AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್​ಗೆ 8 ತಂಡಗಳು ಎಂಟ್ರಿ

2026 ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಕ್ವಾರ್ಟರ್‌ಫೈನಲ್‌ಗೆ 8 ತಂಡಗಳು ಪ್ರವೇಶಿಸಿವೆ. ಮಳೆಯಿಂದಾಗಿ ಗ್ರೂಪ್ ಎ ನಿಂದ ನೇಪಾಳ, ಅಫ್ಘಾನಿಸ್ತಾನ ಹಾಗೂ ಗ್ರೂಪ್ ಬಿ ನಿಂದ ಮಲೇಷ್ಯಾ, ಹಾಂಗ್ ಕಾಂಗ್ ಮುನ್ನಡೆದಿವೆ. ಆತಿಥೇಯ ಜಪಾನ್ ಹೊರಬಿದ್ದಿದೆ. ಭಾರತವು ಸೆಪ್ಟೆಂಬರ್ 28 ರಂದು ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಅಕ್ಟೋಬರ್‌ನಲ್ಲಿ ನಡೆಯಲಿವೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್​ಗೆ 8 ತಂಡಗಳು ಎಂಟ್ರಿ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Sep 26, 2026 | 7:29 PM

Share

2026 ರ ಐಚಿ ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ನಡೆಯಲಿರುವ ಪುರುಷರ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ ಸುತ್ತಿಗೆ 8 ತಂಡಗಳು ಎಂಟ್ರಿಕೊಟ್ಟಿವೆ. ಸೆಪ್ಟೆಂಬರ್ 26 ರ ಶನಿವಾರ ಮಳೆಯಿಂದಾಗಿ ಗ್ರೂಪ್ ಎ ಪಂದ್ಯಗಳು ರದ್ದಾದ ನಂತರ ನೇಪಾಳ ಮತ್ತು ಅಫ್ಘಾನಿಸ್ತಾನ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರೆ, ಇತ್ತ ಆತಿಥೇಯ ಜಪಾನ್ ಗ್ರೂಪ್ ಬಿ ನಿಂದ ಹೊರಬಿದ್ದಿದೆ. ಇನ್ನು ಬಿ ಗುಂಪಿನಿಂದ ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಂಡಗಳು ಕ್ವಾರ್ಟರ್‌ಫೈನಲ್​ಗೆ ಅರ್ಹತೆ ಪಡೆದುಕೊಂಡಿವೆ.

ಮಳೆಯಿಂದ ಪಂದ್ಯಗಳು ರದ್ದು

ಗ್ರೂಪ್ ಎ ನ ಅಂತಿಮ ಪಂದ್ಯದಲ್ಲಿ ನೇಪಾಳ ಮತ್ತು ಜಪಾನ್ ಮುಖಾಮುಖಿಯಾಗಿದ್ದವು. ನಿಶಿನ್‌ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ, 15 ಓವರ್‌ಗಳಲ್ಲಿ 149 ರನ್ ಕಲೆಹಾಕಿತು. ತಂಡದ ಪರ ಸಂದೀಪ್ ಜೋರಾ ಮತ್ತು ಲೋಕೇಶ್ ಬಾಮ್ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು. ಆದರೆ ಈ ಹಂತದಲ್ಲಿ ಮಳೆ ಬಂದಿತು. ಅಲ್ಲದೆ ಮಳೆಯಿಂದಾಗಿ ಜಪಾನ್‌ನ ಇನ್ನಿಂಗ್ಸ್ ಕೂಡ ಪ್ರಾರಂಭವಾಗಲಿಲ್ಲ. ಹೀಗಾಗಿ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.

ಈ ಫಲಿತಾಂಶವು ನೇಪಾಳ ಮತ್ತು ಅಫ್ಘಾನಿಸ್ತಾನಕ್ಕೆ ನೇರ ಲಾಭವನ್ನು ತಂದುಕೊಟ್ಟಿತು. ನೇಪಾಳ ಈ ಹಿಂದೆ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಗ್ರೂಪ್ ಎ ನಲ್ಲಿ ಕ್ವಾರ್ಟರ್ ಫೈನಲ್​ ರೇಸ್​ನಲ್ಲಿ ಮೇಲುಗೈ ಸಾಧಿಸಿತ್ತು. ಹೀಗಾಗಿ ಜಪಾನ್‌ ಕ್ವಾರ್ಟರ್‌ಫೈನಲ್ ರೇಸ್​ನಲ್ಲಿ ಉಳಿಯಬೇಕಾದರೆ ನೇಪಾಳದ ವಿರುದ್ಧ ಗೆಲ್ಲಲೇಬೇಕಿತ್ತು. ಆದರೆ ಮಳೆ ಜಪಾನ್ ತಂಡದ ಭರವಸೆಯನ್ನು ಕೊನೆಗೊಳಿಸಿತು.

ಬಿ ಗುಂಪಿನಲ್ಲಿ, ಮಲೇಷ್ಯಾ ಮತ್ತು ಓಮನ್ ನಡುವಿನ ಪಂದ್ಯವು ಮಳೆಯಿಂದಾಗಿ ಒಂದು ಚೆಂಡು ಕೂಡ ಎಸೆಯದೆ ರದ್ದಾಯಿತು. ಈ ಫಲಿತಾಂಶವು ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುವುದನ್ನು ಖಚಿತಪಡಿಸಿತು. ಇತ್ತ ಓಮನ್ ತಂಡದ ಅಭಿಯಾನ ಕೊನೆಗೊಂಡಿತು.

ಕ್ವಾರ್ಟರ್ ಫೈನಲ್ ಸುತ್ತು

ಪ್ರಾಥಮಿಕ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದ್ದು, ಇದೀಗ ಕ್ವಾರ್ಟರ್ ಫೈನಲ್ ಪಂದ್ಯಗಳು ಶುರುವಾಗಲಿವೆ. ಈ ಸುತ್ತಿನಲ್ಲಿ ಭಾರತವು ಸೆಪ್ಟೆಂಬರ್ 28 ರ ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಅದೇ ದಿನ ಬೆಳಿಗ್ಗೆ 5:30 ಕ್ಕೆ ಮುಖಾಮುಖಿಯಾಗಲಿವೆ. ಶ್ರೀಲಂಕಾ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳವನ್ನು ಎದುರಿಸಲಿದೆ. ಇತ್ತ ಬಾಂಗ್ಲಾದೇಶ ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ಸೆಪ್ಟೆಂಬರ್ 29 ರ ಮಂಗಳವಾರ ನಡೆಯಲಿವೆ. ಇನ್ನು ಅಕ್ಟೋಬರ್ 1 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನಂತರ ಅಕ್ಟೋಬರ್ 3 ರಂದು ಚಿನ್ನ ಮತ್ತು ಕಂಚಿನ ಪದಕದ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳನ್ನು ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆಡಲಾಗುತ್ತದೆ.

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 4ನೇ ಸ್ವರ್ಣ; ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಕಬಡ್ಡಿ ತಂಡ..!

ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ

  • ಸೆಪ್ಟೆಂಬರ್ 28: ಪಾಕಿಸ್ತಾನ vs ಹಾಂಗ್ ಕಾಂಗ್, ಬೆಳಿಗ್ಗೆ 5.30
  • ಸೆಪ್ಟೆಂಬರ್ 28: ಭಾರತ vs ಅಫ್ಘಾನಿಸ್ತಾನ, ಬೆಳಿಗ್ಗೆ 10 ಗಂಟೆ
  • ಸೆಪ್ಟೆಂಬರ್ 29: ಶ್ರೀಲಂಕಾ vs ನೇಪಾಳ, ಬೆಳಿಗ್ಗೆ 5.30
  • ಸೆಪ್ಟೆಂಬರ್ 29: ಬಾಂಗ್ಲಾದೇಶ vs ಮಲೇಷ್ಯಾ, ಬೆಳಿಗ್ಗೆ 10 ಗಂಟೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sat, 26 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ