Commonwealth Games 2022 Medal Tally: 6 ಪದಕಗಳೊಂದಿಗೆ ಭಾರತಕ್ಕೆ 6ನೇ ಸ್ಥಾನ; ಮುಂದುವರೆದ ಆಸ್ಟ್ರೇಲಿಯಾ ಪ್ರಾಬಲ್ಯ

Commonwealth Games 2022 Medal Tally: ಭಾರತ ಈಗ 3 ಚಿನ್ನ ಸೇರಿದಂತೆ 6 ಪದಕಗಳನ್ನು ಹೊಂದಿದೆ ಮತ್ತು ಆ ಮೂಲಕ ಭಾರತ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ವೇಟ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ ಭಾರತದ ಎಲ್ಲಾ ಪದಕಗಳು ಬಂದಿವೆ.

Commonwealth Games 2022 Medal Tally: 6 ಪದಕಗಳೊಂದಿಗೆ ಭಾರತಕ್ಕೆ 6ನೇ ಸ್ಥಾನ; ಮುಂದುವರೆದ ಆಸ್ಟ್ರೇಲಿಯಾ ಪ್ರಾಬಲ್ಯ
Follow us
TV9 Web
| Updated By: ಪೃಥ್ವಿಶಂಕರ

Updated on: Aug 01, 2022 | 2:39 PM

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Commonwealth Games 2022)ರ ಮೂರನೇ ದಿನ ಮುಗಿದಿದ್ದು ಮತ್ತೊಮ್ಮೆ ಪದಕ ಪಟ್ಟಿಯನ್ನು ಪರಿಶೀಲಿಸುವ ಸಮಯ ಬಂದಿದೆ. ಎಲ್ಲಾ ಮುನ್ಸೂಚನೆಗಳು ಮತ್ತು ನಿರೀಕ್ಷೆಗಳ ಪ್ರಕಾರ, ಆಸ್ಟ್ರೇಲಿಯಾ ತಮ್ಮ ಸ್ಟಾರ್ ಈಜುಗಾರರ ಅದ್ಭುತ ಪ್ರದರ್ಶನದಿಂದ ಮೂರನೇ ದಿನದಲ್ಲೂ ತನ್ನ ಪ್ರಾಬಲ್ಯ ಮುಂದುವರೆಸಿದೆ. ಜೊತೆಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಇದೇ ವೇಳೆ ಭಾರತದ ವೇಟ್​ಲಿಫ್ಟರ್​ಗಳು ದಾಖಲೆಯ ಭಾರ ಎತ್ತಿದ್ದಲ್ಲದೆ, ಪದಕದ ಭರವಸೆಯ ಭಾರವನ್ನು ಯಶಸ್ವಿಯಾಗಿ ಹೊತ್ತುಕೊಂಡು ಪದಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಭಾರತವನ್ನು ಏರಿಸಿದ್ದಾರೆ.

ಭಾರತದ ವೇಟ್​ಲಿಫ್ಟರ್​ಗಳ ಅದ್ಭುತ ಪ್ರದರ್ಶನ

ಇದನ್ನೂ ಓದಿ
Image
CWG 2022 Day 4, Schedule: ಕಾಮನ್‌ವೆಲ್ತ್ ಗೇಮ್ಸ್ ನಾಲ್ಕನೇ ದಿನ ಭಾರತ ಸ್ಪರ್ಧಿಸಲ್ಲಿರುವ ಕ್ರೀಡೆಗಳ ಪಟ್ಟಿ ಹೀಗಿದೆ
Image
CWG 2022: ವೇಟ್​ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಚಿನ್ನ; ಕ್ರಿಕೆಟ್​ನಿಂದ ಟೇಬಲ್ ಟೆನ್ನಿಸ್​ವರೆಗೆ ಇವತ್ತಿನ ಪ್ರದರ್ಶನ ಹೀಗಿತ್ತು
Image
CWG 2022: ಬಾಕ್ಸರ್ ಆಗ ಹೊರಟವನು ವೇಟ್​ಲಿಫ್ಟರಾದ; ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಚಿನ್ನ ತಂದ

ಜುಲೈ 31 ರ ಭಾನುವಾರದಂದು ಕ್ರೀಡಾಕೂಟದ ಮೂರನೇ ದಿನ ಭಾರತಕ್ಕೆ ಹೆಚ್ಚಿನ ಪದಕಗಳು ಸಿಗಲಿಲ್ಲ. ಇಬ್ಬರು ಯುವ ವೇಟ್‌ಲಿಫ್ಟರ್‌ಗಳು ಭಾನುವಾರ ಭಾರತಕ್ಕಾಗಿ ತಮ್ಮ ಚೊಚ್ಚಲ ಗೇಮ್ಸ್‌ನಲ್ಲಿ ಚಿನ್ನದ ಯಶಸ್ಸನ್ನು ಸಾಧಿಸಿದರು. ಆರಂಭವನ್ನು 19 ವರ್ಷದ ಜೆರೆಮಿ ಲಾಲ್ರಿನುಂಗಾ ಮಾಡಿದರು. ಪುರುಷರ 65 ಕೆಜಿ ವಿಭಾಗದಲ್ಲಿ ಜೆರೆಮಿ ದಿನದ ಮೊದಲ ಚಿನ್ನ ಮತ್ತು ಭಾರತಕ್ಕೆ ಎರಡನೇ ಚಿನ್ನ ಗೆದ್ದರು. ನಂತರ ದಿನದ ಕೊನೆಯ ಸ್ಪರ್ಧೆಯಲ್ಲಿ 20 ವರ್ಷದ ಅಚಿಂತ್ ಶೂಲಿ ಅವರು ದಿನದ ಎರಡನೇ ಚಿನ್ನ ಮತ್ತು ಪುರುಷರ 73 ಕೆಜಿ ವಿಭಾಗದಲ್ಲಿ ಒಟ್ಟಾರೆ ಮೂರನೇ ಚಿನ್ನ ಗೆದ್ದರು.

ಟೀಮ್ ಇಂಡಿಯಾಕ್ಕೆ 6ನೇ ಸ್ಥಾನ

ಜೆರೆಮಿ ಮತ್ತು ಅಚಿಂತಾ ಅವರ ಪ್ರಬಲ ಪ್ರದರ್ಶನವು ಶನಿವಾರದ ನಂತರ ಪದಕ ಪಟ್ಟಿಯಲ್ಲಿ ಭಾರತ ಎರಡು ಸ್ಥಾನಗಳನ್ನು ಪಡೆದುಕೊಂಡಿತು. ಭಾರತ ಈಗ 3 ಚಿನ್ನ ಸೇರಿದಂತೆ 6 ಪದಕಗಳನ್ನು ಹೊಂದಿದೆ ಮತ್ತು ಆ ಮೂಲಕ ಭಾರತ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ವೇಟ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ ಭಾರತದ ಎಲ್ಲಾ ಪದಕಗಳು ಬಂದಿವೆ. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತವು 6 ಪದಕಗಳೊಂದಿಗೆ ಹೆಚ್ಚು ಪದಕಗಳನ್ನು ಗೆದ್ದಿದೆ. ಭಾರತವು ಇದುವರೆಗೆ ವೇಟ್‌ಲಿಫ್ಟಿಂಗ್‌ನಲ್ಲಿ ಒಂದು ಸ್ಪರ್ಧೆಯನ್ನು ಹೊರತುಪಡಿಸಿ ಎಲ್ಲಾ ಪದಕಗಳನ್ನು ಪಡೆದುಕೊಂಡಿದೆ. ಮಹಿಳೆ ವಿಭಾಗದಲ್ಲಿ ಮಾತ್ರ, ಪೋಪಿ ಹಜಾರಿಕಾ ಏಳನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಈಜುಗಾರರ ಪ್ರಾಬಲ್ಯ

ನಾವು ಒಟ್ಟು ಪದಕದ ಬಗ್ಗೆ ಮಾತನಾಡಿದರೆ, ಪ್ರತಿ ಬಾರಿಯಂತೆ ಆಸ್ಟ್ರೇಲಿಯಾ ಇನ್ನೂ ಮೊದಲ ಸ್ಥಾನದಲ್ಲಿದೆ ಮತ್ತು ಅದರ ಬೆಳವಣಿಗೆ ತುಂಬಾ ಹೆಚ್ಚಾಗಿದೆ. ಆಸ್ಟ್ರೇಲಿಯಾ ಇದುವರೆಗೆ 22 ಚಿನ್ನದ ಪದಕಗಳನ್ನು ಗೆದ್ದಿದ್ದು, ಅದರಲ್ಲಿ 11 ಪದಕಗಳು ಸ್ವಿಮ್ಮಿಂಗ್‌ನಲ್ಲಿ ಬಂದಿವೆ. ಚಿನ್ನ ಮಾತ್ರವಲ್ಲ, ಒಟ್ಟಾರೆ ಪದಕಗಳಲ್ಲಿಯೂ ನಂಬರ್ ಒನ್ ಸ್ಥಾನದಲ್ಲಿದ್ದು, 13 ಬೆಳ್ಳಿ ಹಾಗೂ 17 ಕಂಚು ಕೂಡ ಗೆದ್ದಿದೆ. ಅಂದರೆ ಆಸ್ಟ್ರೇಲಿಯಾ ಒಟ್ಟು 52 ಪದಕಗಳನ್ನು ಪಡೆದಿದೆ. ಎರಡನೇ ಸ್ಥಾನದಲ್ಲಿ ಆತಿಥೇಯ ಇಂಗ್ಲೆಂಡ್ 11 ಚಿನ್ನದೊಂದಿಗೆ ತೀರಾ ಹಿಂದುಳಿದಿದೆ. ಮೂರನೇ ದಿನದವರೆಗೆ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 189 ಪದಕಗಳನ್ನು ಗೆದ್ದಿದ್ದರೆ, ಒಟ್ಟು 24 ದೇಶಗಳು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.