ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ (India and Pakistan) ಪಂದ್ಯದ ವಿಷಯಕ್ಕೆ ಬಂದರೆ, ಎಲ್ಲೆಡೆ ಚರ್ಚೆಗಳು ವಿಭಿನ್ನವಾಗಿರುತ್ತವೆ. ಬರ್ಮಿಂಗ್‌ಹ್ಯಾಮ್‌ನಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ (Commonwealth Games 2022) ಈ ವಾತಾವರಣ ಸೃಷ್ಟಿಯಾಗಿತ್ತು. ಜುಲೈ 31 ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನದ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಆದಾಗ್ಯೂ, ಎರಡೂ ದೇಶಗಳಲ್ಲಿನ ಮಹಿಳಾ ಕ್ರಿಕೆಟ್ ಪುರುಷರ ಕ್ರಿಕೆಟ್‌ನಂತೆ ತೀವ್ರ ಪೈಪೋಟಿಯನ್ನು ಹೊಂದಿರಲಿಲ್ಲ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಪಾಕಿಸ್ತಾನ ತಂಡ ತನ್ನ ಇನ್ನಿಂಗ್ಸ್‌ನ ಕೊನೆಯ 8 ಎಸೆತಗಳನ್ನು ಆಡಿದ ರೀತಿ. ಇದರಲ್ಲಿ ಪಾಕಿಸ್ತಾನ ತಮ್ಮ ತಂಡದ ಅರ್ಧಕ್ಕಿಂತ ಹೆಚ್ಚಿನ ಆಟಗಾರರ ವಿಕೆಟ್ ಕಳೆದುಕೊಂಡಿತ್ತು.
ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಏಷ್ಯನ್ (ಹೆಚ್ಚಾಗಿ ಭಾರತ ಮತ್ತು ಪಾಕಿಸ್ತಾನ) ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ, ಎರಡೂ ತಂಡಗಳು ಈ ಪಂದ್ಯಕ್ಕಾಗಿ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಬಂದಿಳಿದವು. ಭಾರತ ತಂಡ ಯಾವಾಗಲೂ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿರುವುದರಿಂದ ಏಕಪಕ್ಷೀಯ ಪಂದ್ಯವನ್ನು ನಿರೀಕ್ಷಿಸಲಾಗಿತ್ತು. ಪಾಕಿಸ್ತಾನದ ಬ್ಯಾಟಿಂಗ್‌ನಲ್ಲೂ ಅದೇ ಪರಿಸ್ಥಿತಿ ಕಂಡುಬಂತು. ಈ ಪಂದ್ಯದಲ್ಲಿ ಇಡೀ ತಂಡ 18 ಓವರ್‌ಗಳಲ್ಲಿ ಕೇವಲ 99 ರನ್‌ಗಳಿಗೆ ಆಲೌಟ್ ಆಗಿತ್ತು.
8 ಎಸೆತಗಳಲ್ಲಿ ಪಾಕಿಸ್ತಾನದ ಭವಿಷ್ಯ ಬದಲಾಯಿತು
ಭಾರತದ ಸ್ಪಿನ್ನರ್‌ಗಳಿಗೆ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ಬಳಿ ಉತ್ತರವಿರಲಿಲ್ಲ. ಇದು ಇನಿಂಗ್ಸ್‌ನುದ್ದಕ್ಕೂ ಮುಂದುವರೆದಿತ್ತು. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಹೀನಾಯವಾಗಿ ಕುಸಿಯಿತು. ಕೇವಲ 18 ಓವರ್‌ಗಳ ಈ ಪಂದ್ಯದ ಕೊನೆಯ 8 ಎಸೆತಗಳು ಪಾಕಿಸ್ತಾನಕ್ಕೆ ಎಷ್ಟು ಭಾರವಾದವು ಎಂದರೆ ರನ್ ಗಳಿಸುವುದಲ್ಲಿರಲಿ ವಿಕೆಟ್ ಉಳಿಸುಕೊಳ್ಳಲು ಸಹ ಸಾಧ್ಯವಾಗಲಿಲ್ಲ.
17ನೇ ಓವರ್‌ನಲ್ಲಿ ಶೆಫಾಲಿ ವರ್ಮಾ ಅವರ ಕೊನೆಯ ಎರಡು ಮತ್ತು ನಂತರ 18ನೇ ಓವರ್‌ನಲ್ಲಿ ರಾಧಾ ಯಾದವ್ ಅವರ 6 ಎಸೆತಗಳಲ್ಲಿ ಪಾಕಿಸ್ತಾನ ತಂಡ ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತವಾಗಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಎರಡು ರನ್ ಔಟ್ ಆಗಿದ್ದರೆ, ರಾಧಾ ಎರಡು ವಿಕೆಟ್ ಮತ್ತು 1 ಶೆಫಾಲಿ ಪಡೆದರು.
ಭಾರತೀಯ ಬೌಲರ್‌ಗಳ ಅಬ್ಬರ
ಪಾಕಿಸ್ತಾನದ ಇನ್ನಿಂಗ್ಸ್‌ನ ಮಟ್ಟಿಗೆ ಹೇಳುವುದಾದರೆ, ತಂಡದ ಸ್ಥಿತಿ ಆರಂಭದಿಂದಲೂ ಕೆಟ್ಟದಾಗಿತ್ತು. ಎರಡನೇ ಓವರ್ ನಲ್ಲಿ ತಂಡ ಖಾತೆ ತೆರೆಯದೆ ಮೊದಲ ವಿಕೆಟ್ ಕಳೆದುಕೊಂಡಿತು. ಇದರ ನಂತರ ನಾಯಕ ಬಿಸ್ಮಾ ಮರೂಫ್ ಮತ್ತು ಮುನೀಬಾ ಅಲಿ ನಡುವೆ 50 ರನ್ ಜೊತೆಯಾಟವಿತ್ತು, ಆದರೆ ಅದರ ನಂತರ ಯಾವುದೇ ಬ್ಯಾಟ್ಸ್‌ಮನ್ ಅವರ ಕಡೆಯಿಂದ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಭಾರತದ ಪರ ರಾಧಾ ಮತ್ತು ಶೆಫಾಲಿ ಹೊರತುಪಡಿಸಿ ಸ್ನೇಹ್ ರಾಣಾ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರೆ, ವೇಗಿ ಜೋಡಿ, ಮೇಘನಾ ಸಿಂಗ್ ಮತ್ತು ರೇಣುಕಾ ಸಿಂಗ್ ತಲಾ ಒಂದು ವಿಕೆಟ್ ಪಡೆದರು.