Virat Kohli: ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲಿದ್ದಾರಾ ವಿರಾಟ್ ಕೊಹ್ಲಿ?
Rohit Sharma: ರೋಹಿತ್ ಅವರ ಪ್ರದರ್ಶನ ಕೆಟ್ಟದಾಗಿದ್ದರೆ, ಅವರು ಕೆಟ್ಟ ಬ್ಯಾಟ್ಸ್‌ಮನ್ ಎಂದು ಅರ್ಥವಲ್ಲ. ಫಾರ್ಮ್ ಕಳೆದುಕೊಂಡಿದ್ದಾರೆ ಅಷ್ಟೇ.
ಟೀಮ್ ಇಂಡಿಯಾದ (Team India) ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಬಹಳ ದಿನಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆ. ಕೊಹ್ಲಿಯನ್ನು ಪ್ರಸ್ತುತ ಯುಗದ ಅತ್ಯುತ್ತಮ ಆಟಗಾರರೆಂದು ಪರಿಗಣಿಸಲಾಗಿದೆ. ಏಕೆಂದರೆ ಕೊಹ್ಲಿ ಈಗಾಗಲೇ 70 ಅಂತರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಒಂದು ಕಾಲದಲ್ಲಿ ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಸುಲಭವಾಗಿ ಮುರಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಅಬ್ಬರಿಸುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಸುನಿಲ್ ಗವಾಸ್ಕರ್ ಮತ್ತು ವಿವ್ ರಿಚರ್ಡ್ಸ್ ಅವರಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಸಹ ಕಳಪೆ ಫಾರ್ಮ್‌ನ ಅವಧಿಗಳನ್ನು ಕಂಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅಲ್ಲದೆ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯಲಿ ಎಂದು ಬಯಸುತ್ತೇನೆ ದಿನೇಶ್ ಲಾಡ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಕೊನೆಯ ಅಂತರರಾಷ್ಟ್ರೀಯ ಶತಕವು ನವೆಂಬರ್ 2019 ರಲ್ಲಿ ಮೂಡಿಬಂದಿತ್ತು. ಅಂದರೆ ಕೊಹ್ಲಿ ಶತಕ ಬಾರಿಸಿ 2 ವರ್ಷಗಳೇ ಕಳೆದಿವೆ. ಕೊಹ್ಲಿಯ 71ನೇ ಶತಕಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲೂ ಕೊಹ್ಲಿ ಅಭಿಮಾನಿಗಳು ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂ ಮುಂಬರುವ ಸರಣಿಗಳ ಮೂಲಕ ವಿರಾಟ್ ಕೊಹ್ಲಿ ಶತಕದ ಬರವನ್ನು ನೀಗಿಸಲಿದ್ದಾರೆ ಎಂಬ ನಿರೀಕ್ಷೆಯಿದೆ.
ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಕೋಚ್ ಹೇಳಿದ್ದೇನು? ಸಂವಾದದಲ್ಲಿ ಮಾತನಾಡಿದ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್, ರೋಹಿತ್ ಅವರ ಪ್ರದರ್ಶನ ಕೆಟ್ಟದಾಗಿದ್ದರೆ, ಅವರು ಕೆಟ್ಟ ಬ್ಯಾಟ್ಸ್‌ಮನ್ ಎಂದು ಅರ್ಥವಲ್ಲ. ಫಾರ್ಮ್ ಕಳೆದುಕೊಂಡಿದ್ದಾರೆ ಅಷ್ಟೇ. ಇದು ಎಲ್ಲಾ ಆಟಗಾರರಲ್ಲೂ ಕಂಡು ಬರುತ್ತದೆ. ಹೀಗಾಗಿ ರೋಹಿತ್ ಶರ್ಮಾ ಕೂಡ ಅತ್ಯುತ್ತಮವಾಗಿ ಕಂಬ್ಯಾಕ್ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಇನ್ನು ಹಿಟ್ಮ್ಯಾನ್ ರಜೆ ಮೇಲೆ ತೆರಳಿರುವ ನಿರ್ಧಾರವನ್ನು ಸಮರ್ಥಿಸಿಕೊಂಡ ದಿನೇಶ್ ಲಾಡ್, ಇಷ್ಟು ಕ್ರಿಕೆಟ್ ಆಡಿದ ನಂತರ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯಬೇಕು ಎಂದು ಕೋಚ್ ಹೇಳಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ ವಿಶ್ವ ದರ್ಜೆಯ ಆಟಗಾರ. ವಿಶ್ರಾಂತಿಯ ಬಳಿಕ ಅವರು ಕಂಬ್ಯಾಕ್ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.