ಸೊನ್ನೆ ಸುತ್ತಿದ 9 ಬ್ಯಾಟ್ಸ್‌ಮನ್‌ಗಳು, ಇಬ್ಬರಿಂದ 3 ರನ್:17 ರನ್ಗೆ ಆಲೌಟ್..!
Cricket Records: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಓವರ್ಟನ್ ಕ್ರಿಕೆಟ್ ಕ್ಲಬ್ನ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪೆರೇಡ್ ನಡೆಸಿದರು.
ಟಿ20 ಕ್ರಿಕೆಟ್ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವ ಅನೇಕ ಉದಾಹರಣೆಗಳಿವೆ. ಅದರಲ್ಲೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆ ಟರ್ಕಿ ದೇಶದ ಹೆಸರಿನಲ್ಲಿದೆ. 2019 ರಲ್ಲಿ ಚೆಕ್ ರಿಪಬ್ಲಿಕ್ ವಿರುದ್ದದ ಪಂದ್ಯದಲ್ಲಿ ಟರ್ಕಿ ತಂಡವು ಕೇವಲ 21 ರನ್ಗೆ ಆಲೌಟ್ ಆಗಿತ್ತು. ಇದೀಗ ಇದಕ್ಕಿಂತ ಕಡಿಮೆ ಮೊತ್ತಕ್ಕೆ ತಂಡವೊಂದು ಆಲೌಟ್ ಆಗಿದೆ. ಆದರೆ ಇದು ಲೀಗ್ ಕ್ರಿಕೆಟ್ನಲ್ಲಿ ಎಂಬುದಷ್ಟೇ ವ್ಯತ್ಯಾಸ. ಹ್ಯಾಂಪ್‌ಶೈರ್ ಕ್ರಿಕೆಟ್ ಲೀಗ್‌ನ ಡಿವಿಷನ್ 6 ರ ಪಂದ್ಯದಲ್ಲಿ ಒಡಿಶಾಮ್ ಮತ್ತು ಗ್ರಾವೆಲ್ ಕ್ರಿಕೆಟ್ ಕ್ಲಬ್ ಮತ್ತು ಓವರ್ಟನ್ ಕ್ರಿಕೆಟ್ ಕ್ಲಬ್ ಮುಖಾಮುಖಿಯಾಗಿದ್ದವು.
ಮೊದಲು ಬ್ಯಾಟ್ ಮಾಡಿದ ಓವರ್ಟನ್ ಕ್ರಿಕೆಟ್ ಕ್ಲಬ್ನ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಉಳಿದ 2 ಬ್ಯಾಟ್ಸ್‌ಮನ್‌ಗಳು ಕೇವಲ 3 ರನ್ ಗಳಿಸಿದರು. ಇದಾಗ್ಯೂ ಓವರ್ಟನ್ ಒಟ್ಟು ಮೊತ್ತ 17 ರನ್ ಆಗಿದ್ದು ಅಚ್ಚರಿ. ಅಂದರೆ ಒಡಿಶಾಮ್ ತಂಡದ ಈ ಇಬ್ಬರು ಬೌಲರ್‌ಗಳು ಓವರ್‌ಟನ್‌ನ ಎಲ್ಲಾ 11 ವಿಕೆಟ್‌ಗಳನ್ನು ಪಡೆದರೂ, ಹೆಚ್ಚುವರಿಯಾಗಿ 14 ರನ್‌ಗಳನ್ನು ನೀಡಿದರು. ಇದರಿಂದಾಗಿ ಓವರ್ಟನ್ 3 ರನ್ಗಳ ಬದಲಾಗಿ 17 ರನ್ಗಳಿಸುವಂತಾಯಿತು.
ಒಡಿಶಾಮ್ ಮತ್ತು ಗ್ರಾವೆಲ್ ಕ್ರಿಕೆಟ್ ಕ್ಲಬ್ ಬೌಲರ್ ಸೋಫಿ ಕುಕ್ 5.3 ಓವರ್‌ಗಳಲ್ಲಿ 4 ರನ್‌ಗಳಿಗೆ 7 ವಿಕೆಟ್ ಪಡೆದರೆ, ಉಳಿದ 3 ವಿಕೆಟ್‌ಗಳನ್ನು 13 ರನ್ ನೀಡಿ ಜಾಯ್ ವ್ಯಾನ್ ಡೆರ್ ಫ್ಲೈಯರ್ ಪಡೆದರು. ಇದಾಗ್ಯೂ ಓವರ್ಟನ್‌ನ 11.3 ಓವರ್‌ಗಳ ಕಾಲ ಬ್ಯಾಟ್ ಮಾಡಿದ್ದು ವಿಶೇಷ. ಅಂದರೆ 11.3 ಓವರ್ಗಳನ್ನು ಆಡಿದರೂ ಓವರ್ಟನ್ ಬ್ಯಾಟ್ಸ್‌ಮನ್‌ಗಳು ಕಲೆಹಾಕಿದ್ದು ಕೇವಲ 3 ರನ್. ಇನ್ನುಳಿದ 14 ರನ್ಗಳು ವೈಡ್-ನೋಬಾಲ್ ಮೂಲಕ ಬಂದಿದ್ದವು. 18 ರನ್ಗಳ ಗುರಿ ಪಡೆದ ಒಡಿಶಾಮ್ ಮತ್ತು ಗ್ರಾವೆಲ್ ಕ್ರಿಕೆಟ್ ಕ್ಲಬ್ ತಂಡವು ಕೇವಲ 14 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪಂದ್ಯ: ಕೇವಲ 8 ರನ್ಗೆ ಆಲೌಟ್
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:12 pm, Mon, 6 June 22