IND vs PAK: ಭಾರತದ ದಾಳಿಗೆ ಕೇವಲ 8 ಎಸೆತಗಳಲ್ಲಿ ತರಗೆಲೆಗಳಂತೆ ಉದುರಿದವು ಪಾಕಿಸ್ತಾನದ ವಿಕೆಟ್..!

IND vs PAK: ಶೆಫಾಲಿ ವರ್ಮಾ ಅವರ ಕೊನೆಯ ಎರಡು ಮತ್ತು ನಂತರ 18ನೇ ಓವರ್‌ನಲ್ಲಿ ರಾಧಾ ಯಾದವ್ ಅವರ 6 ಎಸೆತಗಳಲ್ಲಿ ಪಾಕಿಸ್ತಾನ ತಂಡ ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತವಾಗಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು.

IND vs PAK: ಭಾರತದ ದಾಳಿಗೆ ಕೇವಲ 8 ಎಸೆತಗಳಲ್ಲಿ ತರಗೆಲೆಗಳಂತೆ ಉದುರಿದವು ಪಾಕಿಸ್ತಾನದ ವಿಕೆಟ್..!
IND vs PAK
Follow us
TV9 Web
| Updated By: ಪೃಥ್ವಿಶಂಕರ

Updated on: Aug 01, 2022 | 3:17 PM

ಕ್ರಿಕೆಟ್​ನಲ್ಲಿ ಭಾರತ-ಪಾಕಿಸ್ತಾನ (India and Pakistan) ಪಂದ್ಯದ ವಿಷಯಕ್ಕೆ ಬಂದರೆ, ಎಲ್ಲೆಡೆ ಚರ್ಚೆಗಳು ವಿಭಿನ್ನವಾಗಿರುತ್ತವೆ. ಬರ್ಮಿಂಗ್‌ಹ್ಯಾಮ್‌ನಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ (Commonwealth Games 2022) ಈ ವಾತಾವರಣ ಸೃಷ್ಟಿಯಾಗಿತ್ತು. ಜುಲೈ 31 ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನದ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಆದಾಗ್ಯೂ, ಎರಡೂ ದೇಶಗಳಲ್ಲಿನ ಮಹಿಳಾ ಕ್ರಿಕೆಟ್ ಪುರುಷರ ಕ್ರಿಕೆಟ್‌ನಂತೆ ತೀವ್ರ ಪೈಪೋಟಿಯನ್ನು ಹೊಂದಿರಲಿಲ್ಲ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಪಾಕಿಸ್ತಾನ ತಂಡ ತನ್ನ ಇನ್ನಿಂಗ್ಸ್‌ನ ಕೊನೆಯ 8 ಎಸೆತಗಳನ್ನು ಆಡಿದ ರೀತಿ. ಇದರಲ್ಲಿ ಪಾಕಿಸ್ತಾನ ತಮ್ಮ ತಂಡದ ಅರ್ಧಕ್ಕಿಂತ ಹೆಚ್ಚಿನ ಆಟಗಾರರ ವಿಕೆಟ್ ಕಳೆದುಕೊಂಡಿತ್ತು.

ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಏಷ್ಯನ್ (ಹೆಚ್ಚಾಗಿ ಭಾರತ ಮತ್ತು ಪಾಕಿಸ್ತಾನ) ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ, ಎರಡೂ ತಂಡಗಳು ಈ ಪಂದ್ಯಕ್ಕಾಗಿ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಬಂದಿಳಿದವು. ಭಾರತ ತಂಡ ಯಾವಾಗಲೂ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿರುವುದರಿಂದ ಏಕಪಕ್ಷೀಯ ಪಂದ್ಯವನ್ನು ನಿರೀಕ್ಷಿಸಲಾಗಿತ್ತು. ಪಾಕಿಸ್ತಾನದ ಬ್ಯಾಟಿಂಗ್‌ನಲ್ಲೂ ಅದೇ ಪರಿಸ್ಥಿತಿ ಕಂಡುಬಂತು. ಈ ಪಂದ್ಯದಲ್ಲಿ ಇಡೀ ತಂಡ 18 ಓವರ್‌ಗಳಲ್ಲಿ ಕೇವಲ 99 ರನ್‌ಗಳಿಗೆ ಆಲೌಟ್ ಆಗಿತ್ತು.

8 ಎಸೆತಗಳಲ್ಲಿ ಪಾಕಿಸ್ತಾನದ ಭವಿಷ್ಯ ಬದಲಾಯಿತು

ಇದನ್ನೂ ಓದಿ
Image
Commonwealth Games 2022 Medal Tally: 6 ಪದಕಗಳೊಂದಿಗೆ ಭಾರತಕ್ಕೆ 6ನೇ ಸ್ಥಾನ; ಮುಂದುವರೆದ ಆಸ್ಟ್ರೇಲಿಯಾ ಪ್ರಾಬಲ್ಯ
Image
CWG 2022 Day 4, Schedule: ಕಾಮನ್‌ವೆಲ್ತ್ ಗೇಮ್ಸ್ ನಾಲ್ಕನೇ ದಿನ ಭಾರತ ಸ್ಪರ್ಧಿಸಲ್ಲಿರುವ ಕ್ರೀಡೆಗಳ ಪಟ್ಟಿ ಹೀಗಿದೆ
Image
CWG 2022: ಭಾರತಕ್ಕೆ ಎರಡನೇ ಚಿನ್ನದ ಪದಕ; ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ ..!

ಭಾರತದ ಸ್ಪಿನ್ನರ್‌ಗಳಿಗೆ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ಬಳಿ ಉತ್ತರವಿರಲಿಲ್ಲ. ಇದು ಇನಿಂಗ್ಸ್‌ನುದ್ದಕ್ಕೂ ಮುಂದುವರೆದಿತ್ತು. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಹೀನಾಯವಾಗಿ ಕುಸಿಯಿತು. ಕೇವಲ 18 ಓವರ್‌ಗಳ ಈ ಪಂದ್ಯದ ಕೊನೆಯ 8 ಎಸೆತಗಳು ಪಾಕಿಸ್ತಾನಕ್ಕೆ ಎಷ್ಟು ಭಾರವಾದವು ಎಂದರೆ ರನ್ ಗಳಿಸುವುದಲ್ಲಿರಲಿ ವಿಕೆಟ್ ಉಳಿಸುಕೊಳ್ಳಲು ಸಹ ಸಾಧ್ಯವಾಗಲಿಲ್ಲ.

17ನೇ ಓವರ್‌ನಲ್ಲಿ ಶೆಫಾಲಿ ವರ್ಮಾ ಅವರ ಕೊನೆಯ ಎರಡು ಮತ್ತು ನಂತರ 18ನೇ ಓವರ್‌ನಲ್ಲಿ ರಾಧಾ ಯಾದವ್ ಅವರ 6 ಎಸೆತಗಳಲ್ಲಿ ಪಾಕಿಸ್ತಾನ ತಂಡ ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತವಾಗಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ಎರಡು ರನ್ ಔಟ್ ಆಗಿದ್ದರೆ, ರಾಧಾ ಎರಡು ವಿಕೆಟ್ ಮತ್ತು 1 ಶೆಫಾಲಿ ಪಡೆದರು.

ಭಾರತೀಯ ಬೌಲರ್‌ಗಳ ಅಬ್ಬರ

ಪಾಕಿಸ್ತಾನದ ಇನ್ನಿಂಗ್ಸ್‌ನ ಮಟ್ಟಿಗೆ ಹೇಳುವುದಾದರೆ, ತಂಡದ ಸ್ಥಿತಿ ಆರಂಭದಿಂದಲೂ ಕೆಟ್ಟದಾಗಿತ್ತು. ಎರಡನೇ ಓವರ್ ನಲ್ಲಿ ತಂಡ ಖಾತೆ ತೆರೆಯದೆ ಮೊದಲ ವಿಕೆಟ್ ಕಳೆದುಕೊಂಡಿತು. ಇದರ ನಂತರ ನಾಯಕ ಬಿಸ್ಮಾ ಮರೂಫ್ ಮತ್ತು ಮುನೀಬಾ ಅಲಿ ನಡುವೆ 50 ರನ್ ಜೊತೆಯಾಟವಿತ್ತು, ಆದರೆ ಅದರ ನಂತರ ಯಾವುದೇ ಬ್ಯಾಟ್ಸ್‌ಮನ್ ಅವರ ಕಡೆಯಿಂದ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಭಾರತದ ಪರ ರಾಧಾ ಮತ್ತು ಶೆಫಾಲಿ ಹೊರತುಪಡಿಸಿ ಸ್ನೇಹ್ ರಾಣಾ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರೆ, ವೇಗಿ ಜೋಡಿ, ಮೇಘನಾ ಸಿಂಗ್ ಮತ್ತು ರೇಣುಕಾ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ