IND vs PAK: ಟೀಮ್ ಇಂಡಿಯಾ ಮಾಟಮಂತ್ರದಿಂದ ಗೆದ್ದಿದ್ದಾರೆ: ಪಾಕ್ ಮಾಧ್ಯಮದ ಚರ್ಚೆ

India vs Pakistan: ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಪಾಕಿಸ್ತಾನ್ ತಂಡಕ್ಕೆ ಟೀಮ್ ಇಂಡಿಯಾ ಆಘಾತ ನೀಡಿದೆ. ಈ ಸೋಲಿನ ಆಘಾತವನ್ನು ಅರಗಿಸಿಕೊಳ್ಳಲು ಪಾಕಿಸ್ತಾನದ ಕೆಲವರಿಗೆ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಸಾಕ್ಷಿ ಪಾಕಿಸ್ತಾನದಲ್ಲಿ ನಡೆದ ಪೋಸ್ಟ್ ಮ್ಯಾಚ್ ಚರ್ಚೆ. ಈ ಚರ್ಚೆಯಲ್ಲಿ ಟೀಮ್ ಇಂಡಿಯಾ ಮಾಟಮಂತ್ರದಿಂದ ಗೆದ್ದಿದ್ದಾರೆ ಎಂದು ಆರೋಪಿಸಲಾಗಿದೆ.

IND vs PAK: ಟೀಮ್ ಇಂಡಿಯಾ ಮಾಟಮಂತ್ರದಿಂದ ಗೆದ್ದಿದ್ದಾರೆ: ಪಾಕ್ ಮಾಧ್ಯಮದ ಚರ್ಚೆ
India Vs Pakistan

Updated on: Feb 25, 2025 | 2:30 PM

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಕಲೆಹಾಕಿದ್ದು ಕೇವಲ 241 ರನ್​ಗಳನ್ನು ಮಾತ್ರ. ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 42.3 ಓವರ್​ಗಳಲ್ಲಿ ಚೇಸ್ ಮಾಡಿ ಗೆದ್ದಿದೆ. ಟೀಮ್ ಇಂಡಿಯಾದ ಈ ಭರ್ಜರಿ ಗೆಲುವಿನ ಬಳಿಕ ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ನಡೆದ ವಿಲಕ್ಷಣ ಚರ್ಚೆಯೊಂದು ಇದೀಗ ಭಾರೀ ವೈರಲ್ ಆಗಿದೆ.

ಪಾಕಿಸ್ತಾನ್ ತಂಡದ ಸೋಲಿನೊಂದಿಗೆ ಶುರುವಾದ ಈ ಚರ್ಚೆಯಲ್ಲಿ ಕಾಣಿಸಿಕೊಂಡ ಪ್ಯಾನೆಲ್​ಗಳು ಆಘಾತಕಾರಿ ಮತ್ತು ವಿಲಕ್ಷಣ ಆರೋಪಗಳನ್ನು ಮಾಡಿರುವುದೇ ಅಚ್ಚರಿ. ಅದರಲ್ಲಿ ಒಬ್ಬರು ಭಾರತವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ 22 ಹಿಂದೂ ಪುರೋಹಿತರನ್ನು (ಪಂಡಿತರು) ಮಾಟಮಂತ್ರ ಮಾಡಲು ಕಳುಹಿಸಿದೆ. ಇದರಿಂದ ಪಾಕಿಸ್ತಾನ್ ಆಟಗಾರರ ಗಮನವನ್ನು ಬೇರೆಡೆಗೆ ಸೆಳೆಯಿತು ಎಂದಿದ್ದಾರೆ.

ಇನ್ನು ಮತ್ತೊಬ್ಬ ಪ್ಯಾನೆಲಿಸ್ಟ್ ಭಾರತ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಲು ಇದೇ ಕಾರಣ ಎಂದು ಸೂಚಿಸಿದರು. ಏಕೆಂದರೆ ಪಂದ್ಯಕ್ಕೂ ಮುನ್ನ ಅವರಿಗೆ ಪೂಜೆ ಮಾಡಬೇಕಿತ್ತು. ಪಾಕಿಸ್ತಾನದಲ್ಲಿ ನಡೆದರೆ ಅದು ಸಾಧ್ಯವಿಲ್ಲ. ದುಬೈನಲ್ಲಿ ನಡೆದ ಪಂದ್ಯಕ್ಕೂ ಮುನ್ನ ದಿನ ಏಳು ಪುರೋಹಿತರು ಮೈದಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಪಾಕಿಸ್ತಾನ್ ಮಾಧ್ಯಮದ ವಿತಂಡವಾದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ರಚಿನ್ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆಯೇ ಉಡೀಸ್

ಕಳೆದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾಗೆ ಐಸಿಸಿ ವಿಶೇಷ ಚೆಂಡುಗಳನ್ನು ನೀಡುತ್ತಿದೆ. ಹೀಗಾಗಿ ಭಾರತೀಯ ಬೌಲರ್​ಗಳು ಯಶಸ್ಸು ಗಳಿಸುತ್ತಿದ್ದಾರೆ ಎಂದು ಪಾಕ್ ತಂಡದ ಮಾಜಿ ಆಟಗಾರ ಹಸನ್ ರಾಜಾ ಲೈವ್ ಚರ್ಚೆಯಲ್ಲಿ ಆರೋಪಿಸಿದ್ದಾರೆ. ಇದೀಗ ಪಾಕಿಸ್ತಾನ್ ಮಾಧ್ಯಮದಲ್ಲಿ ಭಾರತ ತಂಡವು ಮಾಟಮಂತ್ರದಿಂದ ಗೆದ್ದಿದೆ ಎನ್ನುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.