ರಣಜಿ ಟ್ರೋಫಿ ಮೊದಲ ಸುತ್ತು ಮುಕ್ತಾಯ: 10 ತಂಡಗಳಿಗೆ ಜಯ, ಎಂಟು ಪಂದ್ಯಗಳು ಡ್ರಾ, 1 ಪಂದ್ಯ ರದ್ದು

Ranji Trophy First Round: 2025-26 ರ ರಣಜಿ ಟ್ರೋಫಿಯ ಮೊದಲ ಸುತ್ತಿನಲ್ಲಿ 38 ತಂಡಗಳ ನಡುವೆ 19 ಪಂದ್ಯಗಳು ನಡೆದವು. ಇದರಲ್ಲಿ ಮೂರನೇ ದಿನದಂದು 3 ತಂಡಗಳು, ಹಾಗೂ ನಾಲ್ಕನೇ ದಿನದಂದು 4 ತಂಡಗಳು ಗೆಲುವು ಸಾಧಿಸಿದವು. ಎಂಟು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಯಿತು. ಈ ಸುತ್ತಿನ ಎಲ್ಲಾ ರೋಚಕ ಫಲಿತಾಂಶಗಳ ಸಂಪೂರ್ಣ ವಿವರ ಇಲ್ಲಿದೆ.

ರಣಜಿ ಟ್ರೋಫಿ ಮೊದಲ ಸುತ್ತು ಮುಕ್ತಾಯ: 10 ತಂಡಗಳಿಗೆ ಜಯ, ಎಂಟು ಪಂದ್ಯಗಳು ಡ್ರಾ, 1 ಪಂದ್ಯ ರದ್ದು
Ranji Trophy

Updated on: Oct 18, 2025 | 8:27 PM

2025-26 ರ ರಣಜಿ ಟ್ರೋಫಿಯ (Ranji Trophy 2025-26) ಮೊದಲ ಸುತ್ತಿನಲ್ಲಿ ಒಟ್ಟು 38 ತಂಡಗಳ ನಡುವೆ 19 ಪಂದ್ಯಗಳು ನಡೆದವು. ಇದರಲ್ಲಿ ಕೆಲವು ಪಂದ್ಯಗಳ ಫಲಿತಾಂಶ ಹೊರಬಿದ್ದರೆ, ಇನ್ನು ಕೆಲವು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು. ಮೂರನೇ ದಿನದಂದು ಮೂರು ತಂಡಗಳು ಜಯದ ನಗೆ ಬೀರಿದರೆ, ಕೊನೆಯ ದಿನದಂದು ಅಂದರೆ ಪಂದ್ಯದ 4ನೇ ದಿನದಂದು ಇತರ ನಾಲ್ಕು ತಂಡಗಳು ಗೆಲುವು ಸಾಧಿಸಿದವು. ಉಳಿದಂತೆ ಎಂಟು ಪಂದ್ಯಗಳು ಡ್ರಾಗೊಂಡರೆ, ಒಂದು ಪಂದ್ಯವನ್ನು ಮಳೆಯಿಂದಾಗಿ ಒಂದೇ ಒಂದು ಚೆಂಡು ಬೌಲ್ ಮಾಡದೆ ರದ್ದುಗೊಳಿಸಲಾಯಿತು.

ರಣಜಿ ಮೊದಲ ಸುತ್ತಿನ ಫಲಿತಾಂಶ ಹೀಗಿದೆ

ಎಲೈಟ್ ಗ್ರೂಪ್ ಎ

ಒಡಿಶಾ vs ಬರೋಡಾ

ದಿನ 4: ಬರೋಡಾಗೆ 7 ವಿಕೆಟ್‌ಗಳ ಜಯ

ಆಂಧ್ರ vs ಉತ್ತರ ಪ್ರದೇಶ

ದಿನ 4: ಪಂದ್ಯ ಡ್ರಾ

ಜಾರ್ಖಂಡ್ vs ತಮಿಳುನಾಡು

ದಿನ 4: ಜಾರ್ಖಂಡ್ ಇನ್ನಿಂಗ್ಸ್ ಮತ್ತು 114 ರನ್‌ಗಳಿಂದ ಜಯಗಳಿಸಿತು.

ವಿದರ್ಭ vs ನಾಗಾಲ್ಯಾಂಡ್

ದಿನ 4: ವಿದರ್ಭ ಇನ್ನಿಂಗ್ಸ್ ಮತ್ತು 179 ರನ್‌ಗಳಿಂದ ಜಯ (ದಿನ 3)

ಎಲೈಟ್ ಗ್ರೂಪ್ ಬಿ

ಮಹಾರಾಷ್ಟ್ರ vs ಕೇರಳ

ದಿನ 4: ಪಂದ್ಯ ಡ್ರಾ

ಗೋವಾ vs ಚಂಡೀಗಢ

ದಿನ 4: ಗೋವಾ ಇನ್ನಿಂಗ್ಸ್ ಮತ್ತು 75 ರನ್‌ಗಳಿಂದ ಜಯಗಳಿಸಿತು.

ಪಂಜಾಬ್ vs ಮಧ್ಯಪ್ರದೇಶ

ದಿನ 4: ಪಂದ್ಯ ಡ್ರಾ

ಕರ್ನಾಟಕ vs ಸೌರಾಷ್ಟ್ರ

ದಿನ 4: ಪಂದ್ಯ ಡ್ರಾ

ಎಲೈಟ್ ಗ್ರೂಪ್ ಸಿ

ಉತ್ತರಾಖಂಡ vs ಬಂಗಾಳ

ದಿನ 4: ಬಂಗಾಳಕ್ಕೆ 8 ವಿಕೆಟ್‌ಗಳ ಜಯ.

ಹರಿಯಾಣ vs ರೈಲ್ವೇಸ್

ದಿನ 4: ಹರಿಯಾಣಕ್ಕೆ 96 ರನ್‌ಗಳ ಜಯ (3ನೇ ದಿನ)

ಅಸ್ಸಾಂ vs ಗುಜರಾತ್

ದಿನ 4: ಪಂದ್ಯ ಡ್ರಾ

ಸರ್ವಿಸಸ್ vs ತ್ರಿಪುರ

ದಿನ 4: ಸರ್ವಿಸಸ್ ತಂಡಕ್ಕೆ ಇನ್ನಿಂಗ್ಸ್ ಮತ್ತು 20 ರನ್‌ಗಳ ಗೆಲುವು.

ಎಲೈಟ್ ಗ್ರೂಪ್ ಡಿ

ದೆಹಲಿ vs ಹೈದರಾಬಾದ್

ದಿನ 4: ಪಂದ್ಯ ಡ್ರಾ

ಛತ್ತೀಸ್‌ಗಢ vs ರಾಜಸ್ಥಾನ್

ದಿನ 4: ರಾಜಸ್ಥಾನಕ್ಕೆ 9 ವಿಕೆಟ್‌ಗಳ ಜಯ.

ಮುಂಬೈ vs ಜಮ್ಮು ಮತ್ತು ಕಾಶ್ಮೀರ

ದಿನ 4: ಮುಂಬೈಗೆ 35 ರನ್‌ಗಳ ಜಯ

ಹಿಮಾಚಲ ಪ್ರದೇಶ vs ಪುದುಚೇರಿ

ದಿನ 4: ಪಂದ್ಯ ಡ್ರಾ

ಪ್ಲೇಟ್ ಗುಂಪು

ಸಿಕ್ಕಿಂ vs ಮಣಿಪುರ

ದಿನ 4: ಪಂದ್ಯ ಡ್ರಾ

ಮೇಘಾಲಯ vs ಮಿಜೋರಾಂ

4ನೇ ದಿನ: ಮಳೆಯಿಂದಾಗಿ ಪಂದ್ಯ ರದ್ದು.

ಅರುಣಾಚಲ ಪ್ರದೇಶ vs ಬಿಹಾರ

ದಿನ 4: ಬಿಹಾರ ತಂಡಕ್ಕೆ ಇನ್ನಿಂಗ್ಸ್ ಮತ್ತು 165 ರನ್‌ಗಳ ಗೆಲುವು (ದಿನ 3)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ