಾಟ್‌ಔಟ್ ಎಂದಿತ್ತು. ಈ ಬಗ್ಗೆ ಸಾವಿರಾರು ಮಂದಿ ನನ್ನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಅವರಿಗೆ ಹೇಗೆ ಉತ್ತರಿಸುವುದು ನನಗೆ ತಿಳಿದಿಲ್ಲ ಎಂದಿದ್ದಾರೆ.