ಸೊನ್ನೆ ಸುತ್ತಿದ 9 ಬ್ಯಾಟ್ಸ್​ಮನ್​ಗಳು, ಇಬ್ಬರಿಂದ 3 ರನ್​:17 ರನ್​ಗೆ ಆಲೌಟ್..!

| Updated By: ಝಾಹಿರ್ ಯೂಸುಫ್

Updated on: Jun 06, 2022 | 2:12 PM

Cricket Records: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಓವರ್ಟನ್ ಕ್ರಿಕೆಟ್ ಕ್ಲಬ್​ನ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಪೆರೇಡ್ ನಡೆಸಿದರು.

ಸೊನ್ನೆ ಸುತ್ತಿದ 9 ಬ್ಯಾಟ್ಸ್​ಮನ್​ಗಳು, ಇಬ್ಬರಿಂದ 3 ರನ್​:17 ರನ್​ಗೆ ಆಲೌಟ್..!
ಸಾಂದರ್ಭಿಕ ಚಿತ್ರ
Follow us on

ಟಿ20 ಕ್ರಿಕೆಟ್​ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವ ಅನೇಕ ಉದಾಹರಣೆಗಳಿವೆ. ಅದರಲ್ಲೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆ ಟರ್ಕಿ ದೇಶದ ಹೆಸರಿನಲ್ಲಿದೆ. 2019 ರಲ್ಲಿ ಚೆಕ್ ರಿಪಬ್ಲಿಕ್ ವಿರುದ್ದದ ಪಂದ್ಯದಲ್ಲಿ ಟರ್ಕಿ ತಂಡವು ಕೇವಲ 21 ರನ್​ಗೆ ಆಲೌಟ್ ಆಗಿತ್ತು. ಇದೀಗ ಇದಕ್ಕಿಂತ ಕಡಿಮೆ ಮೊತ್ತಕ್ಕೆ ತಂಡವೊಂದು ಆಲೌಟ್ ಆಗಿದೆ. ಆದರೆ ಇದು ಲೀಗ್​ ಕ್ರಿಕೆಟ್​ನಲ್ಲಿ ಎಂಬುದಷ್ಟೇ ವ್ಯತ್ಯಾಸ. ಹ್ಯಾಂಪ್‌ಶೈರ್ ಕ್ರಿಕೆಟ್ ಲೀಗ್‌ನ ಡಿವಿಷನ್ 6 ರ ಪಂದ್ಯದಲ್ಲಿ ಒಡಿಶಾಮ್ ಮತ್ತು ಗ್ರಾವೆಲ್ ಕ್ರಿಕೆಟ್ ಕ್ಲಬ್ ಮತ್ತು ಓವರ್ಟನ್ ಕ್ರಿಕೆಟ್ ಕ್ಲಬ್‌ ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟ್ ಮಾಡಿದ ಓವರ್ಟನ್ ಕ್ರಿಕೆಟ್ ಕ್ಲಬ್​ನ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಪರೇಡ್ ನಡೆಸಿದರು. ಉಳಿದ 2 ಬ್ಯಾಟ್ಸ್‌ಮನ್‌ಗಳು ಕೇವಲ 3 ರನ್ ಗಳಿಸಿದರು. ಇದಾಗ್ಯೂ ಓವರ್ಟನ್ ಒಟ್ಟು ಮೊತ್ತ 17 ರನ್ ಆಗಿದ್ದು ಅಚ್ಚರಿ. ಅಂದರೆ ಒಡಿಶಾಮ್ ತಂಡದ ಈ ಇಬ್ಬರು ಬೌಲರ್‌ಗಳು ಓವರ್‌ಟನ್‌ನ ಎಲ್ಲಾ 11 ವಿಕೆಟ್‌ಗಳನ್ನು ಪಡೆದರೂ, ಹೆಚ್ಚುವರಿಯಾಗಿ 14 ರನ್‌ಗಳನ್ನು ನೀಡಿದರು. ಇದರಿಂದಾಗಿ ಓವರ್ಟನ್ 3 ರನ್​ಗಳ ಬದಲಾಗಿ 17 ರನ್​ಗಳಿಸುವಂತಾಯಿತು.

ಒಡಿಶಾಮ್ ಮತ್ತು ಗ್ರಾವೆಲ್ ಕ್ರಿಕೆಟ್ ಕ್ಲಬ್ ಬೌಲರ್ ಸೋಫಿ ಕುಕ್ 5.3 ಓವರ್‌ಗಳಲ್ಲಿ 4 ರನ್‌ಗಳಿಗೆ 7 ವಿಕೆಟ್ ಪಡೆದರೆ, ಉಳಿದ 3 ವಿಕೆಟ್‌ಗಳನ್ನು 13 ರನ್ ನೀಡಿ ಜಾಯ್ ವ್ಯಾನ್ ಡೆರ್ ಫ್ಲೈಯರ್ ಪಡೆದರು. ಇದಾಗ್ಯೂ ಓವರ್ಟನ್‌ನ 11.3 ಓವರ್‌ಗಳ ಕಾಲ ಬ್ಯಾಟ್ ಮಾಡಿದ್ದು ವಿಶೇಷ. ಅಂದರೆ 11.3 ಓವರ್​ಗಳನ್ನು ಆಡಿದರೂ ಓವರ್ಟನ್ ಬ್ಯಾಟ್ಸ್​ಮನ್​ಗಳು ಕಲೆಹಾಕಿದ್ದು ಕೇವಲ 3 ರನ್​. ಇನ್ನುಳಿದ 14 ರನ್​ಗಳು ವೈಡ್-ನೋಬಾಲ್ ಮೂಲಕ ಬಂದಿದ್ದವು. 18 ರನ್​ಗಳ ಗುರಿ ಪಡೆದ ಒಡಿಶಾಮ್ ಮತ್ತು ಗ್ರಾವೆಲ್ ಕ್ರಿಕೆಟ್ ಕ್ಲಬ್ ತಂಡವು ಕೇವಲ 14 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪಂದ್ಯ: ಕೇವಲ 8 ರನ್​ಗೆ ಆಲೌಟ್

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:12 pm, Mon, 6 June 22