AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 52 ಎಸೆತಗಳಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ

2026ರ ಮಹಿಳಾ ಏಷ್ಯಾಕಪ್‌ನ ಒಂಬತ್ತನೇ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಸತತ ಮೂರನೇ ಜಯ ಸಾಧಿಸಿ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಪಾಕಿಸ್ತಾನ ಕೇವಲ 55 ರನ್‌ಗಳಿಗೆ ಆಲೌಟ್ ಆಗಿತ್ತು, ಈ ಗುರಿಯನ್ನು ಭಾರತ ಕೇವಲ 3 ವಿಕೆಟ್ ಕಳೆದುಕೊಂಡು 8.2 ಓವರ್‌ಗಳಲ್ಲಿ ಸುಲಭವಾಗಿ ಬೆನ್ನಟ್ಟಿತು.

ಕೇವಲ 52 ಎಸೆತಗಳಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ
ಭಾರತ Vs ಪಾಕಿಸ್ತಾನ
ಪೃಥ್ವಿಶಂಕರ
|

Updated on:Sep 05, 2026 | 10:43 PM

Share

2026 ರ ಮಹಿಳಾ ಏಷ್ಯಾಕಪ್‌ನ ಒಂಬತ್ತನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಸತತ 3ನೇ ಗೆಲುವು ದಾಖಲಿಸುವ ಮೂಲಕ ಅಜೇಯ ತಂಡವಾಗಿ ಸೆಮಿಫೈನಲ್​ಗೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಕೇವಲ 55 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 8.2 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

ಪಾಕ್ ವಿರುದ್ಧ ಭಾರತದ ಪಾರುಪತ್ಯ

ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸತತ ಐದನೇ ಟಿ20 ಗೆಲುವಿನ ಗುರಿ ಹೊಂದಿದ್ದರೆ, ಇತ್ತ ಪಾಕಿಸ್ತಾನ ಭಾರತದ ವಿರುದ್ಧದ ಗೆಲುವಿನ ಬರವನ್ನು ಕೊನೆಗೊಳಿಸುವ ಇರಾದೆಯಲ್ಲಿತ್ತು. ಅಕ್ಟೋಬರ್ 2022 ರಿಂದ ಇದುವರೆಗೆ ಭಾರತದ ವಿರುದ್ಧ ನಡೆದಿದ್ದ ಎಲ್ಲಾ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನ ಸೋತಿತ್ತು. ಹೀಗಾಗಿ ಈ ಪಂದ್ಯವನ್ನು ಗೆದ್ದು ಸೋಲಿನ ಸರಪಳಿ ಮುರಿಯುವ ಕನಸು ಕಂಡಿದ್ದ ಪಾಕ್ ತಂಡವನ್ನು ಟೀಂ ಇಂಡಿಯಾ ಹೀನಾಯವಾಗಿ ಸೋಲಿಸಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಿದರು ಎಂದರೆ ತಪ್ಪಲ್ಲ.

ಜೀವದಾನಗಳ ಲಾಭ ಪಡೆಯದ ಪಾಕ್

ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಆರಂಭಿಕರಾದ ಮುನೀಬಾ ಅಲಿ ಮತ್ತು ಶಾವಲ್ ಜುಲ್ಫಿಕರ್ 4.2 ಓವರ್‌ಗಳಲ್ಲಿ 27 ರನ್‌ಗಳನ್ನು ಸೇರಿಸುವ ಮೂಲಕ ಪಾಕಿಸ್ತಾನಕ್ಕೆ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಈ ಅವಧಿಯಲ್ಲಿ ಪ್ರತಿಕಾ ರಾವಲ್ ಎರಡೂ ಬಾರಿ ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟ ಕಾರಣದಿಂದ ಮುನೀಬಾಗೆ ಎರಡು ಜೀವದಾನಗಳು ದಕ್ಕಿದವು. ಆದಾಗ್ಯೂ, ಮುನೀಬಾ ಅಥವಾ ಪಾಕಿಸ್ತಾನ ತಂಡ ಈ ಆರಂಭವನ್ನು ಬಳಸಿಕೊಳ್ಳಲು ಮತ್ತು ಬಲವಾದ ಮೊತ್ತವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ.

ಮಿಂಚಿದ ಭಾರತದ ಸ್ಪಿನ್ನರ್​ಗಳು

ಶ್ರೀ ಚರಣಿ, ದೀಪ್ತಿ ಶರ್ಮಾ, ಪ್ರೇಮಾ ರಾವತ್ ಮತ್ತು ಶಫಾಲಿ ವರ್ಮಾ ಅವರನ್ನೊಳಗೊಂಡ ಭಾರತೀಯ ಸ್ಪಿನ್ ದಾಳಿಯು ಪಾಕಿಸ್ತಾನವನ್ನು ಕೇವಲ 55 ರನ್‌ಗಳಿಗೆ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಇದರರ್ಥ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ನಂತರ, ಪಾಕಿಸ್ತಾನ ಮುಂದಿನ ಒಂಬತ್ತು ವಿಕೆಟ್‌ಗಳನ್ನು ಕೇವಲ 28 ರನ್‌ಗಳಿಗೆ ಕಳೆದುಕೊಂಡಿತು. ಈ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆ ಬರೆಯಿತು.

35 ರನ್​​ಗಳಿಗೆ 6 ವಿಕೆಟ್..! ಭಾರತದ ಬೌಲಿಂಗ್​ಗೆ​ ಪಾಕಿಸ್ತಾನ ವಿಲವಿಲ

ಫಾತಿಮಾ ಸನಾ ಹೋರಾಟ ವ್ಯರ್ಥ

ಈ ಗುರಿ ಬೆನ್ನಟ್ಟಿದ ಭಾರತದ ಪರ ಶಫಾಲಿ ವರ್ಮಾ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಬೇಗನೇ ಗೆಲುವಿನ ದಡ ಮುಟ್ಟಿಸುವ ಸುಳಿವು ನೀಡಿದರು. ಆದರೆ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ತಮ್ಮ ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಿ ಎರಡು ಓವರ್‌ಗಳ ಒಳಗೆ ಶಫಾಲಿ, ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತವನ್ನು ಸ್ವಲ್ಪ ತೊಂದರೆಗೆ ಸಿಲುಕಿಸಿದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ (18) ಮತ್ತು ದೀಪ್ತಿ ಶರ್ಮಾ (12) ಒಟ್ಟಾಗಿ 8.4 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Sat, 5 September 26

Follow Us