ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 14ನೇ ಆವೃತ್ತಿಯ 40ನೇ ಪಂದ್ಯದಲ್ಲಿಂದು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲುವೊಂದು ಅನಿವಾರ್ಯವಾಗಿರುವ ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (SRH vs RR) ತಂಡವನ್ನು ಎದುರಿಸಲಿದೆ. ಒಂಬತ್ತು ಪಂದ್ಯಗಳಲ್ಲಿ ಏಕೈಕ ಗೆಲುವು ಕಂಡಿರುವ ಹೈದರಾಬಾದ್ಗೆ ಇದೊಂದು ಔಪಚಾರಿಕ ಪಂದ್ಯ. ಆದ್ರೆ, ಒಂಬತ್ತು ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಕಂಡು 8 ಅಂಕ ಸಂಪಾದಿಸಿರುವ ಆರ್ಆರ್ ತಂಡಕ್ಕೆ ಗೆದ್ದರೆ ಪ್ಲೇ ಆಫ್ ಹಾದಿ ಜೀವಂತವಾಗಿರಲಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಮಾಡು ಇಲ್ಲವೇ ಮಡಿ ಪಂದ್ಯ ಆಡಲಿರುವ ರಾಜಸ್ಥಾನಕ್ಕೆ ಇಂಜುರಿಯೇ ದೊಡ್ಡ ಸಮಸ್ಯೆ ಆಗಿದೆ. ಸ್ಫೋಟಕ ಬ್ಯಾಟರ್ ಎವಿನ್ ಲೆವಿಸ್ ಹಾಗೂ ಆಲ್ರೌಂಡರ್ ಕ್ರಿಸ್ ಮೊರೀಸ್ ಗಾಯಕ್ಕೆ ತುತ್ತಾಗಿದ್ದರಿಂದ ಕಳೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಇವರು ಇಂದಿನ ಪಂದ್ಯಕ್ಕೆ ಲಭ್ಯರಾದರೆ ತಂಡ ಬಲಿಷ್ಠವಾಗಿ ಗೋಚರಿಸಲಿದೆ.
ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಲ್ಯಾಮ್ ಲಿವಿಂಗ್ಸ್ಟೊನ್ ಉತ್ತಮ ಆರಂಭ ಕೊಡಬೇಕಿದೆ. ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಲೆವಿಸ್ ಇಂಜುರಿಯಿಂದ ಗುಣಮುಖರಾದರೆ ಇವರಿಗೆ ಸ್ಥಾನ ಖಚಿತ. ಮಹಿಪಾಲ್ ಲುಮ್ರೋರ್, ರಿಯಾನ್ ಪರಾಗ್ ಜವಾಬ್ದಾರಿಯಿಂದ ಬ್ಯಾಟ್ ಬೀಸಬೇಕಿದೆ. ರಾಹುಲ್ ತೇವಾಟಿಯ ಮ್ಯಾಚಿಕ್ ನಡೆಯುತ್ತಿಲ್ಲ. ಕಾರ್ತಿಕ್ ತ್ಯಾಗಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇವರಿಗೆ ಚೇತನ್ ಸಕರಿಯಾ ಸಾಥ್ ನೀಡಬೇಕಿದೆ.
ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ಪ್ರತಿಷ್ಠೆಗಾದರೂ ಇಂದಿನ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ. ತಂಡದಲ್ಲಿ ಸ್ವತಃ ನಾಯಕನೇ ಸೇರಿ ಯಾವೊಬ್ಬ ಬ್ಯಾಟರ್ ಫಾರ್ಮ್ನಲ್ಲಿ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ ತಂಡಕ್ಕ ನೆರವಾಗುತ್ತಿಲ್ಲ.
ತೀರಾ ಕಳಪೆ ಪ್ರದರ್ಶನ ತೋರಿರುವ ಕೇದರ್ ಜಾಧವ್ ಇಂದಿನ ಪಂದ್ಯಕ್ಕೆ ಅನುಮಾನ ಇವರ ಬದಲು ವಿರಾಟ್ ಸಿಂಗ್ ಅಥವಾ ಪ್ರಿಯಂ ಗರ್ಗ್ ಕಣಕ್ಕಿಳಿರುವ ಸಾಧ್ಯತೆ ಇದೆ. ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್ರಂತಹ ಅನುಭವಿಗಳು ತಂಡದಲ್ಲಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ 14 ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ 7 ಹಾಗೂ ರಾಜಸ್ಥಾನ್ ರಾಯಲ್ಸ್ ಕೂಡ ಏಳು ಪಂದ್ಯಗಳಲ್ಲಿ ಗೆಲುವು ಕಂಡಿದೆ.
IPL 2021: ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಹರ್ಷಲ್! ಆರ್ಸಿಬಿ ಪರ ಈ ಸಾಧನೆ ಮಾಡಿದ 3ನೇ ಬೌಲರ್
(40th match of IPL 2021 as Sunrisers Hyderabad will lock horns with Rajasthan Royals )