ಆಸ್ಸೀ ವೇಗಿ ರಿಚರ್ಡ್​ಸನ್​ಗೂ ಪಿತೃತ್ವದ ರಜೆ, ಅವರ ಸ್ಥಾನಕ್ಕೆ ಟೈ | CA grants paternity leave to pacer Richardson, Tye to replace him

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಪಿತೃತ್ವದ ರಜೆ ನೀಡಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾ ಸಹ ತನ್ನ ವೇಗದ ಬೌಲರ್ ಕೇನ್ ರಿಚರ್ಡ್​ಸನ್​ಗೆ ಅದನ್ನು ದಯಪಾಲಿಸಿದೆ. ವಿಷಯ ಏನೆಂದರೆ, ಕೇನ್ ಅವರ ಪತ್ನಿ ಇತ್ತೀಚಿಗಷ್ಟೇ ಮಗುವನ್ನು ಹೆತ್ತಿದ್ದು, ಅವರು ಹೆಂಡತಿ ಮತ್ತು ತಮ್ಮ ನವಜಾತ ಶಿಶುವಿನೊಂದಿಗೆ ಸಮಯ ಕಳೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಅಸ್ಟ್ರೇಲಿಯಾ ಅವರ ನಿರ್ಧಾರಕ್ಕೆ ಮನ್ನಣೆ ನೀಡಿ ರಜೆಯನ್ನು ನೀಡಿದೆ. 29 ವರ್ಷ ವಯಸ್ಸಿನ ಕೇನ್, ನವೆಂಬರ್ 27ರಿಂದ […]

ಆಸ್ಸೀ ವೇಗಿ ರಿಚರ್ಡ್​ಸನ್​ಗೂ ಪಿತೃತ್ವದ ರಜೆ, ಅವರ ಸ್ಥಾನಕ್ಕೆ ಟೈ | CA grants paternity leave to pacer Richardson, Tye to replace him
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2020 | 3:39 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಪಿತೃತ್ವದ ರಜೆ ನೀಡಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾ ಸಹ ತನ್ನ ವೇಗದ ಬೌಲರ್ ಕೇನ್ ರಿಚರ್ಡ್​ಸನ್​ಗೆ ಅದನ್ನು ದಯಪಾಲಿಸಿದೆ. ವಿಷಯ ಏನೆಂದರೆ, ಕೇನ್ ಅವರ ಪತ್ನಿ ಇತ್ತೀಚಿಗಷ್ಟೇ ಮಗುವನ್ನು ಹೆತ್ತಿದ್ದು, ಅವರು ಹೆಂಡತಿ ಮತ್ತು ತಮ್ಮ ನವಜಾತ ಶಿಶುವಿನೊಂದಿಗೆ ಸಮಯ ಕಳೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಅಸ್ಟ್ರೇಲಿಯಾ ಅವರ ನಿರ್ಧಾರಕ್ಕೆ ಮನ್ನಣೆ ನೀಡಿ ರಜೆಯನ್ನು ನೀಡಿದೆ. 29 ವರ್ಷ ವಯಸ್ಸಿನ ಕೇನ್, ನವೆಂಬರ್ 27ರಿಂದ ಪ್ರವಾಸಿ ಭಾರತದ ವಿರುದ್ಧ ಆರಂಭವಾಗಲಿರುವ ಮೂರು ಒಂದು ದಿನದ ಅಂತರರಾಷ್ಟ್ರೀಯ ಹಾಗೂ ಮೂರು ಟಿ20ಐ ಪಂದ್ಯಗಳಲ್ಲಿ ಆಡುವ ಅತಿಥೇಯ ತಂಡದ ಸದಸ್ಯರಾಗಿದ್ದರು. ಅವರ ಸ್ಥಾನದಲ್ಲಿ ಮತ್ತೊಬ್ಬ ವೇಗದ ಬೌಲರ್ ಆಂಡ್ರ್ಯೂ ಟೈ ಅವರನ್ನು ಆಯ್ಕೆ ಮಾಡಲಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾಗಿರುವ ಟ್ರೆವರ್ ಹಾನ್ಸ್ ಕೇನ್ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.

‘‘ಕೇನ್ ಸೇವೆಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ ಅದು ಅವರ ವೈಯಕ್ತಿಕ ನಿರ್ಧಾರ ಮತ್ತು ಕ್ರಿಕೆಟ್ ಅಸ್ಟ್ರೇಲಿಯಾ ಅದನ್ನು ಬೆಂಬಲಿಸುತ್ತದೆ. ಅವರ ನಿರ್ಧಾರವನ್ನ ನಾವು ಅರ್ಥಮಾಡಿಕೊಳ್ಳಬಲ್ಲೆವು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಎಲ್ಲರೂ ತಮ್ಮ ಕುಟುಂಬದೊಂದಿಗೆ ಇರಲು ಇಷ್ಟಪಡುತ್ತಾರೆ,’’ ಎಂದು ಹಾನ್ಸ್ ಹೇಳಿದ್ದಾರೆ.

ಓದುಗರಿಗೆ ನೆನೆಪಿರಬಹುದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೇನ್ ಅವರನ್ನು ಐಪಿಎಲ್ 2020 ಸೀಸನ್​ಗೆ ಅವರನ್ನು ಹೈರ್ ಮಾಡಿತ್ತು. ಆದರೆ, ಹೆರಿಗೆ ಸಂದರ್ಭದಲ್ಲಿ ಪತ್ನಿಯೊಂದಿಗಿರಲು ಬಯಸಿ ಆಸ್ಟ್ರೇಲಿಯಾಗೆ ವಾಪಸ್ಸು ಹೋಗಿದ್ದರು. ಕೇನ್ ರಾಜಸ್ತಾನ್ ರಾಯಲ್ಸ್ ತಂಡಕ್ಕೂ ಆಡಿದ್ದಾರೆ.

ಕೇನ್ ಪ್ರತಿಭಾವಂತ ವೇಗದ ಬೌಲರ್ ಅಗಿದ್ದರೂ ತಮ್ಮ ರಾಷ್ಟ್ರದ ಪರ ಇನ್ನೂ ಟೆಸ್ಟ್​ಗೆ ಪಾದಾರ್ಪಣೆ ಮಾಡಿಲ್ಲ. ಆದರೆ, 25 ಒಡಿಐ ಮತ್ತು 21 ಟಿ20ಐ ಪಂದ್ಯಗಳನ್ನು ಆಸ್ಟ್ರೇಲಿಯಾಗೆ ಆಡಿದ್ದಾರೆ. 50 ಒವರ್​ಗಳ ಮ್ಯಾಚ್​ಗಳಲ್ಲಿ 39 ಮತ್ತು 20 ಓವರ್​ಗಳ ಪಂದ್ಯಗಳಲ್ಲಿ 22 ವಿಕೆಟ್​ಗಳನ್ನು ಪಡೆದಿದ್ದಾರೆ.

ಅವರ ಸ್ಥಾನಕ್ಕೆ ಆಯ್ಕೆಯಾಗಿರುವ 33-ವರ್ಷದ ಟೈ ಕೂಡ ಬಹಳ ಅನುಭವಿ ಬೌಲರ್ ಏನಲ್ಲ. ಅವರು 7 ಒಡಿಐ ಮತ್ತು 26 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಅವರು ಚೆನೈ ಸೂಪರ್ ಕಿಂಗ್ಸ್. ಗುಜರಾತ್ ಲಯನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಪರ ಟೀಮುಗಳನ್ನು ಪ್ರತಿನಿಧಿಸಿದ್ದಾರೆ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?