2023- 24 ನೇ ಸಾಲಿನ ರಣಜಿ ಟ್ರೋಫಿ (Ranji Trophy) ಸೀಸನ್ ಜನವರಿ 5 ರಿಂದ ಅಂದರೆ ಇಂದಿನಿಂದ ಆರಂಭವಾಗಿದೆ. ಈ ಬಾರಿ ಎಲೈಟ್ ಮತ್ತು ಪ್ಲೇಟ್ ಗುಂಪಿನ ಎಲ್ಲಾ ತಂಡಗಳು ಸೇರಿದಂತೆ ಒಟ್ಟು 38 ತಂಡಗಳು ಈ ದೇಶೀ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಇದುವರೆಗೆ ಗರಿಷ್ಠ ಬಾರಿ ಈ ಟ್ರೋಫಿ ಗೆದ್ದಿರುವ ಮುಂಬೈ ತಂಡ ಹಾಗೂ ಬಿಹಾರ (Mumbai vs Bihar) ತಂಡದ ನಡುವೆ ಈ ಸೀಸನ್ನ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಿಹಾರ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ 12 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ದಾಖಲೆಗಳ ಪ್ರಕಾರ ವೈಭವ್ ಸೂರ್ಯವಂಶಿ ಅವರ ವಯಸ್ಸು ಕೇವಲ 12 ವರ್ಷ 284 ದಿನಗಳು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ವೈಭವ್ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ 5ನೇ ಯುವ ಆಟಗಾರ ಎನಿಸಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ಹೇಳುವುದಾದರೆ, ಪ್ರಸ್ತುತ ಬಿಹಾರ ತಂಡದ ಪರ ರಣಜಿಗೆ ಪದಾರ್ಪಣೆ ಮಾಡಿರುವ ಅವರು ಭಾರತ ಅಂಡರ್-19 ಬಿ ತಂಡದ ಭಾಗವಾಗಿದ್ದಾರೆ. ಇದರಲ್ಲಿ ಅವರು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದೊಂದಿಗಿನ ಚತುರ್ಭುಜ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 177 ರನ್ ಕಲೆಹಾಕಿದ್ದರು. ಇದಲ್ಲದೆ, ದೇಶೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ 2023 ರ ವಿನೂ ಮಂಕಡ್ ಟ್ರೋಫಿಯಲ್ಲೂ ಆಡಿದ್ದಾರೆ. ಇದರಲ್ಲಿ ಅವರ ಬ್ಯಾಟ್‌ನಿಂದ 393 ರನ್ಗಳು ಸಿಡಿದಿದ್ದವು. ವೈಭವ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ನಿಧಾನಗತಿಯ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ.
ಇಂದಿನಿಂದ ರಣಜಿ ಟ್ರೋಫಿ ಆರಂಭ: ರಣಜಿ ಇತಿಹಾಸದಲ್ಲಿ ಹೆಚ್ಚಿನ ರನ್ಸ್, ಗರಿಷ್ಠ ವಿಕೆಟ್ಸ್ ಯಾರು?
1942-43ರ ರಣಜಿ ಸೀಸನ್ನಲ್ಲಿ ಕೇವಲ 12 ವರ್ಷ ಮತ್ತು 73 ದಿನಗಳಲ್ಲಿ ರಜಪೂತಾನ ತಂಡದ ಪರ ಚೊಚ್ಚಲ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದ ಅಲಿಮುದ್ದೀನ್ ಅವರ ಹೆಸರಿನಲ್ಲಿ ಭಾರತದ ಪರ ಅತಿ ಚಿಕ್ಕ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕ್ರಿಕೆಟಿಗ ಎಂಬ ದಾಖಲೆ ದಾಖಲಾಗಿದೆ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಕೂಡ 15 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು.
Vaibhav Suryavanshi of Bihar makes his first-class debut at the age of 12 years and 284 days. He is playing in a Ranji Trophy encounter against Mumbai.#RanjiTrophy #CricketTwitter
Image courtesy: Vaibhav Suryavanshi Instagram pic.twitter.com/d88skTH0F2
— 100MB (@100MasterBlastr) January 5, 2024
ಇಲ್ಲಿಯವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ಕೇವಲ 9 ಆಟಗಾರರು 13 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರಲ್ಲಿ ಅಲಿಮುದ್ದೀನ್ ಹೊರತುಪಡಿಸಿ, ಎಸ್‌ಕೆ ಬೋಸ್, ಆಕಿಬ್ ಜಾವೇದ್, ಮೊಹಮ್ಮದ್ ಅಕ್ರಮ್, ಮೊಹಮ್ಮದ್ ರಿಜ್ವಾನ್, ರಿಜ್ವಾನ್ ಸತ್ತಾರ್, ಸಲೀಮುದ್ದೀನ್ ಮತ್ತು ಖಾಸಿಂ ಫಿರೋಜಿ, ವೈಭವ್ ಸೂರ್ಯವಂಶಿ ಸೇರಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Fri, 5 January 24