ಫಾರ್ಮ್ನ ಉತ್ತುಂಗದಲ್ಲಿದ್ದ ವೇಳೆ ಬ್ರೆಟ್ ಲೀ (Brett Lee) ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಭಯಂಕರ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ತಮ್ಮ ಮಾರಾಕ ಬೌಲಿಂಗ್ನಿಂದ ಎದುರಾಳಿ ಬ್ಯಾಟರ್ಗಳಿಗೆ ಸಿಂಹಸ್ವಪ್ನವಾಗುತ್ತಿದ್ದ ಬ್ರೆಟ್ ಲೀ ಅದೇಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಕಾಂಗರೂಗಳ ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ 45 ವರ್ಷ ವಯಸ್ಸಿನ ಬ್ರೆಟ್ ಲೀ ಪ್ರಸ್ತುತ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ವರ್ಲ್ಡ್ ಜೈಂಟ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯನ್ ವೇಗಿ ತಮ್ಮ ಗತಕಾಲದ ವೈಭವವನ್ನು ಮತ್ತೊಮ್ಮೆ ಮರುಕಳಿಸಿದ್ದಾರೆ. ಅಲ್ ಅಮರತ್‌ನಲ್ಲಿ ಇಂಡಿಯಾ ಮಹಾರಾಜಸ್ ವಿರುದ್ಧ ಕೊನೆಯ ಓವರ್ ಅನ್ನು ಅದ್ಭುತವಾಗಿ ಬೌಲ್ ಮಾಡಿ ತಮ್ಮ ತಂಡಕ್ಕೆ ಗೆಲುವು ತಂದಿತ್ತಿದ್ದಾರೆ.
ಗೆಲುವಿಗಾಗಿ 229 ರನ್‌ಗಳ ಗುರಿ ಬೆನ್ನತ್ತಿದ ಇಂಡಿಯಾ ಮಹಾರಾಜ ತಂಡ ಗೆಲುವಿನ ನಿರೀಕ್ಷೆಯಲ್ಲಿತ್ತು. 49 ಓವರ್‌ಗಳ ಅಂತ್ಯದಲ್ಲಿ, ಕ್ರೀಸ್‌ನಲ್ಲಿ ಇರ್ಫಾನ್ ಪಠಾಣ್ ಮತ್ತು ರಜತ್ ಭಾಟಿಯಾ ಬ್ಯಾಟಿಂಗ್ನಲ್ಲಿದ್ದರು. ಇಂಡಿಯಾ ಮಹಾರಾಜಸ್ ಅಂತಿಮ ಆರು ಎಸೆತಗಳಲ್ಲಿ ಕೇವಲ 8 ರನ್‌ಗಳ ಅಗತ್ಯವಿತ್ತು. ಆದಾಗ್ಯೂ, ಬ್ರೆಟ್ ಲೀ ತಮ್ಮ ಸಮಯೋಜಿತ ಬೌಲಿಂಗ್ನಲ್ಲಿ ಭಾರತದ ಪರವಿದ್ದ ಗೆಲುವಿನ ಮಾಲೆಯನ್ನ ತಮ್ಮತ್ತ ವಾಲಿಸಿಕೊಂಡರು.
ಅಂತಿಮ ಓವರ್ ರೋಚಕತೆ
ಅಂತಿಮ ಓವರ್ ಬೌಲ್ ಮಾಡಲು ಬಂದ ಬ್ರೆಟ್ ಲೀ ಮೊದಲ ಎಸೆತವನ್ನು ಇರ್ಫಾನ್ ಪಠಾಣ್‌ಗೆ ವೈಡ್ ಬೌಲಿಂಗ್ ಮಾಡಿದರು. ಇದು ಇಂಡಿಯಾ ಮಹಾರಾಜ ತಂಡಕ್ಕೆ ಗುರಿಯನ್ನು ಇನ್ನಷ್ಟು ಸುಲಭಗೊಳಿಸಿತು. ಮುಂದಿನ ಎಸೆತದಲ್ಲಿ, ಇರ್ಫಾನ್ ಪಠಾಣ್ ಲೀ ಅವರ ಎಸೆತವನ್ನು ಪಾರ್ಕ್‌ನಿಂದ ಹೊರಗೆ ಸ್ಮ್ಯಾಶ್ ಮಾಡಲು ಪ್ರಯತ್ನಿಸಿದರು. ಆದರೆ ಮೊರ್ನೆ ಮೊರ್ಕೆಲ್ ಉತ್ತಮ ಕ್ಯಾಚ್ ಪಡೆಯುವ ಮೂಲಕ ಪಠಾಣ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
ರಜತ್ ಭಾಟಿಯಾ ಮುಂದಿನ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಕಡೆ ಬಾರಿಸಿದರು. ಆದರೆ ಅಲ್ಲಿ ಫೀಲ್ಡರ್ ಇದ್ದ ಕಾರಣ ಬ್ರೆಟ್ ಲೀಗೆ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆಯುವ ಅವಕಾಶವಿತ್ತು. ಆದರೆ ಈ ಬಾರಿ ಮೋರ್ಕೆಲ್ಗೆ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ.
ನಂತರ ಇಂಡಿಯಾ ಮಹಾರಾಜ ತಂಡಕ್ಕೆ ಅಂತಿಮ ನಾಲ್ಕು ಎಸೆತಗಳಲ್ಲಿ ಆರು ರನ್‌ಗಳ ಅಗತ್ಯವಿತ್ತು. ಬ್ರೆಟ್ ಲೀ ವೈಡ್, ಫುಲ್-ಲೆಂಗ್ತ್ ಎಸೆತಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಭಾರತದ ಆವಿಷ್ಕರ್ ಸಾಲ್ವಿಗೆ ಮುಂದಿನ ಎರಡು ಎಸೆತಗಳಲ್ಲಿ ರನ್ ಕದಿಯಲು ಸಾಧ್ಯವಾಗಲಿಲ್ಲ. ನಂತರ ಎರಡು ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ, ಸಾಲ್ವಿ ಮತ್ತೊಮ್ಮೆ ರನ್ ಕದಿಯುವಲ್ಲಿ ವಿಫಲರಾದರು. ಹೀಗಾಗಿ ರಜತ್ ಭಾಟಿಯಾ ಸಿಂಗಲ್ ಕದಿಯಲು ಪ್ರಯತ್ನಿಸಿದರು ಆದರೆ ವಿಕೆಟ್‌ಕೀಪರ್‌ನಿಂದ ನೇರ ಸ್ಟಂಪಿಗ್ ಅವರ ಆಟವನ್ನು ಕೊನೆಗೊಳಿಸಿತು.
ಕೊನೆಯ ಬಾಲ್‌ನಲ್ಲಿ ಭಾರತಕ್ಕೆ 6 ರನ್ ಅಗತ್ಯವಿತ್ತು. ಭಾರತದ ಪರ ಕ್ರಿಸ್ನಲ್ಲಿದ್ದ ಅಮಿತ್ ಭಂಡಾರಿ, ಬ್ರೆಟ್ ಲೀ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಯತ್ನದಲ್ಲಿ ವಿಫಲರಾದರು. ಅಂತಿಮ ಎಸೆತವನ್ನು ಆಸ್ಟ್ರೇಲಿಯನ್ ಟಾರ್ಗೆಟರ್ ವೈಡ್, ಯಾರ್ಕರ್ ಲೆಂತ್ ಹಾಕಿದರು. ಹೀಗಾಗಿ ಅಮಿತ್ ಭಂಡಾರಿಗೆ ರನ್ ಕದಿಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ವಿಶ್ವ ದೈತ್ಯ ಕಾಂಗರೂಗಳು ಐದು ರನ್‌ಗಳ ಜಯ ದಾಖಲಿಸಿದರು.
Brett Lee defended 7 runs off 6 balls
Once a legend always a legend ⚡❤️@BrettLee_58 Love You???#LegendsCricketLeague #Cricket pic.twitter.com/R7NQVnXNny— ▥Cricҟ?tl๏v?r (@Sportlovers123) January 27, 2022