ಕೊರೊನಾ ಕಾಟ, ಅರ್ಧಕ್ಕೆ ನಿಂತ ಐಪಿಎಲ್.. ಆದರೂ ಬಿಸಿಸಿಐ ಆದಾಯಕ್ಕಿಲ್ಲ ಭಂಗ; ಕ್ರಿಕೆಟ್ ಮಂಡಳಿಗಳ ವಾರ್ಷಿಕ ಆದಾಯ ಎಷ್ಟು?

ಈ ವಾರ್ಷಿಕ ಆದಾಯದ ಪಟ್ಟಿಯಲ್ಲಿ ಬಿಸಿಸಿಐ ಎಂದಿನಂತೆ ತನ್ನ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

ಕೊರೊನಾ ಕಾಟ, ಅರ್ಧಕ್ಕೆ ನಿಂತ ಐಪಿಎಲ್.. ಆದರೂ ಬಿಸಿಸಿಐ ಆದಾಯಕ್ಕಿಲ್ಲ ಭಂಗ; ಕ್ರಿಕೆಟ್ ಮಂಡಳಿಗಳ ವಾರ್ಷಿಕ ಆದಾಯ ಎಷ್ಟು?
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on:May 29, 2021 | 4:46 PM

ಕ್ರಿಕೆಟ್ ವಿಶ್ವದಲ್ಲೇ ಹೆಚ್ಚು ಜನರು ಮೆಚ್ಚುವ ಕ್ರೀಡೆಗಳಲ್ಲಿ ಒಂದಾಗಿದೆ. ಫುಟ್ಬಾಲ್, ರಗ್ಬಿ, ಟೆನಿಸ್, ಬ್ಯಾಡ್ಮಿಂಟನ್ ಅಭಿಮಾನಿಗಳ ಮಧ್ಯೆ, ಜಂಟಲ್​ಮೆನ್ ಆಟವು ಪ್ರಪಂಚದಾದ್ಯಂತ ತನ್ನ ಸ್ಥಾನಮಾನ ಮತ್ತು ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಜೊತೆಗೆ ಉಪಖಂಡ ಮತ್ತು ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಈ ಆಟವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡೆಸುತ್ತದೆ. ಆದರೆ ಪ್ರತಿ ಕ್ರಿಕೆಟಿಂಗ್ ಆಡುವ ರಾಷ್ಟ್ರದ ತಂಡವನ್ನು ಆಯಾ ಮಂಡಳಿಗಳು ನಿರ್ವಹಿಸುತ್ತವೆ.

ಸುಗಮ ಕಾರ್ಯನಿರ್ವಹಣೆಯಿಂದ ದೇಶೀಯ ರಚನೆಯ ಬಗ್ಗೆ ಕಾಳಜಿ ವಹಿಸುವುದು. ಪ್ರಾಯೋಜಕತ್ವವನ್ನು ತರುವುದು, ಅವರ ಆಟಗಾರರಿಗೆ ಪಾವತಿ ಮತ್ತು ಇತರ ಸಂಪನ್ಮೂಲಗಳನ್ನು ನೋಡಿಕೊಳ್ಳುವುದು. ಆಟಕ್ಕೆ ಹೆಚ್ಚಿನ ಅಭಿಮಾನಿಗಳನ್ನು ಸೇರಿಸುವುದು, ದೊಡ್ಡ ಟಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವುದು. ಕಿರಿಯ-ಹಿರಿಯ ಅಥವಾ ಪುರುಷರ / ಮಹಿಳಾ ಕ್ರಿಕೆಟ್ ಕಾರ್ಯವನ್ನು ನೋಡಿಕೊಳ್ಳುವುದು. ಇಂತಹ ಹಲವು ಕೆಲಸಗಳನ್ನು ಈ ಮಂಡಳಿಗಳು ಮಾಡುತ್ತವೆ.

ಹೆಚ್ಚಿನ ಆದಾಯವನ್ನು ಗಳಿಸುವುದು ನಿಸ್ಸಂದೇಹವಾಗಿ, ಪ್ರತಿ ಮಂಡಳಿಗೆ ಅವೆಲ್ಲಕ್ಕಿಂತ ದೊಡ್ಡ ವಿಚಾರವೆಂದರೆ ಹೆಚ್ಚಿನ ಆದಾಯವನ್ನು ಗಳಿಸುವುದು ಮತ್ತು ಅವರ ವಿತ್ತೀಯ ಸಂಪನ್ಮೂಲಗಳನ್ನು ನಿರ್ವಹಿಸುವುದು. ದಿನದ ಕೊನೆಯಲ್ಲಿ, ಕ್ರೀಡೆಯು ಬ್ಯಾಟ್ ಮತ್ತು ಬಾಲ್ ಮತ್ತು ಎಲ್ಲ ಆಟಗಾರರ ನಡುವೆ ಇರಬಹುದು, ಆದರೆ ಪ್ರತಿ ಕ್ರಿಕೆಟಿಂಗ್ ಮಂಡಳಿಗೂ ಅತ್ಯಂತ ಅಗತ್ಯವಾದ ಅಂಶವೆಂದರೆ ಅವರು ವಾರ್ಷಿಕವಾಗಿ ಗಳಿಸುವ ಒಟ್ಟು ಗಳಿಕೆಯಾಗಿ ಉಳಿದಿದೆ. ಮೇಲೆ ತಿಳಿಸಿದ, ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರತಿಯೊಂದು ಅಂಶವನ್ನು ನಿರ್ವಹಿಸಲು ಈ ಆದಾಯ ಹೆಚ್ಚಿನ ಸಹಾಯ ಮಾಡುತ್ತದೆ.

ಕೋವಿಡ್ -19 ಸಾಂಕ್ರಾಮಿಕವು ವಿಶ್ವದಾದ್ಯಂತ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಹಾನಿಯನ್ನುಂಟುಮಾಡುತ್ತಿರುವುದರಿಂದ, ಇದು ಪ್ರತಿ ಕ್ರಿಕೆಟ್ ಮಂಡಳಿಯನ್ನು ತೊಂದರೆಗೀಡುಮಾಡಿದೆ. ಆದರೆ ಪ್ರತಿಷ್ಠಿತ ಮಂಡಳಿಗಳ ವಾರ್ಷಿಕ ಆದಾಯವನ್ನು ಗಮನಿಸಿದ ಮೇಲೆ ಈ ಎಲ್ಲಾ ಲೆಕ್ಕಾಚಾರಗಳು ಸುಳ್ಳು ಎಂದು ಬಾವಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಾರ್ಷಿಕ ಆದಾಯದ ಪಟ್ಟಿಯಲ್ಲಿ ಬಿಸಿಸಿಐ ಎಂದಿನಂತೆ ತನ್ನ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ. ಉಳಿದಂತೆ ಇತರ ಕ್ರಿಕೆಟ್ ಮಂಡಳಿಗಳ ಆದಾಯದ ವರದಿ ಹೀಗಿದೆ.

ಕ್ರಿಕೆಟ್ ಮಂಡಳಿ ಹಾಗೂ ಗಳಿಸಿರುವ ಆದಾಯ

 ಪ್ರಮುಖ ಕ್ರಿಕೆಟ್ ಮಂಡಳಿ              2021 ರಲ್ಲಿ ಗಳಿಸಿರುವ ಆದಾಯ
             BCCI   (ಭಾರತ)                           3,730 ಕೋಟಿ
CA  (ಆಸ್ಟ್ರೇಲಿಯಾ)                          2,843 ಕೋಟಿ
         ECB  (ಇಂಗ್ಲೆಂಡ್)                           2,135 ಕೋಟಿ
         PCB (ಪಾಕಿಸ್ತಾನ)                             811 ಕೋಟಿ
        BCB  (ಬಾಂಗ್ಲಾದೇಶ)                             802 ಕೋಟಿ
       CSA (ದಕ್ಷಿಣ ಆಫ್ರಿಕಾ)                            485 ಕೋಟಿ
        NZC (ನ್ಯೂಜಿಲೆಂಡ್)                            210 ಕೋಟಿ
       WICB (ವೆಸ್ಟ್ ಇಂಡಿಸ್)                             116 ಕೋಟಿ
      ZCB (ಜಿಂಬಾಬ್ವೆ)                             113 ಕೋಟಿ
       SLC  (ಶ್ರೀಲಂಕಾ)                             100 ಕೋಟಿ

Published On - 4:42 pm, Sat, 29 May 21

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ