ಭಾರತ-ಆಸ್ಟ್ರೇಲಿಯ 2020-21 ಸರಣಿ | ಭಾರತದ ಬೆಂಚ್ ಸ್ಟ್ರೆಂಗ್ತ್ ಆಸ್ಟ್ರೇಲಿಯ ತಂಡವನ್ನು ಬೆಚ್ಚಿ ಬೀಳಿಸಿತು: ಶ್ರೀಧರನ್ ಶ್ರೀರಾಮ್

ಕೊವಿಡ್-19 ಸೃಷ್ಟಿಸಿದ ಭಯಾನಕ ವಾತಾವರಣದ ಹಿನ್ನೆಲೆಯಲ್ಲಿ ಭಾರತ ಹಲವಾರು ತಿಂಗಳುಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿತ್ತು. ಆದರೆ ಪ್ರವಾಸ ಆರಂಭವಾದ ನಂತರ ಕೆಲ ಸೀನಿಯರ್ ಅಟಗಾರರು ಗಾಯಗೊಂಡರು ಮತ್ತು ಈ ಪರಂಪರೆ ಸರಣಿಯುದ್ದಕ್ಕೂ ಜಾರಿಯಲ್ಲಿತ್ತು. ಆಗಲೇ ಯುವ ಆಟಗರರು, ಬಿಗ್ ಸ್ಟೇಜ್​ಗೆ ನಾವೂ ತಯಾರಿದ್ದೇವೆ ಅನ್ನೋದನ್ನು ಸಾಬೀತು ಮಾಡಿದರು.

ಭಾರತ-ಆಸ್ಟ್ರೇಲಿಯ 2020-21 ಸರಣಿ | ಭಾರತದ ಬೆಂಚ್ ಸ್ಟ್ರೆಂಗ್ತ್ ಆಸ್ಟ್ರೇಲಿಯ ತಂಡವನ್ನು ಬೆಚ್ಚಿ ಬೀಳಿಸಿತು: ಶ್ರೀಧರನ್ ಶ್ರೀರಾಮ್
ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 29, 2021 | 9:48 PM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಸೋತ ಕಹಿಯನ್ನು ಮರೆಯಲು ಅತ್ಯುತ್ತಮ ವಿಧಾನವೆಂದರೆ ಟೀಮ್ ಇಂಡಿಯಾ ಹಿಂದೆ ಕಂಡ ಅಮೋಘ ಗೆಲುವುಗಳನ್ನು ನೆನಪು ಮಾಡಿಕೊಳ್ಳುವುದು. ನಾವು ಬಹಳ ಹಿಂದೆ ಹೋಗುವುದು ಬೇಡ, ಕಳೆದ ವರ್ಷದ ಕೊನೆ ಭಾಗದಲ್ಲಿ ಭಾರತ ಅನನುಭವಿ ಮತ್ತು ಯುವ ತಂಡ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಮಣಿಸಿ ಸರಣಿ ಗೆದ್ದ ಸಂದರ್ಭವನ್ನು ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ್ಯವೇ? ಅದೂ ಅಡಿಲೇಡ್​ ಟೆಸ್ಟ್​ನಲ್ಲಿ ಕೇವಲ 36 ರನ್​ಗಳಿಗೆ ಅಲೌಟಾಗಿ ಹೀನಾಯಕರ ಸೋಲು ಅನುಭವಿಸಿ ನಂತರ ಭಾರತ ಆ ಸರಣಿಯಲ್ಲಿ ಹಾಗೆ ಪುಟಿದೇಳಬಹುದೆಂದು ಭಾರತದ ಕ್ರಿಕೆಟ್​ ಪ್ರೇಮಿಗಳ್ಯಾರೂ ಅಂದುಕೊಂಡಿರಲಿಲ್ಲ. ವಿರಾಟ್​ ಕೊಹ್ಲಿ ಮೊದಲ ಟೆಸ್ಟ್ ನಂತರ ಸ್ವದೇಶಕ್ಕೆ ವಾಪಸ್ಸಾದ ಮೇಲೆ ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯ 2-1 ಅಂತರದಿಂದ ಸರಣಿ ಗೆದ್ದು ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಆ ಪ್ರವಾಸ ಭಾರತೀಯರಿಗೆ ನಿಜಕ್ಕೂ ಪ್ರಯಾಸಕರವಾಗಿತ್ತು. ಕೊವಿಡ್-19 ಸೃಷ್ಟಿಸಿದ ಭಯಾನಕ ವಾತಾವರಣದ ಹಿನ್ನೆಲೆಯಲ್ಲಿ ಭಾರತ ಹಲವಾರು ತಿಂಗಳುಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿತ್ತು. ಆದರೆ ಪ್ರವಾಸ ಆರಂಭವಾದ ನಂತರ ಕೆಲ ಸೀನಿಯರ್ ಅಟಗಾರರು ಗಾಯಗೊಂಡರು ಮತ್ತು ಈ ಪರಂಪರೆ ಸರಣಿಯುದ್ದಕ್ಕೂ ಜಾರಿಯಲ್ಲಿತ್ತು. ಆಗಲೇ ಯುವ ಆಟಗರರು, ಬಿಗ್ ಸ್ಟೇಜ್​ಗೆ ನಾವೂ ತಯಾರಿದ್ದೇವೆ ಅನ್ನೋದನ್ನು ಸಾಬೀತು ಮಾಡಿದರು. ತಮ್ಮ ಹಿತ್ತಲಲ್ಲೇ ಆಡುತ್ತಿದ್ದ ಆಸ್ಸೀಗಳು ಭಾರತದ ಬೆಂಚ್ ಬಲ ಕಂಡು ಹೌಹಾರಿದರು, ಗಾಬರಿಗೊಳಗಾದರು.

ಭಾರತದ ಪರ 8 ಒಡಿಐ ಪಂದ್ಯಗಳನ್ನಾಡಿ, ಆಸ್ಟ್ರೇಲಿಯ ‘ಎ’ ಟೀಮಿಗೆ ಕನ್ಸಲ್ಟಂಟ್ ಆಗಿ ಕೆಲಸ ಮಾಡಿದ ನಂತರ ಈಗ ಸೀನಿಯರ್ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ಮಾಡುತ್ತಿರುವ ಶ್ರೀಧರನ್ ಶ್ರೀರಾಮ್ ಅವರು ಟಿಮ್ ಪೈನ್ ನೇತೃತ್ವದ ಆಸ್ಸೀ ಟೀಮಿನ ಬ್ಯಾಟ್ಸ್​ಮನ್​ಗಳನ್ನು ಭಾರತದ ಯುವ ಬೌಲರ್​ಗಳಾದ ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಮತ್ತು ವಾಷಿಂಗ್ಟನ್ ಸುಂದರ್ ಹೇಗೆ ಮಣಿಸಿದರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

Srdhraran Sriram

ಶ್ರೀಧರನ್ ಶ್ರೀರಾಮ್

ಕ್ರಿಕೆಟ್​ನೆಕ್ಸ್ಟ್ ಕ್ರೀಡಾ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಶ್ರೀರಾಮ್ ಅವರು, ಆಸ್ಸೀ ಆಟಗಾರರಿಗೆ ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಸಾಮರ್ಥ್ಯಗಳ ಬಗ್ಗೆ ಗೊತ್ತಿತ್ತಾದರೂ ಹೊಸ ಮುಖಗಳ ಸಾಮರ್ಥ್ಯ ಅವರಲ್ಲಿ ದಿಗ್ಭ್ರಮೆ ಮೂಡಿಸಿತು ಎಂದು ಹೇಳಿದ್ದಾರೆ.

‘ಶುಭ್ಮನ್ ಗಿಲ್ ಮೆಲ್ಬರ್ನ್ ಟೆಸ್ಟ್​ನಿಂದ ಆಡಲಾರಂಭಿಸಿದರು. ಅವರ ಸಾಮರ್ಥ್ಯದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿತ್ತು. ರಿಷಭ್ ಪಂತ್ ವಿಷಯದಲ್ಲೂ ಇದೇ ಮಾತು ಅನ್ವಯಿಸುತ್ತದೆ, ಇದಕ್ಕೆ ಮೊದಲು (2018-19) ಸಹ ಆಸ್ಟ್ರೇಲಿಯಾದ ವಿರುದ್ಧ ಆಡಿದ ಪಂತ್ ಅವರು ಸಿಡ್ನಿ ಟೆಸ್ಟ್​ನಲ್ಲಿ ಅಜೇಯ 159 ರನ್ ಬಾರಿಸಿದ್ದರು. ಹಾಗಾಗಿ, ಪಂತ್ ಎಂಥ ಪ್ರತಿಭಾವಂತ ಅಂತ ನಮಗೆ ಚೆನ್ನಾಗಿ ಗೊತ್ತಿತ್ತು. ಆದರೆ ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಮತ್ತು ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಅಪ್ರತಿಮ ಪ್ರದರ್ಶನಗಳನ್ನು ನೀಡಿದರು,’ ಎಂದು ಸಂದರ್ಶನದಲ್ಲಿ ಶ್ರೀರಾಮ್ ಹೇಳಿದ್ದಾರೆ.

ಬ್ರಿಸ್ಬೇನ್ ಟೆಸ್ಟ್​ನಲ್ಲೂ ಭಾರತ 186 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ನಾಜೂಕು ಸ್ಥಿತಿಯಲ್ಲಿತ್ತು. ಆದರೆ 7 ನೇ ವಿಕೆಟ್​ಗೆ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ 123 ರನ್ ಸೇರಿಸಿ ಆಸ್ಟ್ರೇಲಿಯಾ ಮೊತ್ತದ ಹತ್ತಿರಕ್ಕೆ ಭಾರತದ ಸ್ಕೋರ್ ತಂದರು (ಆಸ್ಟ್ರೇಲಿಯಾ 369, ಭಾರತ 336). ನಮಗೆ 80 ಅಥವಾ 100 ರನ್​ಗಳ ಲೀಡ್​ ಸಿಕ್ಕಿದ್ದರೆ, ಭಾರತವನ್ನು ಒತ್ತಡಕ್ಕೆ ಸಿಲುಕಿಸಬಹುದಿತ್ತು. ಭಾರತ ಕೊನೆಯ ಇನ್ನಿಂಗ್ಸ್​ನಲ್ಲಿ 328 ರನ್​ಗಳ ಟಾರ್ಗೆಟ್​ ಬೆನ್ನಟ್ಟಿ ಗೆಲ್ಲಲು ಸಾಧ್ಯವಾಗಿದ್ದರಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಸುಂದರ್ ಮತ್ತು ಠಾಕೂರ್ ಅವರ ನಡುವಿನ ಜೊತೆಗಾರಿಕೆ ಬಹಳ ದೊಡ್ಡ ಪಾತ್ರ ನಿರ್ವಹಿಸಿತು,’ ಎಂದು ಶ್ರೀರಾಮ್ ಹೇಳಿದರು.

‘ಹಾಗೆಯೇ, ಸಿರಾಜ್ ಮೆಲ್ಬರ್ನ್​ ಟೆಸ್ಟ್​ನಲ್ಲಿ ಬೆರಗು ಮೂಡಿಸುವ ರೀತಿಯಲ್ಲಿ ಬೌಲ್​ ಮಾಡಿದರು. ಬ್ಯಾಟಿಂಗ್​ಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಅವರು ತೋರಿದ ನಿಖರತೆ, ನಿಯಂತ್ರಣ ಮತ್ತು ಶಿಸ್ತು ಅನುಕರಣೀಯವಾಗಿತ್ತು,. ತಮ್ಮ ಕರಾರುವಾಕ್ ದಾಳಿಯಿಂದ ಅವರು ಒಂದು ತುದಿಯಲ್ಲಿ ನಮ್ಮ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಿದರು. ತನ್ನ ಮೊದಲ ಟೆಸ್ಟ್​ ಆಡುತ್ತಿದ ಬೌಲರ್​ನೊಬ್ಬ ಇಂಥ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಬಹುದೆಂದು ನಾವು ಅಂದುಕೊಂಡಿರಲಿಲ್ಲ,’ ಎಂದು ಶ್ರೀರಾಮ್ ಹೇಳಿದ್ದಾರೆ.

ಇದನ್ನೂ ಓದಿ: Indian cricketers house: ಇದು ಯಾರ ಮನೆ ಹೇಳ್ತೀರಾ? ಸುಳಿವು, ಕ್ರಿಕೆಟಿಗರ ಐಷಾರಾಮಿ ಮನೆ ಚಿತ್ರಗಳು ಇಲ್ಲಿವೆ ನೋಡಿ ಹೇಳಿ..

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ