ಉತ್ತಮ ಪಿಚ್​ಗಳ ಮೇಲೆ ಚೆನ್ನಾಗಿ ಆಡಿದಾಗಲೇ ಇಂಗ್ಲೆಂಡ್​ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯವನ್ನು ಮಣಿಸುವುದು ಸಾಧ್ಯ: ಮೈಕೆಲ ವಾನ್

TV9kannada Web Team

TV9kannada Web Team | Edited By: Arun Belly

Updated on: Jun 14, 2021 | 5:56 PM

ಟೆಲಿಗ್ರಾಫ್​ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾನ್, ನ್ಯೂಜಿಲೆಂಡ್​ ವಿರುದ್ಧ ಆಡಿದ ಎರಡೂ ಟೆಸ್ಟ್​ಗಳಲ್ಲಿ ಒಬ್ಬ ಪರಿಣಿತ ಸ್ಪಿನ್ನರ್​ನನ್ನು ಆಡಿಸದೆ ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್​ ಬಹಳ ದೊಡ್ಡ ಪ್ರಮಾದವೆಸಗಿತು ಎಂದು ಹೇಳಿದ್ದಾರೆ.

ಉತ್ತಮ ಪಿಚ್​ಗಳ ಮೇಲೆ ಚೆನ್ನಾಗಿ ಆಡಿದಾಗಲೇ ಇಂಗ್ಲೆಂಡ್​ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯವನ್ನು ಮಣಿಸುವುದು ಸಾಧ್ಯ: ಮೈಕೆಲ ವಾನ್
ಮೈಕೆಲ್ ವಾನ್

ನ್ಯೂಜಿಲೆಂಡ್​ ವಿರುದ್ಧ ಎಜ್​ಬ್ಯಾಸ್ಟನ್​ನಲ್ಲಿ ಎರಡನೇ ಟೆಸ್ಟ್ ಸೋತು ಎರಡು ಪಂದ್ಯಗಳ ಸರಣಿಯನ್ನು 0-1 ಅಂತರದಿಂದ ಒಪ್ಪಿಸಿಕೊಟ್ಟ ಜೋ ರೂಟ್ ಅವರ ಇಂಗ್ಲೆಂಡ್​ ತಂಡ ತನ್ನ ದೇಶದಲ್ಲಿ ಮಾಜಿ ಆಟಗಾರರಿಂದ ಮತ್ತು ಅಭಿಮಾನಗಳಿಂದ ತೀವ್ರ ಸ್ವರೂಪದ ಟೀಕೆಯನ್ನು ಎದುರಿಸುತ್ತಿದೆ. ಎರಡನೆ ಟೆಸ್ಟ್​ನ ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಿವೀಸ್ ವೇಗದ ದಾಳಿಯೆದರು ತತ್ತರಿಸಿ ಕೇವಲ 122 ರನ್​ಗಳ ಮೊತ್ತಕ್ಕೆ ಆಲೌಟಾದ ಇಂಗ್ಲೆಂಡ್​ ವರ್ಷಾಂತ್ಯದಲ್ಲಿ ನಡೆಯಲಿರುವ ಌಶಸ್​ ಸರಣಿಯಲ್ಲಿ ಮತ್ತೂ ಭಯಾನಕ ವೇಗದ ದಾಳಿಯನ್ನು ಹೊಂದಿರುವ ಆಸ್ಸೀಗಳ ವಿರುದ್ಧ ಮಣ್ಣುಮುಕ್ಕಲಿದೆ ಎಂದು ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಅವರ ಗೈರು ಹಾಜರಿಯಲ್ಲೂ ಅತಿಥೇಯನ್ನು ಮಣಿಸಿದ ನ್ಯೂಜಿಲೆಂಡ್​ 22 ವರ್ಷಗಳ ನಂತರ ಆಂಗ್ಲರ ನಾಡಿನಲ್ಲಿ ಸರಣಿ ಗೆದ್ದಿದೆ.

ಟೆಲಿಗ್ರಾಫ್​ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾನ್, ನ್ಯೂಜಿಲೆಂಡ್​ ವಿರುದ್ಧ ಆಡಿದ ಎರಡೂ ಟೆಸ್ಟ್​ಗಳಲ್ಲಿ ಒಬ್ಬ ಪರಿಣಿತ ಸ್ಪಿನ್ನರ್​ನನ್ನು ಆಡಿಸದೆ ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್​ ಬಹಳ ದೊಡ್ಡ ಪ್ರಮಾದವೆಸಗಿತು ಎಂದು ಹೇಳಿದ್ದಾರೆ.

ತಾಜಾ ಸುದ್ದಿ

‘ಲಾರ್ಡ್ಸ್​​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಮಳೆ ಬಂದಿದ್ದರಿಂದ ಇಂಗ್ಲೆಂಡ್​ ಬಚಾವಾಯಿತು. ಆದರೆ ಒಂದೇ ತಪ್ಪನ್ನು ಕೇವಲ ಎರಡು ವಾರಗಳ ಅವಧಿಯಲ್ಲಿ ಎರಡನೇ ಸಲ ಮಾಡುವುದು ತಪ್ಪಲ್ಲ, ಅಪಾರಾಧ ಅನಿಸಿಕೊಳ್ಳುತ್ತದೆ. ಲಾರ್ಡ್ಸ್ ಪಿಚ್​ ತಿರುವು ತೆಗೆದುಕೊಳ್ಳುತ್ತಿತ್ತು ನಿಜ, ಆದರೆ ಜಾಸ್ತಿ ತಾಪಮಾನ ಮತ್ತು ಒಣಹವೆಯಿಂದ ಕೂಡಿದ್ದ ಎಜ್​ಬ್ಯಾಸ್ಟನ್​ನ ಮೈದಾನದ ಪಿಚ್​ಮೇಲೆ ವೈವಿಧ್ಯಮಯ ಬೌಲಿಂಗ್ ಆಕ್ರಮಣದ ಅವಶ್ಯಕತೆಯಿತ್ತು. ತಂಡದಲ್ಲಿ ನಾಲ್ವರು ವೇಗದ ಬೌಲರ್​ಗಳಿದ್ದರೆ ಅವರನ್ನೇ ದಾಳಿಗಿಳಿಸದೆ ಬೇರೆ ವಿಧಿಯಿರುವುದಿಲ್ಲ. ಆದರೆ ಮೂರು ಸೀಮರ್​ಗಳ ಜೊತೆಗೆ ಸ್ಪಿನ್ನರ್ ರೂಪದಲ್ಲಿ ಜ್ಯಾಕ್​ ಲೀಚ್​ ಅವರನ್ನು ಆಡಿಸಿದ್ದರೆ ಜೋ ರೂಟ್​ ಅಗಾಗ ದಾಳಿಗಿಳಿದು ವೇಗದ ಬೌಲರ್​ಗಳು ದಣಿಯದಂತೆ ನೋಡಿಕೊಳ್ಳುತ್ತಿದ್ದರು. ಭಾರತದ ವಿರುದ್ಧ ನಡೆಯುವ ಸರಣಿಯಲ್ಲಿ ಅತಿಥೇಯರು ಇದೇ ಪ್ರಮಾದ ಪ್ರಮಾದವನ್ನು ಪುನರಾವರ್ತಿಸಲಾರರು ಎಂದು ನಿರೀಕ್ಷಿಸುತ್ತೇನೆ,’ ಎಂದು ವಾನ್ ಹೇಳಿದ್ದಾರೆ.

ಉತ್ತಮವಾದ ಪಿಚ್​ಗಳ ಮೇಲೆ ಹೇಗೆ ಆಡಿ ಗೆಲ್ಲಬೇಕೆನ್ನುವ ಅಂಶವನ್ನು ಕಂಡುಕೊಂಡ ನಂತರವೇ ಇಂಗ್ಲೆಂಡ್​ ಆಸ್ಟ್ರೇಲಿಯಾ ವಿಸುದ್ಧ ನಡೆಯುವ ಸರಣಿಯನ್ನು ಗೆಲ್ಲುವ ಬಗ್ಗೆ ಯೋಚಿಸಲಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.

‘ಈ ಎರಡು ಪಿಚ್​ಗಳ ಮೇಲೆ ಇಂಗ್ಲೆಂಡ್ ಹೆಣಗಾಡಿದ್ದು ನಿಜವಾದರೂ, ಉತ್ತಮ ಪಿಚ್​ಗಳ ಮೇಲೆ ಅಡುವುದನ್ನು ಅದು ಮುಂದುವರಿಸಬೇಕು. ಟೀಮಿನ ಹೆಡ್​ ಕೋಚ್ ಕ್ರಿಸ್​ ಸಿಲ್ವರ್​ವುಡ್​ ಇದನ್ನೇ ಬಯಸಿದ್ದಾರೆ. ಭಾರತದ ವಿರುದ್ಧ ಹಸಿರು ಹಾಸಿನ ಪಿಚ್​ಗಳ ಮೇಲೆ ಆಡಿ ಒಂದೆರಡು ಟೆಸ್ಟ್​ಗಳನ್ನು ಗೆದ್ದರೆ ಇಂಗ್ಲೆಂಡ್​ಗೆ ಏನೂ ಪ್ರಯೋಜನವಾಗದು. ಅವರು ಌಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಬಗ್ಗೆ ಅಲೋಚಿಸಬೇಕಿದೆ. ಉತ್ತಮ ಪಿಚ್​ಗಳ ಮೇಲೆ ಚೆನ್ನಾಗಿ ಆಡಿ ಗೆಲ್ಲುವ ಅಂಶವನ್ನು ಅವರು ಕಂಡುಕೊಳ್ಳಬೇಕು,’ ಎಂದು ವಾನ್ ಹೇಳಿದ್ದಾರೆ.

‘ಕಳೆದ ಕೆಲವು ವಾರಗಳಲ್ಲಿ ಇಂಗ್ಲೆಂಡ್​ ಆಡಿರೋದು ಟೆಸ್ಟ್​ ಕ್ರಿಕೆಟ್​ ಅತ್ಯಂತ ಸೂಕ್ತವಾದ ಪಿಚ್​ಗಳ ಮೇಲೆ. ಉತ್ತಮ ಆಟ ಪ್ರದರ್ಶಿಸಿದ ಟೀಮ್ ಟೆಸ್ಟ್ ಮತ್ತು ಸರಣಿಗಳನ್ನು ಗೆದ್ದುಕೊಂಡಿತು. ತಾನು ಉತ್ತಮವಾಗಿ ಆಡಿಲ್ಲ ಎಂಬ ಅಂಶವನ್ನು ಇಂಗ್ಲೆಂಡ್​ ಮನಗಾಣಬೇಕಿದೆ. ಈಗಿನ ಇಂಗ್ಲಿಷ್ ತಂಡ ಆಸ್ಟ್ರೇಲಿಯವನ್ನು ಅದರೆ ನೆಲದಲ್ಲೇ ಮಣಿಸುವ ಯೋಚನೆ ನಿಜವಾಗಬೇಕಾದರೆ ಅದರ ಒಟ್ಟಾರೆ ಪ್ರದರ್ಶನದ ಮಟ್ಟ ಬಹಳಷ್ಟು ಸುಧಾರಿಸಬೇಕಿದೆ,’ ಎಂದು ವಾನ್​ ಹೇಳಿದ್ದಾರೆ.

ಇದನ್ನೂ ಓದಿ: India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada